ಕೂಡ್ಲಿಗಿ:ಮಾಜಿ ಪ್ರಧಾನಿ ದಿ॥ಡಾ॥ಮನಮೋಹನ್ ಸಿಂಗ್ ರವರಿಗೆ ಶ್ರದ್ಧಾಂಜಲಿ- ವಿಜಯನಗರ ಜಿಲ್ಲೆ ಕೂಡ್ಲಿಗಿ: ಡಿ27ರಂದು ಬೆಳಿಗ್ಗೆ ಪಟ್ಟಣದ ಹಲವೆಡೆ ಮತ್ತು ತಾಲೂಕಿನ ವಿವಿದೆಡೆಗಳಲ್ಲಿ. ಡಿ26ರಂದು ನಿಧನರಾದ ಮಾಜಿ ಪ್ರಧಾನಿಗಳು, ಹಾಗೂ ಭಾರತೀಯ ಅರ್ಥಶಾಸ್ತ್ರಜ್ಞರಾದ. ದಿ” ಡಾ॥ ಮನಮೋಹನ್ ಸಿಂಗ್ ರವರಿಗೆ, ನುಡಿನಮನ ಹಾಗೂ ಶ್ರದ್ಧಾಂಜಲಿ ಅರ್ಪಿಸಲಾಯಿತು. ಪಟ್ಟಣದ ಮದಕರಿ ವೃತ್ತದಲ್ಲಿ ಕಾಂಗ್ರೇಸ್ ಪಕ್ಷದ ಮುಖಂಡರು ಸೇರಿದಂತೆ, ವಿವಿದ ಪಕ್ಷಗಳ ಮುಖಂಡರು ವಿವಿದ ಜನಪ್ರತಿನಿಧಿಗಳು ಹಿರಿಯನಾಗರೀಕರು. ದಿವಂಗತ ಮಾಜಿ ಪ್ರಧಾನಿಗಳಾದ ದಿ”ಡಾ॥ ಮನಮೋಹನ್ ಸಿಂಗ್ ರವರಿಗೆ, ನುಡಿನಮನ ಹಾಗೂ ಶ್ರದ್ಧಾಂಜಲಿ ಅರ್ಪಿಸಿದರು. ಮನಮೋಹನ ಸಿಂಗ್ ರವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು, ನಂತರ ಅವರ ಆತ್ಮಕ್ಕೆ ಶಾಂತಿ ಕೋರಿ ಒಂದು ನಿಮಿಷ ಮೌನಾಚರಿಸಲಾಯಿತು. ತದನಂತರ ಮನಮೋಹನಸಿಂಗ್ ರವರು, ಭಾರತ ದೇಶಕ್ಕೆ ಹಾಗೂ ಪ್ರಪಂಚದ ವಿವಿದ ದೇಶಗಳಿಗೆ ನೀಡಿದ ಕೊಡುಗೆಗಳು. ಮತ್ತು ಅವರು ಪ್ರಧಾನಿಗಳಾದಾಗ ಜಾರಿತಂದ, ಜನಪರ ಯೋಜನೆ ಅವರ ವ್ಯಕ್ತಿತ್ವದ ಬಗ್ಗೆ ಮುಖಂಡರು ಮತನಾಡಿ ನುಡಿ ನಮನ ಸಲ್ಲಿಸಿದರು. ಕೂಡ್ಲಿಗಿ ಪಟ್ಟಣ ಪಂಚಾಯ್ತಿ ಅಧ್ಯಕ್ಷರಾದ, ಕಾವಲ್ಲಿ ಶಿವಪ್ಪನಾಯಕ. ಕಾಂಗ್ರೇಸ್ ಮುಖಂಡರಾದ ಚಲುವಾದಿ ಉಮೇಶ, ಗುರುಸಿದ್ದನ ಗೌಡ ಮಾತನಾಡಿ ನುಡಿನಮನ ಸಲ್ಲಿಸಿದರು. ಮಹಿಳಾ ಮುಖಂಡರಾದ ಜಿಂಕಲ್ ನಾಗಮಣಿ, ಉದಯ ಜನ್ನು, ಸಿ.ಬಿ.ಸಿದ್ದಪ್ಪ. ಪಪಂ ಸ್ಥಾಯಿಸಮಿತಿ ಅಧ್ಯಕ್ಷ ಸೈಯದ್ ಶುಕೂರ್, ಮಾದಳ್ಳಿ ನಜೀರ್, ಇಂಜಿನಿಯರ್ ಶಫಿವುಲ್ಲಾ’ ಹಡಗಲಿ ವೀರಭದ್ರಪ್ಪ ಸೇರಿದಂತೆ. ಕಾಂಗ್ರೇಸ್ ಪಕ್ಷದ ಯುವ ಹಾಗೂ ಹಿರಿಯರು, ಪಟ್ಟಣ ಪಂಚಾಯ್ತಿ ಸದಸ್ಯರು. ವಿವಿದ ಜನಪ್ರತಿನಿಧಿಗಳು, ಕಾಂಗ್ರೇಸ್ ಪಕ್ಷದ ಪಟ್ಟಣ ಹಾಗೂ ತಾಲೂಕಿನ ವಿವಿದೆಡೆಯ, ಪದಾಧಿಕಾರಿಗಳು ಸದಸ್ಯರು ಕಾರ್ಯಕರ್ತರು. ಹಿರಿಯ ನಾಗರೀಕರು ಗಣ್ಯರು, ದಲಿತ ಅಲ್ಪಸಂಖ್ಯಾತರು ಸೇರಿದಂತೆ, ವಿವಿದ ಸಮುದಾಯಗಳ ಪ್ರಮುಖರು ಭಾಗಿಯಾಗಿದ್ದರು….
ವರದಿ. ಎಂ, ಬಸವರಾಜ್ ಕಕ್ಕುಪ್ಪೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030