ಸಾಮಾಜಿಕ ನ್ಯಾಯದಡಿ ಕಾರ್ಯನಿರ್ವಹಿಸಿದ ಶಾಸಕ- ಡಾ. ಶ್ರೀನಿವಾಸ್. ಎನ್.ಟಿ
ಕೂಡ್ಲಿಗಿ ವಿಧಾನ ಸಭಾ ಕ್ಷೇತ್ರದ ಮಾನ್ಯಶಾಸಕರಾದ ಡಾ. ಶ್ರೀನಿವಾಸ್. ಎನ್. ಟಿ. ಅವರು ದಿ;20-11-2024 ರಂದು
ಕುದುರೆಡವು – ಗೊಲ್ಲರಹಟ್ಟಿ, ಗೆದ್ದಲ ಗಟ್ಟೆ- ಗೊಲ್ಲರಹಟ್ಟಿ, ಮಾಡ್ಲಾಕನಹಳ್ಳಿ- ಗೊಲ್ಲರಹಟ್ಟಿ, ಕ್ಯಾಸನಕೆರೆ- ಗೊಲ್ಲರಹಟ್ಟಿ, ಮೊರಬ- ಗೊಲ್ಲರಹಟ್ಟಿ, ದೊಡ್ಡ ಗೊಲ್ಲರಹಟ್ಟಿ, ಶಿವಪುರ ಗೊಲ್ಲರಹಟ್ಟಿ,
ಭಾಗದಲ್ಲಿ ಸಿ. ಸಿ. ರಸ್ತೆ ನಿರ್ಮಾಣದ ಕಾಮಗಾರಿಯ ಭೂಮಿಪೂಜೆಯನ್ನು ನೆರವೇರಿಸಿದರು. ಶಾಸಕರು ಮಾತನಾಡುತ್ತಾ ಚುನಾವಣೆ ವೇಳೆ ಅಭಿವೃದ್ಧಿಯಿಂದ ಹಿಂದುಳಿದ ಸಮುದಾಯಗಳಿಗೆ ಸಾಮಾಜಿಕ ನ್ಯಾಯದಡಿ ಕೊಟ್ಟ ಮಾತಿನಂತೆ, ಏಕಕಾಲದಲ್ಲಿ 18 ಗೊಲ್ಲರಹಟ್ಟಿಗಳಿಗೆ ಸ್ವಚ್ಛತೆಗೆ ಒತ್ತು ಕೊಡಲು ಸರ್ಕಾರದ ಮಟ್ಟದಲ್ಲಿ ಬೇರೆ ಬೇರೆ ಇಲಾಖೆಗಳಲ್ಲಿ ಅನುದಾನವನ್ನು ಕಷ್ಟ ಪಟ್ಟು ತಂದು ಈ ದಿನ ಅತ್ಯಂತ ಖುಷಿಯಿಂದ ಭೂಮಿಪೂಜೆಯನ್ನು ನೆರವೇರಿಸಿದ್ದೇವೆ ಎಂದರು. ಹಾಗೆಯೇ ನಾವು ಅಭಿವೃದ್ಧಿ ವಿಚಾರದಲ್ಲಿ ಯಾವುದೇ ವರ್ಗಗಳಿಗೆ ಬೇಧ ಭಾವ ಮಾಡುವುದಿಲ್ಲ ಎಂದರು.
ಇನ್ನೂ ತಮ್ಮ ಹಟ್ಟಿಗಳಲ್ಲಿ ಒಂದೊಂದು ಸಲ ನಮ್ಮ ಗಮನಕ್ಕೆ ಇಲ್ಲದಂತೆ ಕೆಲವು ಘಟನೆಗಳು ನಡೆದಿರುತ್ತವೆ. ಅವುಗಳನ್ನು ನಮ್ಮ ಗಮನಕ್ಕೆ ತಂದಾಗ ಸರ್ಕಾರದ ಮಟ್ಟದಲ್ಲಿ ಬಗೆಹರಿಸುತ್ತೇವೆ ಎಂದೂ ತಿಳಿಸಿದರು ಗೊಲ್ಲ ಸಮಾಜದ ಜಿಲ್ಲಾ ಅಧ್ಯಕ್ಷರಾದ ಶ್ರೀ ಗುರುಲಿಂಗಪ್ಪ, ತಾಲೂಕು ಅಧ್ಯಕ್ಷರಾದ ದೊಡ್ಡಪ್ಪ, ಹಿರಿಯರಾದ ಸಿರಿಯಪ್ಪ, ಚಂದ್ರಪ್ಪ, ಇನ್ನೂ ಮುಂತಾದವರು, ಮಾಜಿ ತಾ.ಪಂ. ಸದಸ್ಯರಾದ ಕಾಕಿ ಬಸಣ್ಣ, ಬೋರಣ್ಣ, ಕೊಟ್ರೇಶ, ಗ್ರಾಮ ಪಂಚಾಯತಿ ಅಧ್ಯಕ್ಷರಾದ ಮಂಜುಳಾ ಸತೀಶಣ್ಣ, ದ್ಯಾಮಣ್ಣ, ಸದಸ್ಯರಾದ ನಾಗಣ್ಣ, ರಮೇಶ, ಸಿದ್ದಪ್ಪ, ಮಹಾದೇವ, ಮುಖಂಡರಾದ ಭಾಷಾ, ನಜೀರ್ ಸಾಬ್, ಬಣಕಾರ್ ವೀರಭದ್ರಪ್ಪ, ಎಲ್ಲಾ ಸಮುದಾಯಗಳ ಮುಖಂಡರು, ಹಿರಿಯರು, ಗ್ರಾಮಸ್ಥರು ಉಪಸ್ಥಿತರಿದ್ದರು…
ವರದಿ. ಎಂ, ಬಸವರಾಜ್, ಕಕ್ಕುಪ್ಪೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030