ಕೂಡ್ಲಿಗಿ : ಸಕಲ ಜೀವರಾಶಿಗಳಿಗೆ ಲೇಸಾಗಲಿ , ಸಕಾಲಕ್ಕೆ ಸಾಕಷ್ಟು ಮಳೆ ಹಾಗೂ ಬೆಳೆ ಕರುಣಿಸೆಂದು – ಅಲ್ಹಾನಲ್ಲಿ ಪ್ರಾರ್ಥನೆ- ವಿಜಯನಗರ ಜಿಲ್ಲೆ ಕೂಡ್ಲಿಗಿ : ಪಟ್ಟಣ ಸೇರಿದಂತೆ ತಾಲೂಕಿನೆಲ್ಲೆಡೆಗಳಲ್ಲಿ , ಮುಸಲ್ಮಾನ್ ಸಮುದಾಯದವರು. ಬಕ್ರೀದ್ ಹಬ್ಬವನ್ನು ಸೌಹಾರ್ಧತೆಯಿಂದ , ಹಾಗೂ ಬಹು ಸಂಭ್ರಮದಿಂದ ಆಚರಿಸಿದರು. ಪಟ್ಟಣದ ಹೊರ ವಲಯದಲ್ಲಿರುವ , ಬೃಹತ್ ಸಾಮೂಹಿಕ ಪ್ರಾರ್ಥನಾ ಮಂದಿರದಲ್ಲಿ. ಪಟ್ಟಣದ ಸಮಸ್ತ ಮುಸಲ್ಮಾನ ಭಾಂದರು , ಬಕ್ರೀದ್ ಹಬ್ಬದ ಪ್ರಯುಕ್ತ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಅವರು ಜಗತ್ತಿನಲ್ಲಿರುವ ಸಕಲ ಜೀವರಾಶಿಗಳಿಗೆ ಲೇಸಾಗಲಿ , ಸಕಾಲಕ್ಕೆ ಸಾಕಷ್ಟು ಮಳೆ ಇಳೆಗೆ ಬಂದು ಧರಣಿಯಲ್ಲಿ ಸಾಕಷ್ಟು ಬೆಳೆ ಬೆಳೆಯುಂತಾಗಲೆಂದು. ಸಮುದಾಯದ ಧರ್ಮಗುರುಗಳ ನೇತೃತ್ವದಲ್ಲಿ , ಸಾಮಾಜದ ಸಕಲರೆಲ್ಲರೂ ಸೇರಿ ಶ್ರದ್ಧಾ ಭಕ್ತಿಯಿಂದ ಪ್ರಾರ್ಥನೆ ಸಲ್ಲಿಸಿದರು. ಪಟ್ಟಣದ ಅಂಚಿನಲ್ಲಿ ಎರೆಡು ಬೃಹತ್ ಮಸೀದಿಗಳಿದ್ದು , ಎರೆಡೂ ಮಸೀದಿಗಳಲ್ಲಿ ಪ್ರತ್ಯೇಕವಾಗಿ ಧರ್ಮಗುರುಗಳ ನೇತೃತ್ವದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಸಡಗರ ಸಂಭ್ರಮದಿಂದ ಬಕ್ರೀದ್ ಹಬ್ಬ ಆಚರಿಸಿದರು , ಪೊಲಿಸ್ ಇಲಾಖಾಧಿಕಾರಿಗಳು ಅಗತ್ಯ ಸಿಬ್ಬಂದಿ ನಿಯೋಜಿಸಿದ್ದರು..
ವರದಿ.ಎಂ ಬಸವರಾಜ್ ಕಕ್ಕುಪ್ಪಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030