ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರಾದ ಡಾ. ಶ್ರೀನಿವಾಸ್ ಎನ್ ಟಿ ರವರು ದಿನಾಂಕ 12.01.2025 ರಂದು ಗೆದ್ದಲಗಟ್ಟೆ(ಕಾಮಯ್ಯನ ಹಟ್ಟಿ) ಗ್ರಾಮದ ಮಂಜುನಾಥ ತಂದೆ ಮರಳು ಸಿದ್ದಪ್ಪ ರವರು ಈ ಹಿಂದೆ ಕೃಷಿ ಚಟುವಟಿಕೆ ಮುಗಿಸಿ ಮನೆಗೆ ಹಿಂದಿರುಗುವಾಗ ಬೈಕ್ ಅಪಘಾತದಲ್ಲಿ ಮೃತಪಟ್ಟಿರುತ್ತಾನೆ. ಸದರಿಯವರು ಬಡ ಕುಟುಂಬದವರಾಗಿದ್ದು ಹಾಗೂ ಮನೆಯ ಮಗನನ್ನು ಕಳೆದುಕೊಂಡ ಕುಟುಂಬಸ್ಥರು ಸಂಕಷ್ಟದಲ್ಲಿ ಇರುವುದರಿಂದ ಮೃತರ ಕುಟುಂಬಕ್ಕೆ ವಿಶೇಷ ಪ್ರಕರಣದಡಿ ಮುಖ್ಯಮಂತ್ರಿ ಪರಿಹಾರ ನಿಧಿ ಮಂಜೂರು ಮಾಡುವಂತೆ ಡಾ. ಶ್ರೀನಿವಾಸ್ ಎನ್ ಟಿ. ರವರು ಮಾನ್ಯ ಮುಖ್ಯಮಂತ್ರಿಗಳನ್ನು ಕೋರಿರುವ ಹಿನ್ನೆಲೆಯಲ್ಲಿ ಘಟನೆಗೆ ವಿಷಾದ ವ್ಯಕ್ತಪಡಿಸಿ ಮೃತರ ಕುಟುಂಬಕ್ಕೆ 2 ಲಕ್ಷ ರೂಪಾಯಿ ಮಂಜೂರು ಮಾಡಿರುತ್ತಾರೆ. ಆದ್ದರಿಂದ ಮಾನ್ಯ ಶಾಸಕರು ಮೃತರ ಮನೆಗೆ ಭೇಟಿ ನೀಡಿ ಮಂಜೂರಾತಿ ಆದೇಶ ಪ್ರತಿಯನ್ನು ನೀಡಿದರು.
ಈ ಸಂದರ್ಭದಲ್ಲಿ ಎಸ್ ವೆಂಕಟೇಶ್ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರು, ಅಜ್ಜನಗೌಡ, ರಮೇಶ್ ಗೆದ್ದಲಗಟ್ಟೆ, ಹಾಗೂ ಮುಖಂಡರು ಉಪಸ್ಥಿತರಿದ್ದರು…
ವರದಿ. ಎಂ, ಬಸವರಾಜ್ ಕಕ್ಕುಪ್ಪೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030