ಶಿಕ್ಷಣದಿಂದ ಸಮಾಜ ಸುಧಾರಣೆ ಸಾಧ್ಯ – ಶಾಸಕ ಡಾ. ಶ್ರೀನಿವಾಸ್. ಎನ್. ಟಿ
ಕೂಡ್ಲಿಗಿ ವಿಧಾನ ಸಭಾ ಕ್ಷೇತ್ರದ ಪಟ್ಟಣದ ಎಸ್. ಎ. ವಿ. ಟಿ. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವತಿಯಿಂದ ದಿ; 29-11-2024 ರಂದು ಹಮ್ಮಿಕೊಂಡಿರುವ 2024 – 25 ನೇ ಸಾಲಿನ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭವನ್ನು ಮಾನ್ಯಶಾಸಕರಾದ ಡಾ. ಶ್ರೀನಿವಾಸ್. ಎನ್. ಟಿ. ಅವರು ಉದ್ಘಾಟಿಸಿದರು.ಶಾಸಕರು ಮಾತನಾಡುತ್ತಾ, ನನ್ನ ತಂದೆಯವರ ಆದಿಯಾಗಿ, ಶಿಕ್ಷಣದಿಂದ ಮಾತ್ರ ಮಾನವ ಸಮಾಜ ಸುಧಾರಣೆ ಸಾಧ್ಯ ಎಂಬುದನ್ನು ಅರಿತು ಇಲ್ಲಿನ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಅನುಕೂಲ ಕಲ್ಪಿಸಿ ಕೊಡಲು ಹಗಲು – ಇರಳು ಶ್ರಮಿಸುತ್ತಿದ್ದೇನೆ ಎಂದರು. ಹಿಂದುಳಿದ ನಮ್ಮ ಕ್ಷೇತ್ರವನ್ನು ಮೇಲಕ್ಕೆ ಎತ್ತಲು, ಹೊಸದಾಗಿ ವಿಜ್ಞಾನ ವಿಭಾಗವನ್ನು ಜಾರಿಗೆ ತಂದು, ಪ್ರಪ್ರಥಮ ಬಾರಿಯಲ್ಲಿ ಹೊಸ ಕಟ್ಟಡಕ್ಕೆ ಭೂಮಿಪೂಜೆಯನ್ನು ನೆರವೇರಿಸಿದೆ. ಇವತ್ತು ಸುಸಜ್ಜಿತವಾದ ಹೊಸ ಕೊಠಡಿ ತಲೆ ಎತ್ತಿ ನಿಂತಿದೆ ಎಂದರು. ಹಾಗೆಯೇ, ಸರ್ವ ರೀತಿಯಲ್ಲಿ ನಮ್ಮ ಕಾಲೇಜು ಅಭಿವೃದ್ಧಿಗೆ ಈಗಾಗಲೇ ಶ್ರಮಿಸುತ್ತಿರುವುದು ಇದೆ ಎಂದರು. ಪ್ರಾಂಶುಪಾಲರಿಂದ ಶಾಸಕರು ಮನವಿ ಸ್ವೀಕರಿಸಿ ಅಭಿವೃದ್ಧಿಗೆ ಸಹಕರಿಸುವೆ ಎಂದರು. ಪ್ರಾಂಶುಪಾಲರು, ಅಧ್ಯಕ್ಷರು, ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ..
ವರದಿ. ಎಂ. ಬಸವರಾಜ್ ಕಕ್ಕುಪ್ಪೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030