ಕೂಡ್ಲಿಗಿ:ಯುವಪೀಳಿಗೆ ಜವಾಬ್ದಾರಿ ಜಾಗ್ರತೆ ನಡೆ ಪಾಲಿಸಬೇಕು- ಡಾ॥ಟಿ. ಕೊತ್ಲಮ್ಮ…!!!

ಕೂಡ್ಲಿಗಿ:ಯುವಪೀಳಿಗೆ ಜವಾಬ್ದಾರಿ ಜಾಗ್ರತೆ ನಡೆ ಪಾಲಿಸಬೇಕು- ಡಾ॥ಟಿ. ಕೊತ್ಲಮ್ಮ -ವಿಜಯನಗರ ಜಿಲ್ಲೆ ಕೂಡ್ಲಿಗಿ: ಯುವಪೀಳಿಗೆ ತುಂಬಾ ಜವಾಬ್ದಾರಿ, ಹಾಗೂ ಜಾಗ್ರತೆ ನಡೆಯನ್ನು ಪಾಲಿಸಬೇಕು ಎಂದು. ಕೂಡ್ಲಿಗಿ ಸ.ಸಂ.ಪಾ.ಪೂ ಕಾಲೇಜ್ ಪ್ರಾಚಾರ್ಯರಾದ, ಡಾ॥ಟಿ.ಕೊತ್ಲಮ್ಮ ಯುವಕರಿಗೆ ಕರೆ ನೀಡಿದರು. ಅವರು ತಮ್ಮ ಕಾಲೇಜ್ ನಲ್ಲಿ ಜರುಗಿದ ವಿಶ್ವ ಏಡ್ಸ್ ದಿನಾಚರಣೆ, ಕಾರ್ಯಕ್ರಮದ ಅಧ್ಯಕ್ಷತೆ ವಹಸಿ ಮಾತನಾಡಿದರು. ಹದಿಹರಿಯದ ಯುವಪೀಳಿಗೆ ದಾರಿ ತಪ್ಪಬಾರದು, ಶೈಕ್ಷಣಿಕವಾಗಿ ಅಭಿವೃದ್ಧಿಯೊಂದಿಗೆ ಹೆತ್ತವರಿಗೆ ಕೀರ್ತಿ ತರಬೇಕು. ಹೆಚ್ಐವಿ ಏಡ್ಸ್ ವೈರಸ್ ರೋಗ ಕುರಿತು, ನೆರೆ ಹೊರೆ ಜನರಲ್ಲಿ ಜಾಗ್ರತೆ ಮೂಡಿಸಬೇಕಿದೆ ಇದು ಪ್ರಜ್ಞಾವಂತರ ಸಾಮಾಜಿಕ ಜವಾಬ್ದಾರಿಯಾಗಿದೆ. ಇತ್ತೀಚಿನ ದಿನಗಳಲ್ಲಿ ಯುವಪೀಳಿಗೆಯಲ್ಲಿಯೇ ಎಚ್ಐವಿ ಏಡ್ಸ್ ಮಾರಣಾಂತಿಕ ವೈರಸ್, ಹೆಚ್ಚಾಗಿ ಕಂಡುಬರುವುದ ಬಗ್ಗೆ ವರದಿಯಾಗಿದ್ದು ತುಂಬಾ ಕಳವಳಕಾರಿ ಆಘಾತಕಾರಿ ಸಂಗತಿಯಾಗಿದೆ. ಯುವಪೀಳಿಗೆ ಮೊದಲು ತಮ್ಮ ಶೈಕ್ಷಣಿಕ ಗುರಿ ತಲುಪಬೇಕು, ಹಾಗೂ ಸ್ವಂತ ಉದ್ಯೋಗದೊಂದಿಗೆ ಸ್ವಾವಲಂಬಿ ಜೀವನ ಸಾಧಿಸಬೇಕು. ತದನಂತರದಲ್ಲಿ ಪದ್ಧತಿ ಪ್ರಕಾರ ಗೃಹಸ್ಥಾಶ್ರಮ ಪ್ರವೇಶದೊಂದಿಗೆ, ಹೊಸ ಜೀವನ ರೂಪಿಸಿಕೊಳ್ಳಬೇಕು. ಅಲ್ಲಿಯವರಗೂ ಯುವ ಪೀಳಿಗೆ ಬ್ರಹ್ಮಚರ್ಯ ಪರಿಪಾಲನೆ ಮಾಡುವುದು, ಅವರ ಮಾನಸಿಕ ದೈಹಿಕ ಆರೋಗ್ಯ ಹಾಗೂ ಭೌದ್ಧಿಕ ನೈತಿಕತೆ ದೃಷ್ಠಿಯಲ್ಲಿ ಭವಿಷ್ಯಕ್ಕೆ ಸರ್ವೋತ್ತಮ ಎಂದರು. ತಾಲೂಕು ಆರೋಗ್ಯಾಧಿಕಾರಿ, ಪ್ರದೀಪ್ ಕುಮಾರ ಮಾತನಾಡಿ, ಹೆಚ್ಐವಿ ಏಡ್ಸ್ ಮೊದಲ ಬಾರಿಗೆ ದಕ್ಷಿಣ ಆಫ್ರಿಕಾ ಖಂಡದಲ್ಲಿ ಪತ್ತೆ ಆಯ್ತು. ಕೆಲ ವರ್ಷಗಳ ತರುವಾಯ ವಿಶ್ವದೆಲ್ಲೆಡೆ ಹಬ್ಬಿಕೊಂಡಿತು. ಹೆಚ್ಐವಿ ಏಡ್ಸ್ ವೈರಸ್ಸು ಪ್ರಮುಖವಾಗಿ , ನಾಲ್ಕು ವಿಧಾನಗಳಿಂದ ಹರಡುತ್ತದೆ. ಇವುಗಳನ್ನೇ ರಾಜ ಮಾರ್ಗ ಎಂದು ಕರೆಯಲಾಗುತ್ತದೆ, ಅಸುರಕ್ಷಿತ ಲೈಂಗಿಕ ಸಂಪರ್ಕದಿಂದ. ಶುದ್ಧೀಕರಿಸದ ಸೂಜಿಯಿಂದ, ಶುದ್ಧೀಕರಿಸದ ರಕ್ತದ ಮಾದರಿಯಿಂದ, ಹೆಚ್ಐವಿ ಸೋಂಕುಳ್ಳ ಗರ್ಭಿಣಿಯಿಂದ, ಅವಳ ಮಗುವಿಗೆ ರೋಗ ಬರುತ್ತದೆ ಎಂದು ತಿಳಿಸಿದರು. 2024-2025ರ ಸಾಲಿನಲ್ಲಿ, ಕೂಡ್ಲಿಗಿ ತಾಲೂಕಿನಲ್ಲಿ 34 ಎಚ್ಐವಿ ಏಡ್ಸ್ ಸೋಂಕಿತ ರೋಗಿಗಳು ART ಚಿಕಿತ್ಸೆ ಪಡೆಯುತ್ತಿದ್ದಾರೆ. ಸೂಕ್ತವಾದ ಚಿಕಿತ್ಸೆಯನ್ನು ತೆಗೆದುಕೊಂಡರೆ, ಸಾವಿನ ದಿನಗಳನ್ನು ಮುಂದೂಡಬಹುದು. ಆದರೆ ಸಂಪೂರ್ಣವಾಗಿ ಈ ವೈರಸ್, ಹಾಗೂ ರೋಗವನ್ನು ಗುಣಪಡಿಸಲು ಇನ್ನು ಚಿಕಿತ್ಸೆ ಬಂದಿರುವುದಿಲ್ಲ. ಆದ್ದರಿಂದ ವಿದ್ಯಾರ್ಥಿಗಳು ಯುವಜನರು, ಇದರ ಬಗ್ಗೆ ಜಾಗೃತಿ ವಹಿಸಿ ಉತ್ತಮವಾದ ಜೀವನಶೈಲಿಯಲ್ಲಿ. ಜೀವನ ರೂಲಿಸಿಕೊಂಡು, ಆರೋಗ್ಯ ಪೂರ್ಣ ಸ್ವಚ್ಛತೆ ಮತ್ತು ತರಕಾರಿ ಸೊಪ್ಪುಗಳನ್ನು ಸೇವಿಸಿ. ನಿಯಮಿತ ಆಹಾರ ಸೇವನೆ ವ್ಯಾಯಾಮದಿಂದ, ಸದೃಢ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ತಿಳಿಯಪಡಿಸಿದರು….

 

ವರದಿ. ಎಂ. ಬಸವರಾಜ್ ಕಕ್ಕುಪ್ಪೆ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *