ತಾಯಕನಹಳ್ಳಿ ಗ್ರಾಮ ಗುರು- ಶಿಷ್ಯ ಪರಂಪರೆಯನ್ನು ಎತ್ತಿ ತೋರುತ್ತಿದೆ : ಡಾ.ಶ್ರೀನಿವಾಸ್ ಎನ್ ಟಿ
ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಡಾll ಶ್ರೀನಿವಾಸ್ ಎನ್ ಟಿ ರವರು ದಿನಾಂಕ 26/6/ 2025 ರಂದು ತಾಯಕನಹಳ್ಳಿ ಗ್ರಾಮದ ಬೆಟ್ಟದ ಹೂವು ಸೇವಾ ಸಂಸ್ಥೆ ಹಾಗೂ ಹಳೆ ವಿದ್ಯಾರ್ಥಿಗಳ ಸಂಘದ ವತಿಯಿಂದ ಆಯೋಜಿಸಿರುವ ಗುರುವಂದನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಗುರು- ಶಿಷ್ಯರ ಸಂಬಂಧ ಸಮಾಜದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸುತ್ತಾರೆ. ತಾಯಕನಹಳ್ಳಿ ಗ್ರಾಮದಲ್ಲಿ ನಡೆಯುವ ಗುರು ವಂದನಾ ಕಾರ್ಯಕ್ರಮವು ಶಿಕ್ಷಕರನ್ನು ಗೌರವಿಸುವ ಮತ್ತು ಅವರ ಸೇವೆಯನ್ನು ಗುರುತಿಸುವ ಒಂದು ಮಾರ್ಗ ವಾಗಿದೆ. ಈ ಊರಿನ ಜನರು ಗ್ರಾಮದ ಹೆಸರೇ ಹೇಳುವಂತೆ ತಾಯಿ ಹೃದಯತೆಯನ್ನು ಹೊಂದಿದವರು. ಆದರೆ ಸಮಾಜವನ್ನು ಸರಿ ದಾರಿಯಲ್ಲಿ ಇಡಬೇಕಾದರೆ ಗುರುವಿನ ಮಾರ್ಗದರ್ಶನ ಅವಶ್ಯಕವಾಗಿದೆ. ನಾನು ಕೂಡ ದೇಶದ ಅತಿದೊಡ್ಡ ವೈದ್ಯಕೀಯ ಶಿಕ್ಷಣ ಸಂಸ್ಥೆಯಲ್ಲಿ ( ದೆಹಲಿ)ವಿದ್ಯಾಭ್ಯಾಸ ಕಲಿತಿದ್ದೇನೆ ಎಂದರೆ ಗುರುಗಳು ನೀಡಿದ ಜ್ಞಾನ ಮತ್ತು ಮಾರ್ಗದರ್ಶನದಿಂದ ಎಂದರು. ಈ ಸಂದರ್ಭದಲ್ಲಿ ಶಿಕ್ಷಕ ವೃಂದದವರು ಹಾಗೂ ಗ್ರಾಮ ಪಂಚಾಯತಿ ಅಧ್ಯಕ್ಷರು,ಸದಸ್ಯರುಗಳು & ಹಳೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು…
ವರದಿ. ಎಂ, ಬಸವರಾಜ್, ಕಕ್ಕುಪ್ಪೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030