ಶಿಕ್ಷಣವೆಂಬ ವ್ಯವಹಾರ,ಖಾಸಗಿ ಶಾಲೆಗಳ ಹಾವಳಿ
ಆತ್ಮೀಯರೇ ಎಲ್ಲಾ ತಿಳಿದಿರುವಂತೆ ಖಾಸಗಿ ಶಾಲೆಗಳಲ್ಲಿ ಎಲ್ಲಡೆ ನಡೆಯುತ್ತಿದೆ ಹಣ ವಸೂಲಾತಿ ದಂಧೆ, ಹೌದು ಗೆಳೆಯರೇ
ಶಿಕ್ಷಣ ನೀಡುವ ಬದಲು, ಹಣಗಳಿಕೆಗೆ ಪೈಪೋಟಿಗೆ ಇಳಿದಿವೆ ಖಾಸಗಿ ಶಾಲೆಗಳು, ಖಾಸಗಿ ಶಾಲೆಗಳ ಸುಲಿಗೆ ಗೊತ್ತಿದ್ದರೂ ಕೈಕಟ್ಟಿ ಕುಳಿತಿವೆ ಎಲ್ಲಾ ಪಕ್ಷದ ಸರ್ಕಾರಗಳು ಬಹುತೇಕ ದೊಡ್ಡ ದೊಡ್ಡ ಖಾಸಗಿ ಶಾಲಾ ಕಾಲೇಜುಗಳು ರಾಜಕಾರಣಿಗಳಾವು ಖಾಸಗಿ ಶಾಲೆಗಳ “ಹಣ ವಸೂಲಿ” ತಡೆಯುವವರು ಯಾರು? ಎಂಬ ಪ್ರಶ್ನೆ ಎಲ್ಲರನ್ನು ಕಾಡುತ್ತಿದೆ.
ಇನ್ನು ರೈತರು ಮಧ್ಯಮ ವರ್ಗದವರು ಸರ್ಕಾರಿ ಶಾಲೆಗಳಲ್ಲಿ ಓದಿಸಿ ಇಂತಹ ಕಾಂಪಿಟೇಶನ್ ಕಾಲದಲ್ಲಿ ನಮ್ಮ ಮಕ್ಕಳನ್ನು ಹೇಗೆ ಸರ್ಕಾರಿ ನೌಕರಿ ಕೊಡಿಸಲು ಸಾಧ್ಯ ಎಂದು ಸಾಲ ಸೂಲ ಮಾಡಿ ಮಕ್ಕಳನ್ನು ಖಾಸಗೀ ಶಾಲೆಗೆ ತಳ್ಳುತ್ತಿದ್ದಾರೆ
ಮೇ ಜೂನ್ ತಿಂಗಳಲ್ಲಿ ಶಾಲೆಗಳು ಆರಂಭವಾಗುವ ಮುನ್ನವೇ ಅಲಲ್ಲಿ ಅಡ್ಮೀಶನ್ ಕುರಿತಾದ ಫ್ಲೆಕ್ಸ್ ಪಾಂಪ್ಲೆಟ್ ಹಾಕಿಸುತ್ತ ಇವೆ. ಖಾಸಗಿ ಶಾಲಾ ಶಿಕ್ಷಕರುನ್ನು ರಾಜಕೀಯ ಪ್ರಚಾರದಂತೆ ಮನೆ ಮನೆಗೆ ಭೇಟಿ ಮಾಡಿ ಶಾಲೆಗೆ ಅಡ್ಮೀಶನ್ ಮಾಡಿಸುವಂತೆ ಕರಪತ್ರ ಕೂಡಾ ಹಂಚ್ತಾ ಇದ್ದಾರೆ. ಇನ್ನೂ ಪೋಷಕರು ನನ್ನ ಮಗು ಯಾವ ಶಾಲಾಗೆ ಹೋಗಬೇಕು? ಯಾವ ಶಾಲೆ ಸಿಬಿಎಸ್‌ಸಿ, ಯಾವ ಶಾಲೆ ಐಸಿಎಸ್‌ಸಿ, ಸ್ಮಾರ್ಟ್ ಕ್ಲಾಸ್ ಸೌಲಭ್ಯ ಇದೆಯಾ? ಆ ಶಾಲೆಯಲ್ಲಿ ಡೊನೇಶ್‌ನ್ ಜಾಸ್ತಿಯಂತೆ, ಡೊನೇಶನ್ ಜಾಸ್ತಿ ತೊಗೊಳ್ತಾರೆ ಅಂದ್ರೆ ಆ ಶಾಲೆ ಸೂಪರ್ ಆಗಿರುತ್ತೆ ಅಂತೆಲ್ಲ ರಾತ್ರಿಯೆಲ್ಲ ಯೋಚಿಸಿ, ವಿಚಾರಿಸಿ ಅಡ್ಮೀಶನ್‌ಗೆ ರೆಡಿಯಾಗ್ತಾರೆ.
ಈನ್ನೂ ಖಾಸಗಿ ಶಾಲೆಗಳಿಗೆ ಬೇಕಿರುದು ಕೂಡಾ ಇದೆ? ಪೋಷಕರನ್ನು ನೈಸ್ ಮಾಡ್ತಾ ಸುಲಿಗೆಗೆ ಇಳಿಯುತ್ತಿವೆ. ಅರೇ ಇದೇನಿದು? ಮಕ್ಕಳು ಕಲಿಯೋದಕ್ಕೆ ಕೊಡ್ತಿರೋ ಫೀಸ್‌ಗೆ ಸುಲಿಗೆ ಅಂತಾ ಹೇಳ್ತಿದ್ದೀರಾ ಅಂತಾ? ಹುಬ್ಬೇರಸ್ತಾ ಇದ್ದೀರಾ? ಹೌದು ಖಾಸಗಿ ಶಾಲೆಗಳು ಪೋಷಕರಿಂದ ಬೇಕಾ ಬಿಟ್ಟ ಹಣವನ್ನು ಸುಲಿಗೆ ಮಾಡುತ್ತಿವೆ.
ಕೆಲ ಖಾಸಗಿ ಶಾಲೆಗಳಲ್ಲಿ ಒಂದು ವರ್ಷದ ಮಗುವಿನಿಂದ ಅಡ್ಮಿಶನ್ ಆರಂಭ ಮಾಡ್ತಾರೆ. ಆ ಮಗುವಿಗೆ ಬರೋಬ್ಬರಿ 50 ಸಾವಿರ ರೂ ಹಣ ನಗದಿ ಮಾಡಿದ್ದಾರೆ. ಸರಿಯಾಗಿ ನಿಂತುಕೊಳ್ಳಲು, ಕುಳಿತುಕೊಳ್ಳಲು ಬಾರದ ಆ ಮಗುವಿನ ತಲೆಗೆ ಅಕ್ಷರಗಳಾದರೂ ಹೇಗೆ ಹೋಗ್ತಾವೆ ಅಂತಾ ಪೋಷಕರು ಒಂದು ಕ್ಷಣ ಯೋಚಿಸಬೇಕಿದೆ. ಎಲ್‌ಕೆಜಿ 65ಸಾವಿರ ರೂ, 1 ನೇ ತರಗತಿಗೆ ಲಕ್ಷ ರೂ, ಪಿಯುಸಿಗೆ 2 ಲಕ್ಷ ರೂ ಹೀಗೆ ಸಂತೆಯಲ್ಲಿ ಮಾರುವ ತರಕಾರಿಗಳಂತೆ ಹಣ ಫಿಕ್ಸ್ ಮಾಡಿ ಪೋಷಕರಿಂದ ಖಾಸಗಿ ಶಾಲೆಗಳು ವಸೂಲಿ ಮಾಡುತ್ತಿವೆ.
ಹಾಗಾದ್ರೆ ಖಾಸಗಿ ಶಾಲೆಗಳಗೆ ಎಷ್ಟು ಫೀಜ್ ಇದೆ ಅಂತಾ ನಿಮ್ಮ ತಲೆಯಲ್ಲಿ ಈಗ ಪ್ರಶ್ನೆ ಓಡ್ತಾ ಇರುತ್ತೆ. ಹೌದು, ಖಾಸಗಿ ಶಾಲೆಗಳು ಮನಸೋ ಇಚ್ಚೇ ಫಿಜ್ ಪಡೆಯುವಂತಿಲ್ಲ. ಯಾವ ಶಾಲೆ ಎಷ್ಟು ಹಣ ಪಡಿಬೇಕು ಎಂಬ ಲೆಕ್ಕಾಚಾರವನ್ನು ಸರಕಾರವೇ ಹಾಕಿ ಕೊಡುತ್ತೆ. ಆ ಲೆಕ್ಕಾಚಾರ ಹೀಗೆದೆ…. ಒಂದು ಖಾಸಗಿ ಶಾಲೆ ಇಷ್ಟೆ ಶುಲ್ಕವನ್ನು ಪಡೆಯಬೇಕು ಎಂಬ ನಿಯಮ ಇದೆ. ಇದನ್ನು ಕ್ಷೇತ್ರ ಶಿಕ್ಷಣಾಧಿಕಾರಿ (ಬಿಇಒ) ನಿರ್ಧರಿಸುತ್ತಾರೆ. ವಿದ್ಯಾರ್ಥಿಗಳ ಸಂಖ್ಯೆ, ಖರ್ಚುವೆಚ್ಚ ಸಿಬ್ಬಂದಿಗಳ ವೇತನ, ಹೀಗೆ ಎಲ್ಲವನ್ನೂ ಲೆಕ್ಕ ಹಾಕಿ ಶುಲ್ಕ ನಿಗದಿ ಮಾಡ್ತಾರೆ.
ಆದರೆ ಎಲ್ಲಾ ನಿಯಮಗಳನ್ನು ಗಾಳಿಗೆ ತುರುತ್ತಾರೆ ಇದಕ್ಕೆಲ್ಲ ಕೆಲವೊಬ್ಬರು ಸರ್ಕಾರಿ ಶಿಕ್ಷಕರು ಕೂಡ ಲಕ್ಷಾಂತರ ರೂಪಾಯಿ ಸಂಬಳ ಪಡೆಯುತ್ತಿದ್ದು ಮಕ್ಕಳಿಗೆ ಸರಿಯಾಗಿ ಕಲಿಸದಿದ್ದು ಕೂಡ ಖಾಸಗಿ ಶಾಲೆಯವರಿಗೆ ವರವಾಗುತ್ತದೆ
ಇಷ್ಟೆಲ್ಲ ಲಕ್ಷಾಂತರ ಗಟ್ಟಲೆ ಫೀಸ್ ವಸೂಲಿ ಮಾಡುವ ಖಾಸಗಿ ಶಾಲೆಯ ಮಾಲೀಕರು ಎಂಟು ತಾಸು ದುಡಿಯುವ ಖಾಸಗಿ ಶಿಕ್ಷಕರಿಗೆ ನೀಡುವ ಸಂಬಳ ಕೇವಲ ಎಂಟು ಹತ್ತು ಸಾವಿರ ರೂಪಾಯಿ ಆ ಶಿಕ್ಷಕರು ತಮ್ಮ ಕುಟುಂಬವನ್ನಾದರೂ ನಿರ್ವಹಿಸುವುದು ಹೇಗೆ?
ಆದಷ್ಟು ಸರ್ಕಾರಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ಸೇರಿಸಿ ಸರ್ಕಾರಿ ಶಾಲೆಯನ್ನು ಮುಚ್ಚದಿರುವಂತೆ ನೋಡಿಕೊಳ್ಳಿ…
ವರದಿ. ಎಂ. ಬಸವರಾಜ್ ಕಕ್ಕುಪ್ಪೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030