ದಾಳಿಂಬೆ ತುಂಬಿದ ಬೋಲರ್ ವಾಹನಪಲ್ಟಿ– ಹಣ್ಣಿಗಾಗಿ ಮುಗಿಬಿದ್ದ ಜನ
ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು.ಕಾನ ಹೊಸಹಳ್ಳಿ :- ದಾಳಿಂಬೆ ಹಣ್ಣು ತುಂಬಿಕೊಂಡು ಹೋಗುತ್ತಿದ್ದ ಬೊಲೋರ್ ವಾಹನ ಪಲ್ಟಿಯಾದ ಘಟನೆ ಬಣವಿ ಕಲ್ಲು ಗ್ರಾಮದ ಹೊರವಲಯದ ರಾಷ್ಟ್ರೀಯ ಹೆದ್ದಾರಿ 50 ರಲ್ಲಿ ಗುರುವಾರ ಸಂಜೆ ಜರುಗಿದೆ.
ಹಗರಿಬೊಮ್ಮನಹಳ್ಳಿಯಿಂದ ದಾಳಿಂಬೆ ಹಣ್ಣನ್ನು ಬೋಲೋರ್ ವಾಹನದಲ್ಲಿ ತುಂಬಿಕೊಂಡು ಬೆಂಗಳೂರು ಮಾರ್ಗವಾಗಿ ಚೆನ್ನೈಗೆ ಹೋಗಬೇಕಾದ ಬೋಲರ್ ವಾಹನ ಬಣವಿಕಲ್ಲು ಗ್ರಾಮದ ಹೊರವಲಯದ ರಾಷ್ಟ್ರೀಯ ಹೆದ್ದಾರಿ 50 ರಲ್ಲಿ ವಾಹನದ ಹಿಂದಿನ ಟೈರ್ ಒಮ್ಮೆಲೆ ಸಿಡಿದು ಹೋಗಿದ್ದರಿಂದ ವಾಹನ ಪಲ್ಟಿಯಾಗಿತ್ತು ವಾಹನದಲ್ಲಿನ ದಾಳಿಂಬೆ ಹಣ್ಣನ್ನು ತುಂಬಿದ ಡಬ್ಬಗಳು ಗಾಡಿ ಯಿಂದ ಕೆಳಗೆ ಬಿದ್ದು ಚೆಲ್ಲಪಲ್ಲಿಯಾಗಿದ್ದ ಕೆಲವು ಡಬ್ಬಗಳಲ್ಲಿ ಇದ್ದ ದಾಳಿಂಬೆ ಹಣ್ಣುಗಳು ಹಾಳಾಗಿ ಹೋಗಿದ್ದವು. ದಾಳಿಂಬೆ ಹಣ್ಣಿಗಾಗಿ ಕೆಲವು ಜನರು ಮುಗಿಬಿದ್ದಿದ್ದರು. ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಹೆದ್ದಾರಿಯ ಪೊಲೀಸರು ವಿಷಯ ಗೊತ್ತಾಗುತ್ತಿದ್ದಂತೆ ತಕ್ಷಣ ಸ್ಥಳಕ್ಕೆದೊಯಿಸಿ ರಕ್ಷಣೆ ನೀಡಿದರು.
ದಾಳಿಂಬೆ ಹಣ್ಣಿಗೆ ಕೆಲವು ಜನರು ಮುಗಿಬಿದ್ದಿದ್ದರು ಸ್ಥಳಕ್ಕೆ ಹೆದ್ದಾರಿ ಪೊಲೀಸರು ಸ್ಥಳಕ್ಕೆ ಭಾವಿಸಿ ರಕ್ಷಣೆ ನೀಡಿದರು.
ಇದೇ ಮಾರ್ಗದಲ್ಲಿ ಕೂಡ್ಲಿಗಿ ಶಾಸಕರಾದ ಡಾ. ಶ್ರೀನಿವಾಸ್ ಎನ್ ಟಿ ರವರು ತಮ್ಮ ವಾಹನದಲ್ಲಿ ಸಂಚರಿಸುತ್ತಿರುವಾಗ ಈ ಘಟನೆಯನ್ನು ನೋಡಿ ತಕ್ಷಣ ಗಾಡಿ ನಿಲ್ಲಿಸಿ ಬೋಲರ್ ವಾಹನ ಪಲ್ಟಿಯಾದ ಸ್ಥಳಕ್ಕೆ ದಾವಿಸಿದರು. ನಂತರ ಶಾಸಕರು ಮಾತನಾಡಿ ರೈತರು ತಮ್ಮ ಜಮೀನುಗಳಲ್ಲಿ ಕಷ್ಟಪಟ್ಟು ಬೆವರು ಸುರಿಸಿ ಬೆಳೆದ ಈ ದಾಳಿಂಬೆ ಹಣ್ಣುಗಳನ್ನು ಯಾರು ಕದ್ದು ತೆಗೆದುಕೊಂಡು ಹೋಗಬಾರದು ತೆಗೆದುಕೊಂಡವರು ವಾಪಸ್ ಹಣ್ಣಿನ ಮಾಲೀಕರಿ ಗೆ ಕೊಡಿ ಎಂದು ತಿಳಿ ಹೇಳಿದರು. ಹೆದ್ದಾರಿಯಲ್ಲಿ ವಾಹನಗಳ ಸಂಚಾರಕ್ಕೆ ತೊಂದರೆಯಾಗದಂತೆ ವ್ಯವಸ್ಥೆ ಮಾಡಬೇಕು ಎಂದು ಹೆದ್ದಾರಿ ಪೊಲೀಸರಿಗೆ ಹೇಳಿ ಅಲ್ಲಿಂದ ಶಾಸಕರು ತೆರಳಿದರು…
ವರದಿ.ವೈ ಮಹದೇವ್ ಕೂಡ್ಲಿಗಿ ಗ್ರಾಮಾಂತರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030