ಕೂಡ್ಲಿಗಿ ಪಟ್ಟಣದ ನೂರಾರು ರೈತ ಕುಟುಂಬಸ್ಥರಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿ ಕೊಟ್ಟ ಎನ್ ಟಿ ಶ್ರೀನಿವಾಸ್ ಶಾಸಕರು…!!!

Listen to this article

ಕೂಡ್ಲಿಗಿ ಪಟ್ಟಣದ ನೂರಾರು ರೈತ ಕುಟುಂಬಸ್ಥರಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿ ಕೊಟ್ಟ ಎನ್ ಟಿ ಶ್ರೀನಿವಾಸ್ ಶಾಸಕರು

ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶುಕ್ರವಾರರಂದು ಕೂಡ್ಲಿಗಿ ಪಟ್ಟಣದ ನೂರಾರು ರೈತ ಮುಖಂಡರುಗಳು ನೇರೆದಿದ್ದು ,ಕಾರಣ 40 ವರ್ಷಗಳಿಂದ ಕೂಡ್ಲಿಗಿ ಪಟ್ಟಣದ ನೂರಾರು ರೈತ ಕುಟುಂಬಸ್ಥರು ಪಟ್ಟಣದಲ್ಲಿ ಹಾದು ಹೋಗಿರುವ ವಿದ್ಯುತ್ ಸಂಪರ್ಕವನ್ನು ಈಗಾಗಲೇ ಸುಮಾರು 40 ವರ್ಷಗಳಿಂದ ಪಟ್ಟಣದ ಪಕ್ಕದಲ್ಲಿ ವಿದ್ಯುತ್ತನ್ನು ಜಮೀನು ಮಾಡುವಂತಹ ರೈತರು ಉಪಯೋಗಿಸಿಕೊಂಳ್ಳುತಿದ್ದು, ಕಾರಣ ಕೂಡ್ಲಿಗಿ ಪಟ್ಟಣದ ಅನೇಕ ರೈತರು ಭೂಮಿಯನ್ನೇ ನಂಬಿ ಜೀವನವನ್ನು ಸಾಗಿಸುತ್ತಾ ಇವತ್ತಿಗೂ ಮುಂದುವರಿಸಿದ್ದಾರೆ.
ಆದ್ದರಿಂದ ಇಷ್ಟು ವರ್ಷಗಳ ಕಾಲ 4ರಿಂದ 5 ಶಾಸಕರು ಬಂದು ಹೋದರು ಅಧಿಕಾರಿಗಳು ಯಾವುದೇ ರೀತಿಯಲ್ಲಿ ರೈತರಿಗೆ ತೊಂದರೆ ಮಾಡ್ಲಿಲ್ಲ,
ಆದರೆ ಕೂಡ್ಲಿಗಿ ಪಟ್ಟಣದ ಯಾವುದೇ ರೈತರಿಗೂ ತೊಂದರೆ ಆಗದಂತೆ ಪಟ್ಟಣದಿಂದ ಸರಬರಾಜು ಆಗಿರುವಂತಹ ಬೋರ್ವೆಲ್ ಗಳಿಗೆ ವಿದ್ಯುತ್ ಸಂಪರ್ಕ ಸಮರ್ಪಕವಾಗಿ ಕೊಡುವಂತೆ ಎಲ್ಲಾ ಶಾಸಕರು ಸರ್ಕಾರದ ಅಧಿಕಾರಿಗಳಿಗೆ ಖಡಕ್ಕಾಗಿ ಹೇಳಿದ್ದರಿಂದ ಯಾವುದೇ ಅಧಿಕಾರಿಗಳು ಸಂಪರ್ಕಗಳನ್ನು ಕಡಿತಗೊಳಿ ಸಿರಲಿಲ್ಲ ಆದರೆ ಈ ಬಾರಿ ಮಾನ್ಯ ಸ್ಥಳೀಯ ಶಾಸಕರಿದ್ದರು ಅಧಿಕಾರಿ ವರ್ಗದವರು ಬೋರ್ ವೆಲ್ ಇರುವಂತಹ ರೈತರ ಸಮಸ್ಯೆಗಳನ್ನು ಶಾಸಕರ ಗಮನಕ್ಕೆ ತರದೆ ತಮ್ಮ ಕಾನೂನು ವ್ಯಾಪ್ತಿಯಲ್ಲಿ ವಿದ್ಯುತ್ ಪೂರೈಕೆ ಆಗುತ್ತಿರುವಂತಹ ವಿದ್ಯುತ್ ಕಂಬಗಳ ಲೈನ್ ಅನ್ನು ವಿದ್ಯುತ್ ಕಡಿತಗೊಳಿಸಿದ್ದಾರೆ. ಈ ವಿಷಯ ತಿಳಿದ ರೈತರು
ಶಾಸಕರಿಗೆ ತಿಳಿಯದಾಗೆ ರೈತರನ್ನು ಒಕ್ಕಲಿಸುವಂತಹ ಕೆಲಸ ಮಾಡಿದ್ದರು.

ಆದ್ದರಿಂದ ನೂರಾರು ರೈತರು ಮಾನ್ಯ ಶಾಸಕರಾದ ಎನ್ ಟಿ ಶ್ರೀನಿವಾಸ್ ಇವರನ್ನು ಕೂಡ್ಲಿಗಿ ಪ್ರವಾಸಿ ಮಂದಿರದಲ್ಲಿ ಶುಕ್ರವಾರರಂದು ರೈತರನ್ನು ಉದ್ದೇಶಿಸಿ ಶಾಸಕರು ಮಾತನಾಡುತ್ತಾ ಕೂಡ್ಲಿಗಿ ಪಟ್ಟಣದ ಜೆಸ್ಕಾಂನ ಅಧಿಕಾರಿಗಳಾದ ಏಕಾಂತ್ ಇವರ ಸಮ್ಮುಖದಲ್ಲಿ ಸಂಬಂಧ ಪಟ್ಟಂತಹ ಮೇಲಾಧಿಕಾರಿಗಳಿಗೆ ದೂರವಾಣಿ ಮೂಲಕ ಕರೆ ಮಾಡಿ.
ಕೂಡ್ಲಿಗಿ ಪಟ್ಟಣದ ರೈತರ ಸಮಸ್ಯೆಯನ್ನು ಸಂಪೂರ್ಣವಾಗಿ ಮನವರಿಕೆ ಆಗುವಂತೆ ತಿಳಿಸಿ ಇಲ್ಲಿನ ರೈತರು ಪಟ್ಟಣದ ವಿದ್ಯುತ್ ಸಂಪರ್ಕವನ್ನು ಪಡೆದುಕೊಂಡಿರುವ ಎಲ್ಲಾ ರೈತರು ಬೇಸಿಗೆ ಸಮಯದಲ್ಲಿ ಬೋರ್ವೆಲ್ ಗಳ ನೀರನ್ನು ನಂಬಿಕೊಂಡು ಬೆಳೆಯ ಫಲದಿಂದ ಜೀವನ ಸಾಗಿಸುತ್ತಿದ್ದಾರೆ.
ಆದ್ದರಿಂದ ನಮ್ಮ ಕೂಡ್ಲಿಗಿ ಪಟ್ಟಣದ ಎಲ್ಲಾ ರೈತರನ್ನು ಯಾವುದೇ ಕಾರಣಕ್ಕೂ ಒಕ್ಕಲಿಮಿಸಬಾರದು ಹಾಗೂ ರೈತರಿಗೆ ಸಮರ್ಪಕವಾಗಿ ಈ ಇಂದಿನ ದಿನದಿಂದಲೂ ಸರ್ವರಾಜು ಆಗುತ್ತಿರುವಂತಹ ವಿದ್ಯುತ್ತನ್ನು ಹಾಯ ರೈತರಿಗೆ ಯಥವತ್ತಾಗಿ ವಿದ್ಯುತ್ ಕಲ್ಪಿಸಿ ಕೊಡಬೇಕೆಂದು ದೂರವಾಣಿಯ ಮೂಲಕ ಸಂಬಂಧಪಟ್ಟಂತಹ ಮೇಲಾಧಿಕಾರಿಗಳಿಗೆ ತಿಳಿಸಿ. ರೈತರಿಗೆ ಬೋರ್ವೆಲ್ ಗಳೇ ಜೀವನಾಡಿಯಾಗಿರುವ ವಿದ್ಯುತ್ ಸಂಪರ್ಕವನ್ನು ಕಲ್ಪಿಸಿ ಕೊಡುವಂತೆ ಕೂಡ್ಲಿಗಿ ಸಹಾಯಕ ಅಭಿಯಂತರರು ಜೆಸ್ಕಾಂ ಇಲಾಖೆ ಅಧಿಕಾರಿಗಳಿಗೆ ತಾವುಗಳು ಸೂಚನೆ ನೀಡಬೇಕೆಂದು ದೂರವಾಣಿಯ ಮೂಲಕ ತಿಳಿಸಿದರು.
ಹಾಗೆ ಕೂಡ್ಲಿಗಿ ತಾಲೂಕಿನ ಚೆಸ್ಕಾಂ ಅಧಿಕಾರಿಯದ ಏಕಾಂತ್ ಇವರಿಗೆ ನಾನು ಈ ತಾಲೂಕಿನ ಶಾಸಕರಾಗಿರುವ ವರೆಗೂ ಯಾವುದೇ ರೀತಿಯ ವಿದ್ಯುತ್ ಸಂಪರ್ಕ ಯಾವುದೇ ಕಾರಣಕ್ಕೂ ಕಡಿತವಾಗಬಾರದು ರೈತರಿಗೆ ತೊಂದರೆ ಆಗದಂತೆ ಕಾರ್ಯ ನಿರ್ವಹಿಸಬೇಕು ಎಂದು ಕಟ್ಟುನಿಟ್ಟಾಗಿ ಸೂಚನೆ ತಿಳಿಸಿದರು.
ಹಾಗೆ ಈ ಸಂದರ್ಭದಲ್ಲಿ ಕೂಡ್ಲಿಗಿ ಪಟ್ಟಣದ ಪ್ರಮುಖರು ಶಾಸಕರ ಮಾತನ್ನು ಕೇಳಿ ಎಲ್ಲಾ ರೈತರು ನಿಟ್ಟಿಸಿರು ಬಿಡುತ್ತಿದ್ದ ರೈತರ ಸಮಸ್ಯೆಯನ್ನು ಬಗೆಹರಿಸಿ ಎಲ್ಲಾ ರೈತರಿಗೆ ಧೈರ್ಯ ತುಂಬಿ ನಾನಿದ್ದೇನೆ ಎಂಬ ಬಹುದೊಡ್ಡ ಭರವಸೆಯ ಮಾತನ್ನು ಹೇಳಿ ಕಳಿಸಿದ್ದರು.
ಈ ಸಂದರ್ಭದಲ್ಲಿ ಈ ಸಂದರ್ಭದಲ್ಲಿ ಮುಖಂಡರುಗಳಾದ ಪಟ್ಟಣ ಪಂಚಾಯತಿ ಸದಸ್ಯರಾದ ಬಾಸು ನಾಯಕ್, ಡಿ ಅಜ್ಜಯ, ನಿರ್ಕಲಪ್ಪ ಅಜ್ಜಯ, ಶಿವಾನಂದಯ್ಯ,ಅಂಜಿ ಪುಟ್ಟಪ್ಪ, ಮೆಕ್ಕೆಲರ್ ಸಣ್ಣದುರ್ಗಪ್ಪ, ಗುಪ್ಪಲ್ ರಾಘವೇಂದ್ರ, ಅಂಜಿನಿ, ನಿರ್ಕಲಪ್ಪರ ನಿಂಗಣ್ಣ, ಭೀಮಪ್ಪ, ಗೊಂಬೆ ಮರಳಿಸಿದ್ದಪ್ಪ, ಕಡೆಮನಿ ಎರ್ರಿಸ್ವಾಮಿ , ಪೂಜಾರಿ ಶೇಖರ್ ನಾಯಕ್ ಜೆ . ದೊಡ್ಡಕರಿಯಪ್ಪ, ದೇವ್ಲ ನಾಯ್ಕ್ ,ವೆಂಕಟೇಶ್ ನಾಯ್ಕ್ ,ಗೋವಿಂದಪ್ಪ, ಶಂಕರ್ ನಾಯ್ಕ್ ,ರವಿ ನಾಯ್ಕ್, ಗೌಡ ಚಿತ್ತಪ್ಪ, ಕೃಷ್ಣಪ್ಪ ಗುರು ನಾಯ್ಕ್, ಶ್ರೀನಿವಾಸ್, ಇನ್ನು ನೂರಾರು ರೈತ ಮುಖಂಡರುಗಳು ಈ ಸಂದರ್ಭದಲ್ಲಿ ಭಾಗವಹಿಸಿದ್ದರು,
ಶೀಘ್ರದಲ್ಲಿ ವಿದ್ಯುತ್ ಸಂಪರ್ಕ ಕೊಡುವಂತೆ ಮಾನ್ಯ ಶಾಸಕರು ಅಧಿಕಾರಿಗಳಿಗೆ ಸೂಚನೆ ನೀಡಿದರು…

ವರದಿ:- ಅನಿಲ್ ಕುಮಾರ್ ಹುಲಿಕುಂಟೆ.

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend