ಪಾಠ ಮಾಡೋ ಶಿಕ್ಷಕರೇ.. ನೈತಿಕ ಪಾಠ ಕಲಿಯದಿದ್ದರೆ, ಸಮಾಜ ತಕ್ಕ ಪಾಠ ಕಲಿಸಲಿದೆ…ಹುಶಾರ್.!?-ಶಾಸಕ ಡಾ”ಎನ್.ಟಿ.ಶ್ರೀನಿವಾಸ್ ಎಚ್ಚರಿಕೆ- ವಿಜಯನಗರ ಜಿಲ್ಲೆ ಕೂಡ್ಲಿಗಿ: ಗುಣಮಟ್ಟದ ಶಿಕ್ಷಣ ನೀಡಬೇಕಾಗಿರುವ, ಪಾಠ ಹೇಳೊ ಶಿಕ್ಷಕರು ಮೊದಲು ನೈತಿಕ ಪಾಠ ಕಲಿಯಬೇಕಿದೆ. ಇಲ್ಲವಾದಲ್ಲಿ ಅಂತಹ ಮೂರ್ಖ ಶಿಕ್ಷಕರಿಗೆ, ಸಮಾಜವೇ ತಕ್ಕ ಪಾಠ ಕಲಿಸಲಿದೆ. ಶಿಕ್ಷಕರೇ ತುಂಬಾ ಜವಾಬ್ದಾರಿಯಿಂದ ವರ್ತಿಸಿ, ಹಾಗೂ ತುಂಬಾ ಹುಶಾರಾಗಿರಿ ಇದು ಪ್ರಜಾಪ್ರಭುತ್ವ ವ್ಯವಸ್ಥೆ ಇಲ್ಲಿ ಎಲ್ಲರೂ ಸಮಾನರು ಎಂದು. ಕೂಡ್ಲಿಗಿ ಕ್ಷೇತ್ರದ ಶಾಕರಾದ ಡಾ”ಎನ್.ಟಿ.ಶ್ರೀನಿವಾಸ್ ರವರು, ಶಿಕ್ಷಕರಿಗೆ ತಿಳಿ ಹೇಳಿದ್ದಾರೆ. ಅವರು ನವಂಬರ್ 26 ರಂದು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಜರುಗಿದ, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮನ್ವ ಸಮಿತಿ ಆಯೋಜಿಸಿದ್ದ. ಸಮನ್ವಯ ಸಮಿತಿ ಕಾರ್ಯಗಾರದಲ್ಲಿ ಹಾಜರಿದ್ದ, ಸರ್ಕಾರಿ ಶಾಲೆಗಳ ಮುಖ್ಯ ಶಿಕ್ಷಕರನ್ನುದ್ಧೇಶಿಸಿ ತಿಳುವಳಿಕೆಯ ಮಾತನಾಡಿದರು. ಸಾರ್ವಜನಿಕ ವಲಯದಲ್ಲಿ ಕರ್ಥವ್ಯ ನಿರ್ವಹಿಸುವಾಗ, ತುಂಬಾ ಜವಾಬ್ದಾರಿಯಿಂದಿರಬೇಕಾಗಿದೆ. ನಾವು ನೀವು ಎಲ್ಲರೂ ಸಾರ್ವಜನಿಕ ಸೇವೆಗೆ ಪ್ರತಿಯಾಗಿ, ಸರ್ಕಾರದಿಂದ ಸಂಬಳದ ರೂಪದಲ್ಲಿ ಜನರ ಹಣವನ್ನು ಹಣ ಪಡೆಯುತ್ತಿದ್ದೇವೆ. ಅದಕ್ಕಾಗಿಯಾದರೂ ನಾವು, ನಿಷ್ಠೆ ಪ್ರಾಮಾಣಿಕತೆಯಿಂದ ಕರ್ಥವ್ಯ ನಿರ್ವಹಿಸಬೇಕಾಗಿದೆ. ಇದನ್ನೆಲ್ಲಾ ಮರೆತ ಕೆಲ ಶಿಕ್ಷಕರು ಕರ್ಥವ್ಯದ ಸಮಯದಲ್ಲಿ ತಮ್ಮ ಕರ್ಥವ್ಯವನ್ನು ಬಿಟ್ಟು, ಬೇರೆಲ್ಲಾ ದುರ್ವೆಸನಗಳಲ್ಲಿ ಮುಳುಗಿರುವುದಾಗಿ ದೂರುಗಳು ಕೇಳಿಬರುತ್ತಿವೆ. ಪವಿತ್ರವಾದ ಶೈಕ್ಷಣಿಕ ದೇವಾಲಯದಲ್ಲಿ ಕರ್ತವ್ಯದಲ್ಲಿ ನಿರತರಾದಾಗಲೂ ಕೂಡ, ಮದ್ಯ ಸೇವನೆ ದೂಮ ಪಾನ ಸೇವನೆ ಗುಟ್ಕ ಸೇವನೆ ಮಾಡುತ್ತಿರುವುದನ್ನು ನಾನೆಂದೂ ಸಹಿಸುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿ ಖಂಡಿಸಿದರು. ಅಕ್ಷಮ್ಯ ಅಪರಾಧ ಎಂದರಿತೂ ಕೂಡ ಕೆಲ ಶಿಕ್ಷಕರು ಹೀಗೆ ಉದ್ಧಠತನ ತೋರುವುದು, ಅವರ ನಾಚಿಕೆಗೇಡಿತನಕ್ಕೆ ಸಾಕ್ಷಿಯಾಗಿದೆ. ಪಾಠ ಹೇಳೋರೇ ಹೀಗೆ ಖಡು ಮೂರ್ಖತನದ ಪರಮಾವದಿಯಿಂದ ವರ್ತಿಸಿದರೆ ಹೇಗೆ.!?ಎಂದು ಪ್ರೆಶ್ನಿಸಿದರು, ಮುಂದಿನ ದಿನಗಳಲ್ಲಿ ಶಿಕ್ಷಕರೆಂದು ಗೌರವಿಸುವ ಇದೇ ಸಮಾಜ ತಕ್ಕ ಪಾಠ ಕಲಿಸಲಿದೆ ಹುಶಾರ್ ಎಂದು ಶಾಸಕರು ಎಚ್ಚರಿಸಿದರು. ಶಿಕ್ಷಕರ ಸಂಘದವರು ಹಾಗೂ ನೌಕರರ ಸಂಘದವರು, ಇಂತಹ ವ್ಯಸನಿ ನೌಕರರಿಗೆ ಸೂಕ್ತ ಚಿಕಿತ್ಸೆ ನೀಡಿ ಜಾಗ್ರತೆ ಮೂಡಿಸಬೇಕಿದೆ ಎಂದರು. ಪತ್ರಕರ್ತರು ಮಾಧ್ಯಮದವರು ಹಾಗೂ ಸಾಮಾಜಿಕ ಹೋರಾಟಗಾರರು, ಸದಾ ತಮ್ಮ ಮೂರನೇ ಕಣ್ಣು ತೆರೆದು ಕಾಯುತ್ತಿರುತ್ತಾರೆ. ಸಾಕ್ಷ್ಯಾಧಾರಗಳ ಸಮೇತ ಸಿಕ್ಕಿ ಹಾಕಿಕೊಂಡರೆ ಗಂಭೀರ ಆರೋಪಗಳು ಸಾಬೀತಾದಲ್ಲಿ, ಅಂತಹ ಅಶಿಸ್ಥಿನ ಅವಿವೇಕಿ ಶಿಕ್ಷಕರ ವಿರುದ್ಧ. ನಿರ್ಧಾಕ್ಷಿಣ್ಯವಾಗಿ ಕಾನೂನು ರೀತ್ಯ ಶಿಸ್ಥು ಕ್ರಮಕ್ಕೆ, ಶಿಪಾರಸ್ಸು ಮಾಡಲಾಗುವುದೆಂದು ಶಿಕ್ಷಕರಿಗೆ ಎಚ್ಚರಿಕೆ ನೀಡಿದರು. ವೇದಿಕೆಯಲ್ಲಿ SDMC ರಾಜ್ಯಾಧ್ಯಕ್ಷರಾದ ಉಮೇಶ ಜಿ ಗಂಗವಾಡಿ, ರಾಜ್ಯ ಉಪಾಧ್ಯಕ್ಷರಾದ ಗುನ್ನಳ್ಳಿ ರಾಘವೇಂದ್ರ, ಶಿಕ್ಷಣಾಧಿಕಾರಿ ಪದ್ಮನಾಭ ಕರ್ಣಂ, ಕಾರ್ಯದರ್ಶಿ ಜಿ.ಎಸ್. ಪಾರ್ವತಿ. ರಾಜ್ಯ ಖಜಾಂಚಿ ಜ್ಯೋತಿ ರಾಮಶೆಟ್ಟಿ, ನೌಕರರ ಸಂಘದ ಅಧ್ಯಕ್ಷ ಎಸ್.ವೆಂಕಟೇಶ ವೇದಿಕೆಯಲ್ಲಿದ್ದರು. ಶಿಕ್ಷಕರ ಸಂಘದ ಅಧ್ಯಕ್ಷ ಕೊಟ್ರುಗೌಡ, SDMC ವಿವಿದ ಜಿಲ್ಲೆಗಳ ಮುಖಂಡರು. ವಿವಿದ ತಾಲೂಕುಗಳ ಮುಖಂಡರು, ತಾಲೂಕಿನ ಎಲ್ಲಾ ಶಾಲೆಗಳ ಮುಖ್ಯ ಶಿಕ್ಷಕರು ಹಾಗೂ SDMC ಸಮನ್ವಯ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು….
ವರದಿ. ಎಂ. ಬಸವರಾಜ್ ಕಕ್ಕುಪ್ಪೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030