ಕೂಡ್ಲಿಗಿ:ರಾಷ್ಟ್ರೀಯ ಜಂತು ಹುಳುಗಳ ನಿವಾರಣೆ ಕಾರ್ಯಕ್ರಮ-ವಿಜಯನಗರ ಜಿಲ್ಲೆ ಕೂಡ್ಲಿಗಿ: ಪಟ್ಟಣದ ಹಿರೇಮಠ ಪ್ರೌಢಶಾಲೆಯಲ್ಲಿ ಡಿ9ರಂದು, ಸಾರ್ವಜನಿಕ ಆಸ್ಪತ್ರೆ ಸಹಯೋಗದಲ್ಲಿ. ಮಕ್ಕಳಲ್ಲಿ ಜಂತು ಹುಳುಗಳ ನಿವಾರಣೆ ಕ್ರಮ, ಜಾಗ್ರತೆ ಕಾರ್ಯಕ್ರಮ ಜರುಗಿತು. ತಾಲೂಕು ವೈದ್ಯಾಧಿಕಾರಿ ಎಸ್.ಪಿ. ಪ್ರದೀಪ್ ಕುಮಾರ್ ಮಾತನಾಡಿ ಒಂದರಿಂದ 19 ವರ್ಷದ ಎಲ್ಲಾ ಮಕ್ಕಳ ದೈಹಿಕ, ಹಾಗೂ ಮಾನಸಿಕ ಸದೃಢ ಬೆಳವಣಿಗೆಗೆ. ಅಪೌಷ್ಟಿಕತೆ ನಿವಾರಿಸಲು ರಕ್ತಹೀನತೆಯನ್ನು ತಡೆಗಟ್ಟಲು, ಜಂತುಹುಳು ಮಾತ್ರೆಗಳನ್ನು ಎಲ್ಲಾ ಶಾಲಾ ಕಾಲೇಜುಗಳಲ್ಲಿ ಉಚಿತವಾಗಿ ವಿತರಿಸಲಾಗುತ್ತದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲೆಯ ಶಿಕ್ಷಕರಾದ, ಆರ್.ಎಸ್.ವೀರೇಶ ಮಾತನಾಡಿ, ಮಗುವಿನ ಆರೋಗ್ಯ, ಹಾಗೂ ಸರ್ವತೋಮುಖ ಬೆಳವಣಿಗೆಗೆ. ಜಂತುಹುಳು ನಿವಾರಣೆ ಮಾತ್ರೆಗಳು ಸಹಕಾರಿಯಾಗಿದ್ದು, ಸರ್ಕಾರ ಈ ಮೂಲಕ ಮಕ್ಕಳಿಗೆ ಶಿಕ್ಷಣದ ಜೊತೆಗೆ, ಆರೋಗ್ಯ ಕುರಿತು ಕಾಳಜಿ ವಹಿಸಿದೆ ಎಂದರು. ವಿಜಯನಗರ ಜಿಲ್ಲಾ ದಂತ ಪ್ಲೋರಸಿಸ್ ಅಧಿಕಾರಿ ಆನಂದ್. ವೈದ್ಯರಾದ ನೇತ್ರಾವತಿ, ಹಾಗೂ ಕೂಡ್ಲಿಗಿ RBSK ವೈದ್ಯಾಧಿಕಾರಿ ವಿದ್ಯಾವತಿ. RKSK ಆಪ್ತ ಸಮಾಲೋಚಕ ಓಬಣ್ಣ, ಆಶಾ ಕಾರ್ಯಕರ್ತರಾದ ದೀಪ, ಪದ್ಮ, ಸಾವಿತ್ರಿ ಭಾಗವಹಿಸಿದ್ದರು…
ವರದಿ. ಎಂ. ಬಸವರಾಜ್ ಕಕ್ಕುಪ್ಪೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030