ಕೂಡ್ಲಿಗಿ : ಮಹಾನೀಯರೆಲ್ಲರೂ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು – ಅಬ್ದುಲ್ ರಹೆಮಾನ್-ವಿಜಯನಗರ ಜಿಲ್ಲೆ ಕೂಡ್ಲಿಗಿ : ದೇಶ ಕಂಡ ಹಾಗೂ ನಾಡು ಕಂಡ ಮಾಹಾನಾಯಕರು , ಮಹಾನೀಯರು ಮಹಾತ್ಮರೆಲ್ಲರೂ ಹೋರಾಟಗಾರರು , ಸಾಹಿತಿಗಳು , ಸಾಧಕರೆಲ್ಲರೂ. ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿರುವ ವಿದ್ಯಾರ್ಥಿಗಳಾಗಿದ್ದವರು. ದೇಶವನ್ನು ರಾಜ್ಯವನ್ನು ಮುನ್ನಡೆಸುತ್ತಿರುವ , ನಾಯಕರು ಉನ್ನತಾಧಿಕಾರಿಗಳು ಸಾಧಕರು ಸರ್ಕಾರಿ ಶಾಲಾ ವಿದ್ಯಾರ್ಥಿಗಳಾಗಿದ್ದಾರೆ. ಕಾರಣ ಸರ್ಕಾರಿ ಶಾಲೆಗಳನ್ನು ತಾತ್ಸಾರ ಮಾಡಬಾರದು ಅಸಡ್ಡೆ ಮಾಡಬಾರದು , ಯಾವುದೆೇ ಕಾರಣಕ್ಕೂ ಯಾರೂ ಕೂಡ ಲಘುಯವಾಗಿ ಪರಿಗಣಿಸಬಾರದೆಂದು. ಸಮಾಜ ಸೇವೆಕರು ಸ್ನೇಹಿತರ ಬಳಗದ ಅಧ್ಯಕ್ಷರಾದ , ಬಿ. ಅಬ್ದುಲ್ ರಹೆಮಾನ್ ರವರು ಹೇಳಿದರು. ಅವರು ಪಟ್ಟಣದ ಶ್ರೀಸೊಲ್ಲಮ್ಮ ಮಂದಿರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ. ಕೂಡ್ಲಿಗಿ ಸಾಮಾಜಿಕ ಪರಿಶೋಧನೆ ನಿರ್ದೇಶನಲಯ ಬೆಂಗಳೂರು , ಶಾಲಾ ಮತ್ತು ಶಿಕ್ಷಣ ಸಂರಕ್ಷಣ ಇಲಾಖೆ ಬೆಂಗಳೂರು. ಸಮಗ್ರ ಶಿಕ್ಷಣ ಅಭಿಯಾನ ಕರ್ನಾಟಕ ಸಾಮಾಜಿಕ ಪರಿಶೋಧನೆ , ಮತ್ತು ಶಾಲಾ ಪೋಷಕರ ಸಭೆಯಲ್ಲಿ ಮಾತನಾಡಿದರು. ತಾಲೂಕು ಪಂಚಾಯಿತಿ ಕಾರ್ಯಕ್ರಮದ ವ್ಯವಸ್ಥಾಪಕರಾದ ಶ್ಯಾಮ್ , ಹಾಗೂ ಸಿದ್ದರಾಮೇಶ್ವರ. ಪ್ರಭಾರಿ ಮುಖ್ಯ ಗುರುಗಳಾದ ಮಲ್ಲಮ್ಮ, ಪತ್ರಕರ್ತರು ಹಾಗೂ ಎಸ್ ಡಿ ಎಂ ಸಿ ಅಧ್ಯಕ್ಷರಾದ ಟಿ. ಭಾಗ್ಯ , ಸಿಆರ್‌ಪಿ ಶೇಖರಪ್ಪ ಮಾತನಾಡಿದರು. ವಿದ್ಯಾರ್ಥಿಗಳ ಪೋಷಕರಾದ ಪ್ರಹ್ಲಾದ , ಗೀತಾ , ಬಸವರಾಜ್, ಹನುಮಂತ ಸೌಭಾಗ್ಯ ಸೇರಿದಂತೆ. ಶಾಲೆಯ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರು , ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ವರದಿ, ವಿ.ಜಿ.ವೃಷಭೇಂದ್ರ ಕೂಡ್ಲಿಗಿ
