ಹಾವು ಕಚ್ಚಿ ಮೃತಪಟ್ಟ, ರೈತ ಆತ್ಮಹತ್ಯೆ ಕುಟುಂಬಗಳಿಗೆ ಪರಿಹಾರ ಮಂಜೂರು ಆದೇಶ ಪ್ರತಿ ನೀಡಿದ ಶಾಸಕ: ಡಾ. ಶ್ರೀನಿವಾಸ್ ಎನ್ ಟಿ
ದಿ: 15.11.2024 ರಂದು ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರಾದ ಡಾ.ಶ್ರೀನಿವಾಸ್ ಎನ್ ಟಿ ರವರು ಕೂಡ್ಲಿಗಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲೂಕು ಪ್ರಗತಿ ಪರಿಶೀಲನ ಸಭೆಯ ಪ್ರಾರಂಭದಲ್ಲಿ ತಾಲೂಕಿನ 1) ಗಂಗಪ್ಪ,ಗುಂಡುಮುಣುಗು ,2) ಓಬಯ್ಯ, ನರಸಿಂಹಗಿರಿ 3) ಪಾಪಮ್ಮ, ವಲಸೆ ಇವರುಗಳು ಕೆಲವು ತಿಂಗಳ ಹಿಂದೆ ಕೃಷಿ ಚಟುವಟಿಕೆಯಲ್ಲಿ ತೊಡಗಿದ ಸಂದರ್ಭದಲ್ಲಿ.
ಹಾವು ಕಚ್ಚಿ ಮೃತ ಪಟ್ಟಿದ್ದು, ಹಾಗೂ ಹಿರೇ ಕುಂಬಳಗುಂಟೆ ಗ್ರಾಮದ ಪಿ. ಹೊನ್ನೂರ್ ಸಾಬ್ ಎಂಬ ರೈತ ಆತ್ಮಹತ್ಯೆ ಮಾಡಿಕೊಂಡ ಕುಟುಂಬ ಕಡು ಬಡತನ ,ವ್ಯವಸಾಯ ಹಾಗೂ ಕೂಲಿಯನ್ನು ನಂಬಿ ಜೀವನ ನಡೆಸುತ್ತಿರುವ ದುಃಖ ತಪ್ತ ಸದ್ರಿ ಮೃತ ಕುಟುಂಬಗಳಿಗೆ ಮಾನವೀಯತೆ ಹಿತ ದೃಷ್ಟಿಯಿಂದ ಹಾವು ಕಚ್ಚಿ ಮೃತಪಟ್ಟ ಕುಟುಂಬಗಳಿಗೆ ತಲಾ 2 ಲಕ್ಷ (2,00000) ಹಾಗೂ ರೈತ ಆತ್ಮಹತ್ಯೆ ಕುಟುಂಬಗಳಿಗೆ 5 ಲಕ್ಷ (5,00000) ರೂ,ಗಳು ಪರಿಹಾರ ಧನ ಸಹಾಯದ ಮಂಜೂರು ಆದೇಶದ ಪ್ರತಿಯನ್ನು ಮಾನ್ಯ ಶಾಸಕರಾದ ಡಾ. ಶ್ರೀನಿವಾಸ್ ಎನ್ ಟಿ ರವರು ರವರು ವಿತರಿಸಿ ವಿಷವಾದ ವ್ಯಕ್ತಪಡಿಸಿ ಧೈರ್ಯ ತುಂಬಿದರು…
ವರದಿ..ವೈಮಾದೇವ್ ಕೂಡ್ಲಿಗಿ ಗ್ರಾಮಾಂತರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030