ಕೂಡ್ಲಿಗಿ ವಿಧಾನ ಸಭಾ ಕ್ಷೇತ್ರದ ಮಾನ್ಯಶಾಸಕರಾದ ಡಾ. ಶ್ರೀನಿವಾಸ್. ಎನ್. ಟಿ. ಅವರು ಹೊಸವರ್ಷದ ಪ್ರಯುಕ್ತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯಕ್ಕೆ ಭೇಟಿ…!!!

ಕೂಡ್ಲಿಗಿ ವಿಧಾನ ಸಭಾ ಕ್ಷೇತ್ರದ ಮಾನ್ಯಶಾಸಕರಾದ ಡಾ. ಶ್ರೀನಿವಾಸ್. ಎನ್. ಟಿ. ಅವರು ಪಟ್ಟಣದ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯಕ್ಕೆ ದಿನಾಂಕ;01-01-2025 ರಂದು ಹೊಸ ವರ್ಷದ ಪ್ರಯುಕ್ತ ಭೇಟಿ ನೀಡಿ ಅಧ್ಯಕ್ಷತೆಯನ್ನು ವಹಿಸಿ, ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ,

ಜಾಗತೀಕರಣದ 21 ನೇ ಶತಮಾನದಲ್ಲಿ ಜನರು ಒತ್ತಡ ಮತ್ತು ದುಃಖದಲ್ಲಿ ಬದುಕುತ್ತಿರುವುದನ್ನು ಕಾಣುತ್ತೇವೆ. ಶಾಂತಿ ಮತ್ತು ಶಿಸ್ತಿನಿಂದ ಜೀವಿಸಲು ಇಂತಹ ಆಧ್ಯಾತ್ಮಿಕ ಸಂಸ್ಥೆಯ ಸನ್ನಿಧಿಯಲ್ಲಿ ನಾವು ಮೊರೆ ಹೋಗುಬೇಕು. ಹಾಗೆಯೇ, ನಾವು ಬಡತನದಿಂದ ಹೊರ ಬರಲು ನಮ್ಮ ಜೀವನದಲ್ಲಿ ತನ್ನದೇ ಆದ ರೀತಿಯ ಕೌಶಲ್ಯಗಳನ್ನು ಅಳವಡಿಸಿಕೊಂಡು ಬದುಕುವ ಕಲೆಯನ್ನು ಮೈಗೂಡಿಸಿಕೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ಮೌಂಟ್ ಅಬುವಿನ ಸಂಪನ್ಮೂಲ ವ್ಯಕ್ತಿ -ಧನಂಜಯ್, ವಿಶ್ವವಿದ್ಯಾಲಯ ಅಕ್ಕಾವ್ರು, ಶಶಿಕಲಾ ಮತ್ತು ಚಂದ್ರಕಲಾ, ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ. ಟಿ. ಕೊತ್ಲಮ್ಮ, ಚಿದಾನಂದ ಗೌಡ್ರು, ಗೌಡ್ರು ಸುರೇಶ, ನಾಗರಾಜ, ದೊಡ್ಡಪ್ಪ, ಸಿರಿಯಣ್ಣ, ಗೋಪಾಲಣ್ಣ, ನಾಗರಾಜ ಮೇಷ್ಟ್ರು, ಆನಂದ ಬಾಬು, ಹನುಮಂತಪ್ಪ ಮೇಷ್ಟ್ರು ಗೌಡ್ರು ಕೊಟ್ರೇಶ, ಅಂಜಿನಪ್ಪ, ಹಾಗೂ ದೈವಸ್ಥರು – ಭಕ್ತರು ಉಪಸ್ಥಿತರಿದ್ದರು…

ವರದಿ. ಅನಿಲ್ ಕುಮಾರ ಹುಲಿಕುಂಟೆ

Leave a Reply

Your email address will not be published. Required fields are marked *