ಮಾದಕ ವಸ್ತುಗಳಿಂದ ದೂರ ಇರುವಂತೆ ಕರೆ ನೀಡಿದ- ಶಾಸಕ ಡಾ. ಶ್ರೀನಿವಾಸ್. ಎನ್. ಟಿ.
ಕೂಡ್ಲಿಗಿ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ವಿಜಯ ನಗರ ಜಿಲ್ಲಾ ಪೊಲೀಸ್ ಮತ್ತು ವಿಜಯ ಕರ್ನಾಟಕ ಪತ್ರಿಕೆ ಸಹಯೋಗದೊಂದಿಗೆ ಮಾದಕ ದ್ರವ್ಯ ವಸ್ತುಗಳಿಂದಾಗುವ ಪರಿಣಾಮಗಳ ಬಗ್ಗೆ ಅರಿವು ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕೂಡ್ಲಿಗಿ ವಿಧಾನ ಸಭಾ ಕ್ಷೇತ್ರದ ಮಾನ್ಯಶಾಸಕರಾದ ಡಾ. ಶ್ರೀನಿವಾಸ್. ಎನ್.ಟಿ. ಅವರು ದಿ ;03-12-2024 ರಂದು ಪಾಲ್ಗೊಂಡು ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಶಾಸಕರು ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ,
ನಾನು ಉನ್ನತ ಶಿಕ್ಷಣಕ್ಕೆ ಪ್ರವೇಶಿಸಿದ ಸಂದರ್ಭದಲ್ಲಿ ನನ್ನ ತಂದೆಯವರು ಒಂದು ಮಾತು ಹೇಳಿದರು. ನೀವು ನಿಮ್ಮ ಜೀವನದಲ್ಲಿ ಹೊಸ ಬದುಕಿಗೆ ತೆರೆದುಕೊಳ್ಳುತ್ತೀರಿ. ಒಂದು ವೇಳೆ ನೀವು ಅಡ್ಡದಾರಿ ಇಡಿದರೇ ನನ್ನ ಮಗನೇ ಅಲ್ಲ ಎಂದೂ ಹೇಳಿ ಕೈ ಬಿಡುತ್ತೇನೆ ಎಂಬ ಮಾತು ಹೇಳಿದರು. ಹೀಗಾಗಿ ನನ್ನ ತಂದೆಯವರು ಹೇಳಿದ ಮಾತನ್ನು ಕೊನೆಯ ತನಕ ಗಮನದಲ್ಲಿಟ್ಟುಕೊಂಡು ನನ್ನ ಜೀವ ಮಾನದಲ್ಲಿ ನಾನು ಒಳ್ಳೆಯ ದಾರಿಯಲ್ಲಿ ಇಲ್ಲಿ ತನಕ ಶಿಸ್ತು ಬದ್ಧ ವ್ಯಕ್ತಿಯಾಗಿ ಬಂದಿರುವೆ ಎಂದೂ ತಮ್ಮ ಬದಕಿನ ಗುಟ್ಟನ್ನು ನೆನಪಿಸಿಕೊಂಡರು.
ನಮ್ಮ ಅಕ್ಕ ಪಕ್ಕದಲ್ಲಿ ಎಂಎಬಿಬಿಎಸ್ ಓದುವ ಕೆಲವು ಪ್ರತಿಭಾವಂತರು ಮಾದಕ ವಸ್ತುಗಳಿಗೆ ಬಲಿಯಾಗಿ ತಮ್ಮ ಜೀವನ ಕಳೆದುಕೊಂಡಿರುವ ಉದಾಹರಣೆಗಳನ್ನು ನಾನು ಕಣ್ಣಾರೇ ನೋಡಿರುವೆ. ಆ ಹಿನ್ನೆಲೆಯಲ್ಲಿ ಭವಿಷ್ಯದ ದೃಷ್ಟಿಯಿಂದ ಪೋಷಕರು ತಮ್ಮ ಮಕ್ಕಳ ಮೇಲೆ ನಿಗಾವಹಿಸಬೇಕು ಎಂದೂ ಕಿವಿ ಮಾತು ಹೇಳಿದರು.
ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಶಿಸ್ತು, ಸರಳತೆ ಮತ್ತು ಪ್ರಾಮಾಣಿಕತೆಯನ್ನು ಮೈಗೂಡಿಸಿಕೊಂಡು ಸಂಸ್ಕಾರ ವಂತರಾಗಿ ಸಾಧನೆಹಾದಿಯಲ್ಲಿ ಸಾಗಿ ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು ಎಂದೂ ತಿಳಿಸಿದರು.
ಹಾಗೆಯೇ ಇದೇ ವೇಳೆ, ಶಾಸಕರು ಪೊಲೀಸ್ ಇಲಾಖೆಗೆ ಸೂಚನೆ ನೀಡುತ್ತಾ, ನಮ್ಮ ಕ್ಷೇತ್ರದ ಯಾವುದೇ ಮೂಲೆಯಲ್ಲಿ ಮಾದಕ ವಸ್ತುಗಳ ಮಾರಾಟ ಮತ್ತು ಬಳಕೆ ಕಂಡುಬಂದಲ್ಲಿ ಅವರು ಎಷ್ಟೇ ದೊಡ್ಡ ವ್ಯಕ್ತಿ ಆಗಲಿ, ಯಾವುದೇ ಮುಲಾಜು ಇಲ್ಲದೇ ತಕ್ಷಣ ಕ್ರಮ ತೆಗೆದುಕೊಂಡು ನಿಷೇಧಮಾಡಬೇಕು ಎಂದೂ ಖಡಕ್ ಆದ ಎಚ್ಚರಿಕೆ ನೀಡಿದರು. ಇನ್ನೂ ಇದೇ ವೇಳೆ ಮಾದಕ ವಸ್ತುಗಳನ್ನು ನಿಷೇಧ ಮಾಡುವ ಕುರಿತು ಸಭೆಯಲ್ಲಿ ಪೊಸ್ಟರ್ ಅನ್ನು ಬಿಡುಗಡೆಗೊಳಿಸಿ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಿ ಜಾಗೃತಗೊಳಿಸಿದರು.
ಈ ಸಂದರ್ಭದಲ್ಲಿ ಪ.ಪಂ. ಅಧ್ಯಕ್ಷರಾದ ಶ್ರೀ ಕಾವಲಿ ಶಿವಪ್ಪನಾಯಕ, ಸಿ.ಪಿ.ಐ. ಸುರೇಶ ತಳವಾರ್ ಮತ್ತು ಸಿಬ್ಬಂದಿ ವರ್ಗ, ಕೂಡ್ಲಿಗಿ ತಾಲೂಕು ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಗಳಾದ ಡಾ. ಎಸ್. ಪಿ. ಪ್ರದೀಪ್, ಪಿಯು ಕಾಲೇಜು ಪ್ರಾಂಶುಪಾಲರಾದ ಡಾ. ಟಿ. ಕೊತ್ಲಮ್ಮ ಮತ್ತು ಸಿಬ್ಬಂದಿ ವರ್ಗ, ವಿವಿಧ ಕಾಲೇಜು ವಿದ್ಯಾರ್ಥಿಗಳು, ವಿಜಯ ಕರ್ನಾಟಕ ಪತ್ರಕರ್ತರಾದ ಹೂಡೇಂ ಕೃಷ್ಣಮೂರ್ತಿ, ಸಾರ್ವಜನಿಕರು ಉಪಸ್ಥಿತರಿದ್ದರು.
ವರದಿ. ಎಂ, ಬಸವರಾಜ್, ಕಕ್ಕುಪ್ಪೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030