ಸಂಡೂರು-ಯರನಳ್ಳಿ: 108 ಅಂಬುಲೆನ್ಸ್ ನಲ್ಲಿ ಮಗುವಿಗೆ ಜನ್ಮ ನೀಡಿದ ತಾಯಿ-ಬಳ್ಳಾರಿ ಜಿಲ್ಲೆ ಸಂಡೂರು: ತಾಲೂಕಿನ ಚೋರನೂರು ವ್ಯಾಪ್ತಿಯ ಯರನಳ್ಳಿ ಮೂಲದ ಗರ್ಭಿಣಿ, ತುರ್ತು ಚಿಕಿತ್ಸಾ ವಾಹನದಲ್ಲಿಯೇ ಹೆಣ್ಣು ಮಗುವಿಗೆ ಜನ್ಮ ನೀಡಿದ ಘಟನೆ ನವಂಬರ್ 27ರಂದು ಜರುಗಿದೆ. ಚೋರನೂರು ಪ್ರಾಥಮಿಕ ಆರೋಗ್ಯ ಕೇಂದ್ರದ 108 ತುರ್ತು ಚಿಕಿತ್ಸಾ ವಾಹನದಲ್ಲಿ, ಯರನಳ್ಳಿ ಗ್ರಾಮದ ಯಶೋಧಮ್ಮ ಗಂಡ ಓಬಣ್ಣ 21 ವರ್ಷದ ತುಂಬು ಗರ್ಭಿಣಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಯರನಳ್ಳಿಯ ಯಶೋಧಮ್ಮರವರು, ಪ್ರಸವ ವೇಧನೆ ತೀವ್ರ ಗೊಂಡಿರುವ ಹಿನ್ನಲೆಯಲ್ಲಿ. ಸ್ಥಳೀಯ ಆಶಾಕಾರ್ಯಕರ್ತೆ ಪವಿತ್ರ ರವರನ್ನು ಸಂಪರ್ಕಿಸಿದ್ದು, ಅವರ ಸಲಹೆ ಮೇರೆಗೆ ಚೋರನೂರು ಪ್ರಾಥಮಿಕ ಆರೋಗ್ಯ ಕೇಂದ್ರದ 108 ತುರ್ತು ಚಿಕಿತ್ಸಾ ವಾಹನವನ್ನು, ದೂರವಾಣಿ ಮೂಲಕ ಸಂಪರ್ಕಿಸಿ ನೆರವು ಕೋರಿದ್ದಾರೆ. ತಕ್ಷಣವೇ ತುಂಬು ಗರ್ಭಿಣಿಯ ಗ್ರಾಮಕ್ಕೆ ದಾವಿಸಿರುವ 108ತುರ್ತು ವಾಹನ ಸಿಬ್ಬಂದಿ, ಯಶೋಧರವರನ್ನು ಚೋರನೂರು ಆಸ್ಪತ್ರೆಗೆ ಕರೆದೊಯ್ಯುವ ಸಂದರ್ಭದಲ್ಲಿ. ಮಾರ್ಗ ಮಧ್ಯದಲ್ಲಿಯೇ ಯಶೋಧರವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ, ಈ ಸಂದರ್ಭದಲ್ಲಿ ತುರ್ತು ತಾಂತ್ರಿಕ ವೈಧ್ಯಕೀಯ ಸಿಬ್ಬಂದಿ ಕರ್ಥವ್ಯ ಪ್ರಜ್ಞೆ ಮೆರೆದು ಯಶಸ್ವೀಯಾಗಿ ಹೆರಿಗೆ ಕಾರ್ಯ ನಿರ್ವಹಿಸಿದ್ದಾರೆ. ಆಶಾಕಾರ್ಯಕರ್ತೆಯಾದ ಪವಿತ್ರ 108 ಅಂಬುಲೆನ್ಸ್ ಚಾಲಕ ನಾಣ್ಯಾಪುರ ಪ್ರಭುರವರು, ಕರ್ಥವ್ಯೆ ಪ್ರಜ್ಞೆ ಹಾಗೂ ಸಮಯ ಪ್ರಜ್ಞೆ ಮೆರೆದಿದ್ದಾರೆ. ಈಗಾಗಿ ಭಾಣಂತಿ ತಾಯಿ ಯಶೋಧ ನವಜಾತ ಹೆಣ್ಣು ಶಿಶು, ಆರೋಗ್ಯವಾಗಿದ್ದು ಕ್ಷೇಮದಿಂದಿದ್ದಾರೆ. ಅವರನ್ನು ಅಗತ್ಯ ಸಂಪೋಷಣೆಗಾಗಿ, ಚೋರನೂರು ಉಪ ಆರೋಗ್ಯಕೇಂದ್ರಕ್ಕೆ ದಾಖಲಿಸಲಾಗಿದೆ. 108 ತುರ್ತು ಚಿಕಿತ್ಸಾ ವಾಹನದ ಸಿಬ್ಬಂದಿ, ಹಾಗೂ ಆಶಾಕಾರ್ಯಕರ್ತೆಯ ಕರ್ಥವ್ಯ ನಿಷ್ಠೆಯನ್ನು ಕಂಡ ಗರ್ಭಿಣಿಯ ಪೋಷಕರು ಸಂಬಂಧಿಕರು, ಸಿಬ್ಬಂದಿಯವರನ್ನು ಅಭಿನಂದಿಸಿ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ….
ವರದಿ. ಎಂ. ಬಸವರಾಜ್ ಕಕ್ಕುಪ್ಪೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030