ಮದ್ಯ ಅಕ್ರಮ ತಡೆಯೋ ಗುಂಡಿಗೆ ಪೊಲೀಸರಿಗಿದೆಯಾ.!? ಶಾಸಕರೇ ನೀವೇ ನಿಲ್ಲಿಸಿ. -ಗೆದ್ದಲಗಟ್ಟೆ ಗ್ರಾಮಸ್ಥರ ಮನವಿ…
ವಿಜಯನಗರ ಜಿಲ್ಲೆ ಕೂಡ್ಲಿಗಿ : ಮದ್ಯ ಅಕ್ರಮ ಮಾರಾಟ ತಡೆಯೋ ಗುಂಡಿಗೆ ಪೊಲೀಸರಿಗಿಲ್ಲ , ಶಾಸಕರೇ ನೀವೆೇ ಮನಸ್ಸು ಮಾಡಿ ನಿಲ್ಲಿಸಬೇಕು ಎಂದು ಗೆದ್ದಲಗಟ್ಟೆ ಗ್ರಾಮಸ್ಥರು ಮನವಿ ಮಾಡಿದ್ದಾರೆ. ಅವರು ಕಳೆದ ಹದಿನೈದು ದಿನಗಳ ಹಿಂದೆ ಶಾಸಕರು ಗ್ರಾಮಕ್ಕೆ ಭೇಟಿ ನೀಡಿದಾಗ , ತಮ್ಮ ಗ್ರಾಮದಲ್ಲಿ ಸುಮಾರು 15ಜನರು ಮದ್ಯ ಅಕ್ರಮ ಮಾರಾಟಮಾಡುತ್ತಿದ್ದಾರೆ. ಇದರಿಂದಾಗಿ ಭಾಗಶಃ ಗ್ರಾಮಕ್ಕೆ ಗ್ರಾಮವೇ ಮದ್ಯದ ವ್ಯಸನಕ್ಕೀಡಾಗುತ್ತಿದೆ , ಗೆದ್ದಲಗಟ್ಟೆ ಗ್ರಾಮದಲ್ಲಿ ನೆಮ್ಮದಿ ಗೆದ್ದಲು ಹಿಡಿದಿದೆ ಎಂದು ಶಾಸಕರಲ್ಲಿ ಅಳಲು ತೋಡಿಕೊಂಡಿದ್ದಾರೆ. *ಶಾಸಕರು ಮನಸ್ಸು ಮಾಡಬೇಕಿದೆ*- ಶಾಸಕರು ಪರಿಶೀಲಿಸಿ ಸಂಬಂಧಿಸಿದಂತೆ ಇಲಾಖೆಗಳ ಅಧಿಕಾರಿಗಳಿಗೆ , ಅಗತ್ಯ ಕ್ರಮಕ್ಕೆ ಸೂಚಿಸುವುದಾಗಿ ಭರವಸೆ ನೀಡಿದ್ದಾರೆ. ಆದರೆ ಅದು ಈವರೆಗೂ ಕಾರ್ಯರೂಪಕ್ಕೆ ಬಂದಿಲ್ಲ , ಗ್ರಾಮದಲ್ಲಿ ಅಕ್ರಮ ಮಾರಾಟ ಸಾಗಾಟ ಎಗ್ಗಿಲ್ಲದಂತೆ ಸಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ. ಶಾಸಕರ ತವರೂರಿಂದ ಕಿಲೋ ಮೀಟರ್ ಅಂತರದಲ್ಲಿರುವ ತಮ್ಮ ಅಳಲನ್ನು , ಅವರು ಮನಸ್ಸು ಮಾಡಿದರೆ ದೊಡ್ಡದೇನಲ್ಲ ಅವರು ಮನಸ್ಸು ಮಾಡಿ ನಿಲ್ಲಿಸಲಿ ಎಂದು ಹೋರಾಟಗಾರರು ಮನವಿ ಮಾಡಿದ್ದಾರೆ. *ಆಡಾ ಹುಡುಗರು ಕುಡಿಯಕತ್ಯಾವು*-ಅವರು ಸಂಬಂಧಿಸಿದಂತೆ ಹೇಳಿಕೆ ನೀಡಿದ್ದು , ಮದ್ಯ ಅಕ್ರಮ ಮಾರಾಟದಿಂದಾಗಿ , ಆಡಾ ಮಕ್ಕಳು ಮದ್ಯದ ವ್ಯಸನಕ್ಕೆ ತುತ್ತಾಗುತ್ತಿವೆ ಎಂದು ಪೋಷಕರು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ. ಕಳೆದ ಮೂರು ವರ್ಷಗಳಲ್ಲಿ ಮದ್ಯ ವ್ಯಸನಕ್ಕೆ , ಇಬ್ಬರು ಯುವಕರು ಬಲಿಯಾಗಿದ್ದಾರೆ. ಹೀಗಾಗಿ ಆಟ ಆಡೋ ಮಕ್ಕಳು ಮದ್ಯ ವ್ಯಸನಿಗಳಾಗಿದ್ದಾರೆ. ಗ್ರಾಮದಲ್ಲಿನ ಬಹುತೇಕ ಯುವಕರು ಚಿಗುರುಮೀಸೆಯ ತುಂಟರೂ ಕೂಡ , ಮದ್ಯದ ವ್ಯಸನಕ್ಕೆ ಶರಣಾಗಿದ್ದು ತಮ್ಮ ಕರಳು ಕಿತ್ತು ಬರುತ್ತಿವೆ ಎಂದು ಮಹಿಳೆಯರು ಅಳಲು ತೋಡಿಕೊಂಡಿದ್ದಾರೆ. ಗ್ರಾಮದ ಸುಮಾರು ನೂರರಿಂದ ನೂರೈವತ್ತು ಜನರು , ನಿತ್ಯ ಮದ್ಯದ ನಶೆಯಲ್ಲಿ ತೇಲುತಿರುತ್ತಾರೆಂದರೆ ಊಹಿಸಲಸಾಧ್ಯದ ಸಂಗತಿಯಾಗಿದೆ. ಈ ಅಕ್ರಮಕೋರರು ಗ್ರಾಮದಲ್ಲಿ , ಇನ್ನೆಷ್ಟು ಯುವಕರನ್ನು ಬಲಿ ಪಡೆಯಲು ಹವಣಿಸುತ್ತಿದ್ದಾರೋ..ಆ ದೇವರೇ ಬಲ್ಲ ಎಂದು , ನೊಂದ ಮಹಿಳೆಯರು ತಮ್ಮ ದುಖಃ ಹೊರಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮದ್ಯ ಅಕ್ರಮ ಮಾರಾಟ ಸಾಗಾಟ ಕೂಡಲೇ ನಿಲ್ಲಬೇಕಿದೆ ಎಂದು , ಅವರು ಈ ಮೂಲಕ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ. ನಾಲ್ಕು ನೂರು ಕುಟುಂಬಗಳಿರುವ ತಮ್ಮ ಗ್ರಾಮದಲ್ಲಿ , ಹಲವು ವರ್ಷಗಳಿಂದಲೂ ಹತ್ತರಿಂದ ಹದಿನೈದು ಜನರು ತಮ್ಮ ಮನೆಗಳಲ್ಲಿ , ಮದ್ಯವನ್ನು ಹಗಲಿರುಳು ಎನ್ನದೆ. ವರ್ಷಪೂರ್ತಿ ರಾಜಾರೋಷವಾಗಿ ಮಾರಾಟ ಮಾಡುತ್ತಿದ್ದಾರೆಂದು , ಗ್ರಾಮದ ಹೋರಾಟಗಾರರು ದೂರಿದ್ದಾರೆ. *ಗುಡೇಕೋಟೆ ಪೊಲೀಸರಿಗೆ ಗುಂಡಿಗೆ ಇಲ್ಲ.!?*- ಗುಡೇಕೋಟೆ ಪೊಲೀಸ್ ಠಾಣೆಗೆ ತೆರಳಿ , ಅಕ್ರಮ ತಡೆಯುವಂತೆ ಮನವಿ ಮಾಡಲಾಗಿದೆ. ಆಗ ಮಾತ್ರ ಗ್ರಾಮದ ಇಬ್ಬರು ಅಕ್ರಮ ಕೋರರನ್ನು ಹಿಡಿದೊಯ್ಯುದು , ಮರುದಿನವೇ ಕೈಬಿಟ್ಟು ಕಳುಹಿಸಿದ್ದಾರೆ. ಕೂಡ್ಲಿಗಿಯ ಬ್ರಾಂದಿ ಶಾಪಿನವನು ಪೋಲೀಸರಿಗೆ ರೊಕ್ಕ ಕಟ್ಟಿ , ಆ ಇಬ್ಬರನ್ನೂ ಹೊರಕಾ ಕರಂದು ಬಂದಾನ. ಎಲ್ಲಾ ರೊಕ್ಕದ ಮಹಿಮೆಯಾಗಿದೆ ಎನ್ನುತ್ತಾರೆ , ಗೆದ್ದಲಗಟ್ಟೆ ಗ್ರಾಮದ ಮಹಿಳಾ ಹೋರಾಟಗಾರರು. ಅಂಗಾಗಿ ಪೊಲೀಸರಿಗೆ ಅಭಕಾರಿ ಇಲಾಖೆಯವರಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ. ಏಕೆಂದರೆ ಅಕ್ರಮಕೋರ ವೈನ್ ಶಾಪ ಮಾಲೀಕರಿಂದ , ಅಧಿಕಾರಿಗಳು ಕಾಸು ಪಡೆದಿರುತ್ತಾರೆ. ಇದು ಕಠೋರವಾದ ಸತ್ಯ ಸಂಗತಿಯಾಗಿದೆ , ಹಾಗಾಗಿ ಅವರಿಗೆ ನಿಲ್ಲಿಸುವ ಗುಂಡಿಗೆ ಇಲ್ಲ ಎಂದು ಮಹಿಳಾ ಹೋರಾಟಗಾರರು ದೂರಿದ್ದಾರೆ. *ಮೂರ್ಖ ಮುಖಂಡರದ್ದೇ ದರ್ಭಾರು*- ಮದ್ಯ ಅಕ್ರಮ ಮಾರಾಟ ಸಾಗಾಟ ಮಾಡೋ ಅಕ್ರಮಕೋರರಿಗೆ , ತಾವುಗ್ರಾಮದಲ್ಲಿನ ಮುಖಂಡರೆಂದು ಹೇಳಿಕೊಳ್ಳುವ , ಕೆಲ ಮೂರ್ಖ ಮುಖಂಡರು ಸಾಥ್ ನೀಡುತ್ತಿದ್ದಾರೆಂದು ಮಹಿಳೆಯರು ಆರೋಪಿಸಿದ್ದಾರೆ. ವೈನ್ ಶಾಪಿನವನು ಬಿಸಾಕೋ ಬಿಸ್ಕತ್ತಿಗೆ , ವೈನ್ ಶಾಪ್ ಮಾಲೀಕನ ಚಪ್ಪಲಿ ನೆಕ್ಕುತ್ತಿದ್ದಾರೆಂದು ಹೋರಾಟಗಾರರು ಬಣ್ಣಿಸಿದ್ದಾರೆ. ಹೀಗಾಗಿ ನಮ್ಮ ಗ್ರಾಮದ ಬೇಲಿಯೇ ಎದ್ದು ಹೊಲ ಮೇಯುತ್ತಿದ್ದು , ಅಕ್ರಮಕೋರರನ್ನು ಸದೆಬಡಿಯುವ ದೈರ್ಯವಂತರಿಲ್ಲದಂತಾಗಿದೆ ಎಂದು ಮಹಿಳೆಯರು ಆಕ್ರೋಶ ವ್ಯೆಕ್ತಪಡಿಸಿದ್ದಾರೆ. *ನೀರು ಸಿಗಲ್ಲ- ಬ್ರಾಂದಿ ಸಿಗುತ್ತೆ*- ನೀರಿನ ದಾಹ ಉಂಟಾಗಿ ಗ್ರಾಮದ ಅಂಗಡಿಗಳಲ್ಲಿ ನೀರು ಕೇಳಿದರೆ , ಕುಡಿಯೋಕೆ ನೀರು ಸಿಗೋದು ಅನುಮಾನ.!?, ಬ್ರಾಂದಿ ಮಾತ್ರ ಸಿಕ್ಕೇ ಸಿಗುತ್ತೆ ಎನ್ನುತ್ತಾರೆ ಗ್ರಾಮದ ಮಹಿಳೆಯರು. ಗ್ರಾಮದೆಲ್ಲೆಡೆಯ ಕೆಲವು ಮನೆಗಳಲ್ಲಿ ಹಾಗೂ ಕೆಲವು ಅಂಗಡಿಗಳಲ್ಲಿನ ಪ್ರಿಡ್ಜ್ ಗಳಲ್ಲಿ , ಹಾಲು ಮೊಸರು ಕೂಲ್ ಡ್ರಿಂಕ್ಸ್ ಗಳಿರಲ್ಲ. ಮದ್ಯದ ತುಂಬಿರುವ ಬಾಟಲಗಳೇ ಇರುತ್ತವೆ , ಮದ್ಯವ್ಯಸನಿಗೆ ಹಣ ಬೇಕಷ್ಟೆ. ಅದನ್ನು ಪಡೆಯಲು ಮನೆಯಲ್ಲಿ ಗಲಾಟೆ ನಡೆಯುತ್ತವೆ. ಇದರಿಂದಾಗಿ ಮನೆಗಳ ಲ್ಲಿ ಕಲಹಗಳು ಸೃಷ್ಠಿಯಾಗುತ್ತಿವೆ , ನಿತ್ಯವೂ ಕೌಟುಂಬಿ ಕಲಹದಿಂದಾಗಿ ಕುಟುಂಬ ಬೀದಿ ರಂಪಾಟಕ್ಕೀಡಾಗುತ್ತಿದ್ದು. ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ , ತಾವು ನಿತ್ಯ ಶೋಷಣೆಗೀಡಾಗುತ್ತಿರುವುದಾಗಿ ಮಹಿಳೆಯರು ಅಲವತ್ತುಕೊಂಡಿದ್ದಾರೆ. ಮದ್ಯ ಅಕ್ರಮ ಮಾರಾಟ ಸಾಗಾಟದಿಂದಾಗಿ , ಎಲ್ಲಾ ಬಗೆಯಲ್ಲೂ ನಷ್ಟಕ್ಕೆ ಗುರಿಯಾಗುತ್ತಿದ್ದು. ಗ್ರಾಮದಲ್ಲಿ ಕಲಹ ಹೊಡೆದಾಟ ಬಡಿದಾಟಗಳು ಹೆಚ್ಚಾಗುತ್ತಿದ್ದು, ಗ್ರಾಮದಲ್ಲಿ ಶಾಂತಿ ಕಾಣದಾಗಿದೆ. ಗ್ರಾಮದ ಬಹುತೇಕ ಮನೆಗಳಲ್ಲಿ ಬಹುದಿನಗಳಿಂದ , ನೆಮ್ಮದಿ ನಾಶವಾಗಿದೆ ಎಂದು ಗ್ರಾಮಸ್ಥರು ಸಂಕಟ ಹೊರಹಾಕಿದ್ದಾರೆ. *ಹೋರಾಟದ ಹಾದಿ.. ಅಛಲ*-ಮದ್ಯ ಅಕ್ರಮ ತಡೆಯಲು ತಾವು ಹೋರಾಟದ ಹಾದಿ ಹಿಡಿದಿದ್ದು , ಖಾಯಂ ಆಗಿ ಮದ್ಯ ಅಕ್ರಮ ಮಾರಾಟ ಸಾಗಾಟ ನಿಲ್ಲೋ ವರೆಗು ಹೋರಾಟ ಅಛಲವಾಗಿದ್ದು. ಅಕ್ರಮದ ವಿರುದ್ಧ ತಮ್ಮ ಹೋರಾಟ ನಿಲ್ಲಿಸಲ್ಲ ಎಂದು , ತಾವೆಲ್ಲರೂ ಸಂಕಲ್ಪ ತೊಟ್ಟಿರುವುದಾಗಿ ಹೋರಾಟಗಾರರು ತಿಳಿಸಿದ್ದಾರೆ. ಅವರು ಕೂಡ್ಲಿಗಿ ಪಟ್ಟಣದ CITU ಕಚೇರಿಗೆ ಆಗಮಿಸಿ , ಮುಖಂಡ ಹೋರಾಟಗಾರರ ನೆರವು ಕೋರಿದ್ದಾರೆ. ಕಾರ್ಮಿಕ ಮುಖಂಡ ಗುನ್ನಳ್ಳಿ ರಾಘವೇಂದ್ರ ರವರ ನೇತೃತ್ವದಲ್ಲಿ , ಅಕ್ರಮ ಮದ್ಯ ಮಾರಾಟ ಸಾಗಾಟ ನಿಲ್ಲಿಸುವಂತೆ ಕ್ರಮಕ್ಕೆ ಒತ್ತಾಯಿಸಿ. ಕೂಡ್ಲಿಗಿ DYSP ಮಲ್ಲೇಶ ದೊಡ್ಡಮನೆಯವರಿಗೆ , ಹಾಗೂ ಕೂಡ್ಲಿಗಿ ತಹಶಿಲ್ದಾರರಾದ ವಿ.ಕೆ.ನೇತ್ರಾವತಿಯವರಿಗೆ. ಮತ್ತು ಕೂಡ್ಲಿಗಿ ಅಭಕಾರಿ ಅಧಿಕಾರಿಗೆ , ತಮ್ಮ ಹಕ್ಕೊತ್ತಾಯ ಪತ್ರ ನೀಡಿದ್ದಾರೆ. *ಮದ್ಯ ಅಕ್ರಮ ತಡೆಯದಿದ್ದಲ್ಲಿ ಹೋರಾಟ- ಎಚ್ಚರಿಕೆ* -ಮದ್ಯ ಅಕ್ರಮ ಮಾರಾಟ ಸಾಗಟದ ವಿರುದ್ಧ , ಅಗತ್ಯ ಕ್ರಮ ಜರುಗಿಸದೇ ನಿರ್ಲಕ್ಷ್ಯ ತೋರಿದ್ದಲ್ಲಿ. ಇಲಾಖೆಗಳ ವಿರುದ್ಧ ಎಲ್ಲಾ ಹಂತದ ಹೋರಾಟಗಳಿಗೆ , ತಾವು ಸದಾ ಸಿದ್ಧರಾಗಿರುವುದಾಗಿ ಕಾರ್ಮಿಕ ಮುಖಂಡ ಗುನ್ನಳ್ಳಿ ರಾಘವೇಂದ್ರ ಎಚ್ಚರಿಸಿದ್ದಾರೆ. ಸಂಬಂಧಿಸಿದ ಇಲಾಖೆಗಳು ಅಕ್ರಮ ಗಳನ್ನು , ತುರ್ತಾಗಿ ತಡೆಯಬೇಕು ಗಂಭೀರವಾಗಿ ಪರಿಗಣಿಸದೇ ನಿರ್ಲಕ್ಷ್ಯ ತೋರಿದ್ದಲ್ಲಿ. ಇಲಾಖೆ ಕಚೇರಿಗಳಿಗೆ ಬೀಗ ಹಾಕಿ , ಧರಣಿ ಸತ್ಯಾಗ್ರಹ ನಡೆಸಲಾಗುವುದೆಂದು ಅವರು ಎಚ್ಚರಿಸಿದ್ದಾರೆ. ಗೆದ್ದಲಗಟ್ಟೆ ಗ್ರಾಮದ ಮಹಿಳೆಯರು , ಮೂವತ್ತು ಹೆಚ್ಚು ಹೋರಾಟಗಾರರು , CITU ನ ಪದಾಧಿಕಾರಿಗಳು ಹಾಗೂ ಕಾರ್ಮಿಕರು ಉಪಸ್ಥಿತರಿದ್ದರು….
ವರದಿ… ವಿ.ಜಿ.ವೃಷಭೇಂದ್ರ ಕೂಡ್ಲಿಗಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030