ಕರ್ನಾಟಕ ರಾಜ್ಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆ…..
ವಿಜಯ ನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದ ಪ್ರವಾಸಿ ಮಂದಿರ ದಲ್ಲಿ ಮಂಗಳವಾರ ರಂದು ನಡೆದ ಕರ್ನಾಟಕ ರಾಜ್ಯ ಶಾಲಾ ಭಿರುದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆಯಿಂದ ಶಾಲಾ ಶಿಕ್ಷಣ SDMC ಗಳ ಹಕ್ಕು ಮತ್ತು ಕರ್ತವ್ಯ ಹಾಗೂ ತಾಲೂಕು ಮಟ್ಟದ ಒಂದು ದಿನದ ಕಾರ್ಯಾಗಾರ ವನ್ನು ಕೂಡ್ಲಿಗಿ ತಾಲೂಕು ವೇದಿಕೆಯಿಂದ ನಡೆಯಿತು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಕೂಡ್ಲಿಗಿ ಶಾಸಕರಾದ ಎನ್ ಟಿ ಶ್ರೀನಿವಾಸ್ ಹಾಗೂ ಎಸ್ ಡಿ ಎಂ ಸಿ ವಿಜಯ ನಗರ ಜಿಲ್ಲಾಧ್ಯಕ್ಷರಾದ ಗುನ್ನಳ್ಳಿ ರಾಘವೇಂದ್ರ, ಪ ಪಂ ಅಧ್ಯಕ್ಷರು ಕಾವಲಿ ಶಿವಪ್ಪ, ಉಪಾಧ್ಯಕ್ಷರು ಸೈಯದ್ ಶುಕೂರು, ತಾ.ಪಂ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರು ವೆಂಕಟೇಶ್,sdmc, ರಾಜ್ಯ ಖಂಜಾಚಿ ಜ್ಯೋತಿ ಜಯರಾಮ್ ಶೆಟ್ಟಿ,ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗಳಿಗೆ ಸೇಡುವಂತ ಗುಣಾತ್ಮಕ ಶಿಕ್ಷಣವನ್ನು ಸರ್ಕಾರಿ ಶಿಕ್ಷಕರು ಹಾಗೂ ಶಾಲೆಗಳು ತೆಲೆ ಹೆತ್ತಿವೆ ಎಂದು ತಿಳಿಸಿ ದರು.
ಪ್ರತಿ ವರ್ಷದಲ್ಲಿ ಸರ್ಕಾರಿ ಶಾಲೆಗಳಲ್ಲಿ ಹೆಚ್ಚು ಮಕ್ಕಳು ಶಾಲಾ ದಾಖಲಾತಿ ಹಾಗುವಂತೆ ತಾಲೂಕಿನ ಎಲ್ಲಾ ಶಾಲಾ ಶಿಕ್ಷಕರು ಒಮ್ಮತದಿಂದ ಕೆಲಸ ಮಾಡೋಣ ಎಂದು ಮುಖ್ಯಗುರುಗಳು ವೇದಿಕೆಯ ಮೂಲಕ ತಿಳಿಸಿದರು.
ಈ ಸಂದರ್ಭದಲ್ಲಿ ಶಾಸಕರು ವೇದಿಕೆ ಯನ್ನು ಉದ್ದೇಶಿಸಿ ಮಾತನಾಡತ್ತ ಡಾಕ್ಟರ್ ಬಿ ಆರ್. ಅಂಬೇಡ್ಕರ್ ರವರ ಭಾವ ಚಿತ್ರದ ಮುಂದೆ ಶಿಕ್ಷಣ ಕುರಿತು ಚರ್ಚೆ ಮಾಡುವುದು ತುಂಬಾ ಒಳ್ಳೆಯ ವಿಷಯ ದೇಶದ ಸಂವಿಧಾನ ದಿನದಂದು ಸರ್ಕಾರಿ ಶಾಲೆಯಲ್ಲಿ ಮಕ್ಕಳ ಕುರಿತು ಗುಣಮಟ್ಟದ ಶಿಕ್ಷಣ ಯಾವ ರೀತಿಯಲ್ಲಿ ಮಕ್ಕಳು ಶಿಕ್ಷಣತ್ಮಕವಾಗಿ ಮಕ್ಕಳು ಬೆಳವಣಿಗೆ ಮುಖ್ಯ ಗುರುಗಳು ಹಾಗೂ sdmc ಅಧ್ಯಕ್ಷರು ಹಾಗೂ ಸದಸ್ಯರು ಒಟ್ಟಾಗಿ ಸೇರಿ ನಡೆಯುತ್ತಿದೆ ಎನ್ನುವುದನ್ನು ಮುಕ್ತವಾಗಿ ಚರ್ಚೆ ಮಾಡುವುದು ಒಳ್ಳೇದು ಎಂದು ತಿಳಿಸಿದರು..
ವರದಿ.ವೈ ಮಹದೇವ್ ಕೂಡ್ಲಿಗಿ ಗ್ರಾಮಾಂತರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030