ಚೆಕ್ ಡ್ಯಾಂ ನಲ್ಲಿ ಬಿದ್ದು ಮೃತಪಟ್ಟ ಯುವಕನ ಕುಟುಂಬಕ್ಕೆ ಸಾಂತ್ವನ ಹೇಳಿದ: ಡಾ.ಶ್ರೀನಿವಾಸ್ . ಎನ್ ಟಿ
ನಿಂಬಳಗೆರೆ ಗ್ರಾಮದ ಶ್ರೀಮತಿ ರತ್ನಮ್ಮ, ಹಂಪಣ್ಣ ನವರ ಮಗನಾದ ಸಂದೀಪ್( 19 ವರ್ಷ ) ಹೊರ ವಲಯದಲ್ಲಿರುವ ಚೆಕ್ ಡ್ಯಾಂ ನಲ್ಲಿ ಈಜಲು ಹೋಗಿ ಮೃತಪಟ್ಟಿರುತ್ತಾನೆ. ಮಾನ್ಯ ಶಾಸಕರಾದ ಡಾ. ಶ್ರೀನಿವಾಸ್ ಎನ್ ಟಿ ರವರು ಸ್ಥಳೀಯ ಮುಖಂಡರೊಂದಿಗೆ ದಿನಾಂಕ 25.11.2024 ರಂದು ಮೃತ ಯುವಕನ ಮನೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿ ವಿಷಾದ ವ್ಯಕ್ತಪಡಿಸಿ, ವೈಯಕ್ತಿಕ ಪರಿಹಾರದ ಜೊತೆಗೆ ಸರ್ಕಾರದಿಂದ ಪರಿಹಾರ ಕೊಡಿಸುವುದಾಗಿ ಹೇಳಿದರು. ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರು ಹಾಗೂ ಉಪಸ್ಥಿತರಿದ್ದರು…
ವರದಿ. ಎಂ. ಬಸವರಾಜ್ ಕಕ್ಕುಪ್ಪೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030