ಕೂಡ್ಲಿಗಿ ವಿಧಾನ ಸಭಾ ಕ್ಷೇತ್ರದ ಜರ್ಮಲಿ ಗ್ರಾಮದಲ್ಲಿ ದಿ; 18-11-2024 ರಂದು ಸೋಮವಾರ ಒಂದು ವಿಶೇಷವಾದ ಘಟನೆ ನಡೆದಿದೆ. ಕಾಡುಪ್ರಾಣಿಗಳಿಂದ ರೈತರು ತಮ್ಮ ಬೆಳೆಗಳನ್ನು ಸಂರಕ್ಷಣೆ ಮಾಡಿಕೊಳ್ಳಲು ಯಾರಿಗೂ ಗೊತ್ತಿಲ್ಲದಂತೆ ಜಮೀನಿನಲ್ಲಿ ಹೂತು ಇಟ್ಟಿರುವ ಮದ್ದು ಗುಂಡುಗಳು ಬ್ಲಾಸ್ಟ್ ಆಗಿರುವ ಹಿನ್ನೆಲೆಯಲ್ಲಿ ಕೃಷಿ ಚಟುವಟಿಕೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಂದರ್ಭದಲ್ಲಿ ಹೊನ್ನಮ್ಮ( 60), ಗೌತಮಿ( 7), ನಿತ್ಯಶ್ರೀ( 5) ಅವರಿಗೆ ಗಾಯಗಳು ಆಗಿರುವುದರಿಂದ ಆ ದಿನವೇ ತಾಲೂಕಿನ ಸರ್ಕಾರಿ ಆಸ್ಪತ್ರೆಗೆ ಗಾಯಾಳುಗಳಾದ ಮಕ್ಕಳನ್ನು ದಾಖಲು ಮಾಡಲಾಗಿತ್ತು. ಆ ನಿಟ್ಟಿನಲ್ಲಿ ವಿಷಯ ತಿಳಿಯುತ್ತಿದ್ದಂತೆ ಆ ದಿನ ಮಧ್ಯಾಹ್ನವೇ ಮಾನ್ಯಶಾಸಕರಾದ ಡಾ. ಶ್ರೀನಿವಾಸ್. ಎನ್. ಟಿ. ಅವರು ಭೇಟಿ ನೀಡಿ ತುರ್ತಾಗಿ ವೈದ್ಯರ ತಂಡದೊಂದಿಗೆ ತಪಾಸಣೆ ಮಾಡಿ ಕಣ್ಣಿಗೆ ಹೆಚ್ಚಿನ ರೀತಿಯಲ್ಲಿ ಪೆಟ್ಟು ಆಗಿರುವುದರಿಂದ ಆ ಕ್ಷಣವೇ ಹೆಚ್ಚಿನ ಚಿಕಿತ್ಸೆ ಪಡೆಯಲು ಅಂಬ್ಯುಲೆನ್ಸ್ ವ್ಯವಸ್ಥೆ ಮಾಡಿ ಕಷ್ಟದಲ್ಲಿ ಇರುವವರಿಗೆ ನೆರವು ನೀಡಿ, ಬಳ್ಳಾರಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿರುವುದನ್ನು ಕಾಣಬಹುದು. ಹಾಗೆಯೇ ಸ್ಥಳೀಯರಿಂದ ತಿಳಿದು ಬಂದಂತೆ ಹೆಚ್ಚಿನ ಚಿಕಿತ್ಸೆಯನ್ನು ಪಡೆದ ಮಕ್ಕಳು ಸುರಕ್ಷಿತವಾಗಿ ತಮ್ಮ ಗ್ರಾಮಕ್ಕೆ ಆರೋಗ್ಯದಿಂದ ಇದ್ದು, ಕುಟುಂಬ ಸೇರಿರುವುದು ಇದೆ. ಈ ಸಂದರ್ಭದಲ್ಲಿ ಮುಖಂಡರು, ವೈದ್ಯರು, ಜನಪ್ರತಿನಿಧಿಗಳು ಉಪಸ್ಥಿತದ್ದರು…
ವರದಿ. ಅನಿಲ್ ಕುಮಾರ್, ಹುಲಿಕುಂಟೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030