ಕೂಡ್ಲಿಗಿ ವಿಧಾನ ಸಭಾ ಕ್ಷೇತ್ರದ ಚಂದ್ರಶೇಖರ ಪುರ ಗ್ರಾಮದಲ್ಲಿ ಮಹಾಲಕ್ಷ್ಮಿ(20) ಅವರು ಬಾಣಂತಿಯಾಗಿದ್ದು, ಅನಾರೋಗ್ಯದಿಂದ ಮೊನ್ನೇ ದಿನ ನಿಧಾನರಾದರು. ವಿಷಯ ತಿಳಿದ ನಂತರ ಮಾನ್ಯಶಾಸಕರಾದ ಡಾ. ಶ್ರೀನಿವಾಸ್. ಎನ್. ಟಿ. ಅವರು ಇಂದು ಸ್ಥಳೀಯ ಮುಖಂಡರೊಂದಿಗೆ ತೆರಳಿ ದುಃಖದಲ್ಲಿರುವ ಕುಟುಂಬಕ್ಕೆ ಸಾಂತ್ವಾನ ಹೇಳಿ ನೆರವು ನೀಡಿ ಧೈರ್ಯ ತುಂಬಿದರು. ಹಾಗೆಯೇ ಭವಿಷ್ಯದ ದೃಷ್ಟಿಯಿಂದ ಶಾಸಕರು ವೈಯಕ್ತಿಕವಾಗಿ ಮಗುವಿನ ಹೆಸರಿನಲ್ಲಿ ಬ್ಯಾಂಕಿನಲ್ಲಿ ಖಾಯಂ ಠೇವಣಿ(Fixed Deposit) ಯಾಗಿ 50,000 ರೂಪಾಯಿಗಳನ್ನು ಇಡುತ್ತೇವೆ ಎಂದೂ ಹೇಳಿದರು. ಮಗುವಿನ ಹಾರೈಕೆಗಾಗಿ ಬೇಕಾಗಿರುವ ಸಾಮಾಗ್ರಿಗಳನ್ನು ಶಾಸಕರು ನೀಡಿದರು. ಈ ಸಂದರ್ಭದಲ್ಲಿ ಮುಖಂಡರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು…
ವರದಿ. ಎಂ. ಬಸವರಾಜ್ ಕಕ್ಕುಪ್ಪೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030