ದಿನಾಂಕ 17.11.2024ರಂದು ಗೋವಾದಲ್ಲಿ ರವೀಂದ್ರ ಕಲಾಭವನ ದಲ್ಲಿ ಚಿರಯು ಕನ್ನಡ ಡಿಜಿಟಲ್ ಮೀಡಿಯಾ ಹಾಗೂ ಶ್ರೀನಿಧಿ ಫೌಂಡೇಶನ್ ರಿಜಿಸ್ಟರ್ ಕರ್ನಾಟಕ ಇವರ ಸಹಾಯಯೋಗದಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ಅಂತರ ರಾಜ್ಯ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಎಂಟು ಜನ ಕಲಾವಿದರು ಮತ್ತು ಸಮಾಜಸೇವಕರಿಗೆ ಕರುನಾಡ ಕಲಾ ರತ್ನ ಮತ್ತು ರಾಷ್ಟ್ರೀಯ ಕೃಷಿ ಕಾಯಕಯೋಗಿ ಪ್ರಶಸ್ತಿಯನ್ನು ನೀಡಿದರು ಪ್ರಶಸ್ತಿಯನ್ನು ಪಡೆದುಕೊಂಡ ಬಣಕಾರ್ ಮೋಗಪ್ಪ ಕಲಾವಿದರು ಜಯಮ್ಮರ ರಾಘವೇಂದ್ರ ಕಲಾವಿದರು ಕೊಟ್ರೇಶ್ ಬಣಕಾರ್ ಮಂಜುನಾಥ್ ಜಿ ಬೇವುರು ದೇವೇಂದ್ರಪ್ಪ ಕಡ್ಡಿ ಮಂಜುನಾಥ್ ಕೂಡ್ಲಿಗಿ ಹಾಗೂ ಎಮ್ ಬಸವರಾಜ್ ಕಕ್ಕುಪ್ಪಿ ಇವರಿಗೆ ಅಂತರಾಜ್ಯ್ಮಟ್ಟದಲ್ಲಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿರುವುದು ಕೂಡ್ಲಿಗಿ ತಾಲೂಕಿಗೆ ಹೆಮ್ಮೆಯ ವಿಷಯವಾಗಿದೆ ಅನೇಕ ಉತ್ತಮ ಸಮಾಜ ಸೇವೆಗಳು ಮತ್ತು ಇತ್ತೀಚಿಗೆ ಕಲೆಯನ್ನು ಪ್ರೋತ್ಸಾಹಿಸಿ ಕಲೆಯನ್ನು ಉಳಿಸುವುದರ ಜೊತೆಗೆ ಕಲೆ ಯನ್ನು ಬೆಳೆಸುವ ಕೆಲಸವನ್ನು ಮಾಡುತ್ತಿರುವ ಇವರೆಲ್ಲರಿಗೂ ಕೂಡ ಸನ್ಮಾನ ಮಾಡಿರುವುದು ಉತ್ತಮ ಬೆಳವಣಿಗೆ ಶ್ರೀನಿಧಿ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷರಾದ ಡಾ,//ಮಂಜುನಾಥ್ ಎನ್ ಶಿವಕ್ಕನವರು ಕಾರ್ಯಕ್ರಮವನ್ನು ಆಯೋಜಿಸಿದ್ದರು ಸಮ್ಮೇಳನದ ಅಧ್ಯಕ್ಷತೆಯನ್ನು ಡಾಕ್ಟರ್ ನಾಗರತ್ನ ಎಸ್ ಶೆಟ್ಟಿ ಇವರು ಅಧ್ಯಕ್ಷತೆಯನ್ನು ವಹಿಸಿದ್ದರು ಇನ್ನು ಅನೇಕ ರಾಜ್ಯಾದ್ಯಂತ ಬಂದ ಅನೇಕ ಸಮಾಜ ಸೇವಕರಿಗೆ ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಗಣ್ಯರಿಗೆ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಯಿತು…
ವರದಿ. ಎಂ. ಬಸವರಾಜ್, ಕಕ್ಕುಪ್ಪೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030