ವಕೀಲರ ಭವನ ಕಾಮಗಾರಿಗೆ ಚಾಲನೆ ನೀಡಿದ ಶಾಸಕ -ಡಾ. ಶ್ರೀನಿವಾಸ್. ಎನ್. ಟಿ.
ಕೂಡ್ಲಿಗಿ ವಿಧಾನ ಸಭಾ ಕ್ಷೇತ್ರದ ಮಾನ್ಯಶಾಸಕರಾದ ಡಾ. ಶ್ರೀನಿವಾಸ್. ಎನ್.ಟಿ. ಅವರು ದಿ; 04-12-2024 ರಂದು ಪಟ್ಟಣದ ವಕೀಲರ ಭವನ ನೂತನ ಕಟ್ಟಡಕ್ಕೆ (150 ಲಕ್ಷಗಳು) ನ್ಯಾಯದೀಶರು, ಸಮಸ್ತ ವಕೀಲರು, ಜನಪ್ರತಿನಿಧಿಗಳು, ವಿವಿಧ ಗಣ್ಯಮಾನ್ಯರ ನೇತೃತ್ವದಲ್ಲಿ ಭೂಮಿಪೂಜೆಯನ್ನು ನೆರವೇರಿಸಿದರು.
ಶಾಸಕರು ಮಾತನಾಡುತ್ತಾ, ಸರ್ಕಾರದ ಉನ್ನತ ಮಟ್ಟದಲ್ಲಿ ವಕೀಲರ ಸಂಘದ ಜೊತೆಗೆ ಸರ್ಕಾರಕ್ಕೆ ವಕೀಲರ ಭವನ ನಿರ್ಮಾಣಕ್ಕಾಗಿ ಮಾನ್ಯ ಲೋಕೋಪಯೋಗಿ ಸಚಿವರಾದ ಶ್ರೀಯುತ ಸತೀಶ್ ಜಾರಕಿಹೊಳಿ ಅವರಿಗೆ ಮನವಿ ಸಲ್ಲಿಸಿದ ಸಂದರ್ಭದಲ್ಲಿ ಅವರು, ಅತ್ಯಂತ ಸಂತೋಷದಿಂದ ಒಪ್ಪಿ ನಮ್ಮ ಹಿಂದುಳಿದ ಕೂಡ್ಲಿಗಿ ಕ್ಷೇತ್ರದ ಬಡವರಿಗೆ ಸಾಮಾಜಿಕ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಸುಸಜ್ಜಿತವಾದ ವಕೀಲರ ಭವನ ನಿರ್ಮಿಸಲು ಸಹಕಾರಕೊಟ್ಟಿರುವುದನ್ನು ಸ್ಮರಿಸಿಕೊಂಡು ಅತ್ಯಂತ ಹೆಮ್ಮೆಯಿಂದ ನೆನಪಿಸಿಕೊಂಡು ಕೃತಜ್ಞತೆಯನ್ನು ಸಲ್ಲಿಸಿದರು.
ನಮ್ಮಲ್ಲಿ ಕಪ್ಪು ಮತ್ತು ಬಿಳೆ ಕೋಟುಗಳು ಸಮಾಜದಲ್ಲಿ ಒಂದು ನಾಣ್ಯದ ಎರಡು ಮುಖಗಳು. ವಕೀಲರು ಮತ್ತು ವೈದ್ಯರು ಸಮಾಜದಲ್ಲಿ ಬಡವರ ಪರ ನ್ಯಾಯಯುತವಾಗಿ ಕೆಲಸ ಮಾಡಿದಾಗ ಮಾತ್ರ ಕ್ಷೇತ್ರದ ಅಭಿವೃದ್ಧಿಗೆ ಸಹಕಾರ ಕೊಡಲು ಸಾಧ್ಯವಾಗುತ್ತದೆ ಎಂದೂ ಹೇಳಿದರು. ಹಾಗೆಯೇ ವಕೀಲರ ಭವನದ ಕಟ್ಟಡವು ಸುಸಜ್ಜಿತವಾದ ರೀತಿಯಲ್ಲಿ ಮತ್ತು ಗುಣಮಟ್ಟದಲ್ಲಿ ನಿರ್ಮಿಸಬೇಕು ಎಂದೂ ಗುತ್ತಿಗೆದಾರರಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಗೌರವಾನ್ವಿತ ಹಿರಿಯ ಸಿವಿಲ್ ನ್ಯಾಯದೀಶರಾದ ಶ್ರೀ ಯೋಗೀಶ ಜೆ. ಅವರು, ಗೌರವಾನ್ವಿತ ಕಿರಿಯ ಸಿವಿಲ್ ನ್ಯಾಯದೀಶರಾದ ಶ್ರೀಮತಿ ಮಹಾಲಕ್ಷ್ಮಿ, ಏ.ಜಿ.ಪಿ ಶಿವಪ್ರಸಾದ್, ಸರ್ಕಾರಿ ಅಭಿಯೋಜಕರು ಮತ್ತು ವಕೀಲರಾದ ಶಿಲ್ಪಾ , ಪಟ್ಟಣ ಪಂಚಾಯತಿ ಅಧ್ಯಕ್ಷರಾದ ಶ್ರೀ ಕಾವಲಿ ಶಿವಪ್ಪನಾಯಕ, ಮತ್ತು ಅಧಿಕಾರಿಗಳು, ಸಮಸ್ತ ವಕೀಲರು, ಕೂಡ್ಲಿಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ. ಗುರುಸಿದ್ಧನಗೌಡ, ಮುಖಂಡರಾದ ಮಾದಿಹಳ್ಳಿ ನಜೀರ್ ಸಾಬ್, ಬಣವಿಕಲ್ಲು ಯರ್ರಿಸ್ವಾಮಿ, ಚಿರತಗುಂಡು ಟೈಲರ್ ಬಸವರಾಜ, ಹಾಲಸಾಗರ ಸಣ್ಣ ತಿಪ್ಪೇಸ್ವಾಮಿ, ಜರ್ಮಲಿ ಗಂಗಣ್ಣ, ಇನ್ನೂ ಮುಂತಾದವರು ಉಪಸ್ಥಿತರಿದ್ದರು…
ವರದಿ. ಬಸವರಾಜ್, ಕಕ್ಕುಪ್ಪೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030