ಜುಮ್ಮೊಬನಹಳ್ಳಿ ಗ್ರಾಮದೇವತೆ ಮಲಿಯಮ್ಮ ದೇವಿಯ ಜಾತ್ರೆ ವಿಜೃಂಭಣೆಯಿಂದ ನಡೆಯಿತು…!!!

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ

 

*ದಿನಾಂಕ5.2.2021 ಬಳ್ಳಾರಿ ಜಿಲ್ಲಾ ಕೂಡ್ಲಿಗಿ ತಾಲೂಕು ಜಮ್ಮೋಬನಹಳ್ಳಿ ಗ್ರಾಮ*
ತಾಲೂಕಿನ ಜುಮ್ಮೋಬನಹಳ್ಳಿ ಗ್ರಾಮದಲ್ಲಿ ಪ್ರತಿವರ್ಷದಂತೆ ಜುಮ್ಮೋಬನಹಳ್ಳಿ ಗ್ರಾಮದ ಗ್ರಾಮದೇವತೆ ಶ್ರೀ ಮಲಿಯಮ್ಮ ದೇವಿಯ ಜಾತ್ರಾ ಮಹೋತ್ಸವ ಮೂರು ದಿನಗಳ ಕಾಲ ಸಕಲ ವಾದ್ಯ ಮೇಳಗಳಿಂದ ಭಕ್ತಿ ಭಾವಗಳಿಂದ ವಿಜೃಂಭಣೆಯಿಂದ ನಡೆಯಿತು, ಪ್ರತಿವರ್ಷವೂ ದೇವತೆಯ ಹೂವಿನಹಾರ ಮತ್ತು ಪಟದ ಹಾರದ ಹರಾಜು ಪ್ರಕ್ರಿಯೆ ನಡೆಯುತ್ತಿತ್ತು ಈ ದೇವತೆಯ ಹೂಮಾಲೆಯನ್ನು ಶ್ರೀಮತಿ ಶ್ರೀ ಲಕ್ಷ್ಮೀದೇವಿ ದಿವಂಗತ ಕೆ ಚಂದ್ರಪ್ಪ ಪೋಲಿಸ್ ಇನ್ಸ್ಪೆಕ್ಟರ್ ಓಬಳಾಪುರ ಗ್ರಾಮದವರಿಗೆ 2020 ರಲ್ಲಿ ಇವರಿಗೆ ರೂ.25000 ಹಾರಾಜು ಆಗಿತ್ತು ಆದ್ದರಿಂದ ಇಪ್ಪತ್ತೈದು ಸಾವಿರ ರೂಪಾಯಿ ಹಣವನ್ನು ಮತ್ತು 51 ಕೆಜಿ ಹೂಮಾಲೆಯನ್ನು ಮಲಿಯಮ್ಮದೇವಿಗೆ ಅರ್ಪಿಸಿದರು.

ನಂತರ ಈ ವರ್ಷವೂ ಕೂಡ ಹೂವಿನ ಹಾರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಿ 25 ಸಾವಿರ ರೂಪಾಯಿಗಳಿಗೆ ಮತ್ತೊಮ್ಮೆ ಹೂವಿನ ಹಾರವನ್ನು ಪಡೆದರು ಮೂರು ದಿನಗಳ ಕಾಲ ಯಾವುದೇ ಅಹಿತಕರ ಘಟನೆಗಳು ನಡಯದಂತೆ ಸುತ್ತಮುತ್ತಲಿನ ಹಳ್ಳಿಗಳ ಭಕ್ತಾದಿಗಳ ಸಮೂಹದಲ್ಲಿ ಶಾಂತರೀತಿಯಿಂದ ನಡೆಯಿತು ಈ ಜಾತ್ರಾ ಮಹೋತ್ಸವ ದಲ್ಲಿ ಸಕಲ ಭಕ್ತಾದಿಗಳು ಮುಖಂಡರು ಊರಿನ ದೈವಸ್ಥರು ಸಾರ್ವಜನಿಕರು ಭಾಗವಹಿಸಿದ್ದರು ಕಾನಹೊಸಹಳ್ಳಿ ಪೊಲೀಸ್ ಠಾಣೆ ಸಿಬ್ಬಂದಿ ವರ್ಗದವರು ಜಾತ್ರಾ ಮಹೋತ್ಸವಕ್ಕೆ ಬಂದೋಬಸ್ತ್ ನೀಡಿದ್ದರು…

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *