ಕೂಡ್ಲಿಗಿ:ಸೌಹಾರ್ಧತೆ ಸಂಭ್ರಮದಿಂದ ಹೊಳಿ ಅಚರಣೆ-ವಿಜಯನಗರ ಜಿಲ್ಲೆ ಕೂಡ್ಲಿಗಿ:ಪಟ್ಟಣ ಸೇರಿದಂತೆ ವಿವಿದೆಲ್ಲೆಡೆಗಳಲ್ಲಿ, ಸೌಹಾರ್ಧತೆ ಹಾಗೂ ಬಹು ಸಂಭ್ರಮದಿಂದ ಹೋಳಿ ಆಚರಿಸಲಾಯಿತು. ಬಾಲ ಬಾಲೆಯರು ಮೊದಲ್ಗೊಂಡು, ಯುವಕ ಯುವತಿಯರು ವೃದ್ಧರಾಧಿಯಾಗಿ. ಲಿಂಗ ಭೇದ ಮರೆತು. ಪರಸ್ಪರ ವಿವಿದ ಪರಿಸರ ಸ್ನೇಹಿ ಬಣ್ಣಗಳನ್ನು, ಪ್ರತಿ ವಾತ್ಸಲ್ಯ ಭಾಂದವ್ಯದ ಬೆಸುಗೆಯಾಗಿ ಎರಚಿ ಎರಕ ಹೊಯ್ಯೋ ಮೂಲಕ, ಬಹು ಸಂಭ್ರಮದಿಂದ ಹೋಳಿ ಆಚರಿಸಿದರು. ಪಟ್ಟಣದ ಮದಕರಿ ವೃತ್ತದ ಬಳಿ ಪರಸ್ಪರ ಸಾಮೂಹಿಕ ಹೋಳಿ ಎರಚುವ, ಡಿಜೆ ಸೌಂಡ್ ಸಮೇತ, ತಮಟೆ ವಾದ್ಯ ಗಳ ತಾಳಕ್ಕೆ ಹೆಜ್ಜೆ ಹಾಕುತ್ತ. ಯುವಕರು ಪರಸ್ಪರ ಬಣ್ಣ ಎರಚಿ ಶುಭಕೋರಿದರು. ಪಟ್ಟಣದ ಮದಕರಿ ವೃತ್ತದಿಂದ ಬೃಹತ್ ಮೆರವಣಿಗೆ ಆಯೋಜಿಸಲಾಗಿತ್ತು, ಮೆರವಣಿಗೆ ಬಣ್ಣ ಎರೆಚುತ್ತಾ ಪಟ್ಟಣದ ಪ್ರಮುಖ ರಸ್ತರಗಳಲ್ಲಿ ಸಂಚರಿಸಿತು. ಮೆರವಣಿಗೆಯಲ್ಲಿ ಪಟ್ಟಣದ ಪ್ರತಿ ಗಲ್ಲಿ ಗಲ್ಲಿಯ, ನೂರಾರು ಯುವಕರು ಬೃಹತ್ ಹೋಳಿ ಮೆರವಣಿಗೆಯಲ್ಲಿ ಭಾಗಿಯಾಗಿ ಸಂಭ್ರಮಿಸಿದರು. ಪಟ್ಟಣ ಪಂಚಾಯ್ತಿ ಅಧ್ಯಕ್ಷ ಕಾವಲ್ಲಿ ಶಿವಪ್ಪನಾಯಕ ನೇತೃತ್ವದಲ್ಲಿ, ಆಯೋಜಿಸಲಾಗಿದ್ದ ಹೋಳಿ ಮೆರವಣಿಗೆಯಲ್ಲಿ ವಿವಿದ ಗಣ್ಯರು, ವಿವಿದ ಜನ ಪ್ರತಿನಿಧಿಗಳು, ವಿವಿದ ಸಂಘ ಸಂಸ್ಥೆಗಳ ಪ್ರಮುಖರು, ನೂರಾರು ಯುವಕರು ಭಾಗಿಯಾಗಿದ್ದರು. ಮಾ 14 ರಂದು ತಡ ರಾತ್ರಿ ಕಾಮದೇವನ ದಹನ ಕಾರ್ಯಕ್ರಮ ಜರುಗಿತು, ಮರುದಿನವೇ ಅಂದರೆ ಮಾ15ರಂದು ಪಟ್ಟಣದಲ್ಲಿ ಸಾಮೂಹಿಕವಾಗಿ ಬಣ್ಣ ಎರೆಚಿ ಸಂಭ್ರಮಿಸಲಾಯಿತು. ಸಂಪ್ರದಾಯದಂತೆ ಕಾಮ ದೇವರ ಪ್ರತಿಷ್ಠಾಪನೆ, ವಿವಿದ ಧಾರ್ಮಿಕ ಕೈಂ ಕರ್ಯಗಳನ್ನು ಜರುಗಿಸಲಾಯಿತು. ಮತ್ತು ಸರ್ವ ಜನಾಂಗದ ಶಾಂತಿಯ ತೋಟದಲ್ಲಿ ಅರಳುವ ಅಸಂಖ್ಯಾತ ಬಗೆಯ ಹೂಗಳಂತೆ, ಸರ್ವ ಸಮುದಾಯಗಳ ಸರ್ವ ಧರ್ಮಗಳ ಸರ್ವ ಜನಾಂಗಗಳ ಪ್ರಮುಖರು. ವಿವಿದ ಸಮಾಜಗಳ ಯುವಕರೆಲ್ಲರೂ ಒಗ್ಗೂಡಿ, ಪರಸ್ಪರ ಸೌಹಾರ್ಧತೆಯಿಂದ ಬಹು ಸಂಭ್ರಮದಿಂದ ಹೋಳಿ ಹಬ್ಬ ಆಚರಿಸಲಾಯಿತು…
ವರದಿ. ಎಂ ಬಸವರಾಜ್ ಕಕ್ಕುಪ್ಪಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030