ಮುಂಜಾಗ್ರತೆ ತಿಳಿಸದೆ ಮಾರ್ಗ ಬದಲಿಸಿದ, ಖಾಸಗಿ ಬಸ್ ಪ್ರಯಾಣಿಕರ ಪರದಾಟ…!!!

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ

*ದಿನಾಂಕ 24 .2 .2021. ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಕಾನಹೊಸಹಳ್ಳಿ* ಈ ದಿನ ದಾವಣಗೆರೆಯಿಂದ ಜಗಳೂರು ಮಾರ್ಗವಾಗಿ ಕಾನಹೊಸಹಳ್ಳಿ ಸಿದ್ದಾಪುರ ಚಿಕ್ಕಜೋಗಿಹಳ್ಳಿ ಮುಖಾಂತರ ಬೊಮ್ಮಘಟ್ಟ ಕ್ಕೆ ಹೋಗುವ ಬಸವೇಶ್ವರ ಖಾಸಗಿ ವಾಹನವು ಸಿದ್ದಾಪುರಕ್ಕೆ ಹೋಗದೆ ರಾಷ್ಟ್ರೀಯ ಹೆದ್ದಾರಿ 50ರ ಇಮಡಪುರ ಮಾರ್ಗವಾಗಿ ಚಿಕ್ಕಜೋಗಿಹಳ್ಳಿ ಗೆ ಹೋಗಿದ್ದರಿಂದ ಸಿದ್ದಾಪುರಕ್ಕೆ ಹೋಗುವ ಪ್ರಯಾಣಿಕರಿಗೆ ಸಂಜೆ ಸಮಯ 6:00,6:30 ನಿಮಿಷ ವಾದ್ದರಿಂದ ಶಾಲೆ ವಿದ್ಯಾರ್ಥಿಗಳಿಗೂ ಹಾಗೂ ಪ್ರಯಾಣಿಕರಿಗೂ ಬಹಳ ತೊಂದರೆಯಾಯಿತು.

ಈ ದಿನ ಕೂಡ್ಲಿಗಿಗೆ ಮುರಾರ್ಜಿ ದೇಸಾಯಿ ವಸತಿ ಶಾಲೆಯ ಪರೀಕ್ಷೆ ಬರೆಯಲು ವಿದ್ಯಾರ್ಥಿಗಳಿಗೆ ಹೋಗಿದ್ದರಿಂದ ಇಂದು ಬಹಳ ತೊಂದರೆಯಾಯಿತು ಇದರಿಂದ ಯಾವದೇ ವಿಚಾರವಾಗಲಿ ಖಾಸಗಿ ವಾಹನದ ಮಾಲೀಕರು ವಾಹನ ಬರಲು ತೊಂದರೆಯಾದಲ್ಲಿ ಮುಂಜಾಗ್ರತಾ ಕ್ರಮವಾಗಿ ಸಂಬಂಧಪಟ್ಟ ಬಸ್ಸಿನ ಏಜೆಂಟರಿಗೆ ಪ್ರಯಾಣಿಕರ ಗಮನಕ್ಕೆ ತರಲು ತಿಳಿ ಹೇಳಬೇಕಾಗಿ ಬಸ್ಸಿಗೆ ಹೋಗುವ ಪ್ರಯಾಣಿಕರು ಮನವಿ ಮಾಡಿದರು ಈ ಒಂದು ಸಂದರ್ಭದಲ್ಲಿ ಕಾನಹೊಸಹಳ್ಳಿ ಸಾರ್ವಜನಿಕರು ಸಿದ್ದಾಪುರಕ್ಕೆ ಹಾಗೂ ಸಿದ್ದಾಪುರದ ಭೂವಿ ಹಟ್ಟಿಗೆ ಹೋಗುವ ಪ್ರಯಾಣಿಕರು ಉಪಸ್ಥಿತರಿದ್ದರು..

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *