ಕೂಡ್ಲಿಗಿ ವಿಧಾನ ಸಭಾ ಕ್ಷೇತ್ರದ ಚಿಕ್ಕಜೋಗಿಹಳ್ಳಿ ಗ್ರಾಮದಲ್ಲಿ ಕಾಂಗ್ರೆಸ್ ಮುಖಂಡರು ಹಾಗೂ ಎಂ.ಎಸ್.ಟಿ. ಟ್ರಾವೆಲ್ಸ್ ವ್ಯವಸ್ಥಾಪಕರಾದ ರಹಮತ್ ಇವರ ನೂತನ ಬಸ್ಸುಗಳಿಗೆ ಮಾನ್ಯ ಶಾಸಕರಾದ ಡಾ.ಶ್ರೀನಿವಾಸ್. ಎನ್. ಟಿ. ಅವರು ದಿ; 15-11-2024 ರಂದು ಚಾಲನೆ ನೀಡಿ, ಗ್ರಾಮೀಣ ಭಾಗದ ಹಳ್ಳಿಗಳು, ರಾಜ್ಯದ ದೂರದ ನಗರಗಳಿಗೆ ಸಾರಿಗೆ ಸಂಪರ್ಕ ಸೇವೆಯನ್ನು ಒದಗಿಸಿಕೊಡುವ ಜೊತೆ ಜೊತೆಗೆ, ರಾಜ್ಯ ಮತ್ತು ದೇಶದ ವಿವಿಧ ಮೂಲೆಯಲ್ಲಿ ಪ್ರವಾಸ ಕೈಕೊಳ್ಳಲು ಎಂ.ಎಸ್.ಟಿ. ಟ್ರಾವೆಲ್ಸ್ ಗಳು ಜನರಿಗೆ ಉಪಯೋಗ ಆಗುವ ಹಿನ್ನೆಲೆಯಲ್ಲಿ ಒಳ್ಳೆಯ ರೀತಿಯಲ್ಲಿ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಿಕೊಡಲು ನೆರವಾಗಲಿ ಎಂದೂ ಶುಭ ಹಾರೈಸಿದರು* ಕಾಂಗ್ರೆಸ್ ಮುಖಂಡರು ಹಾಗೂ *ಸಮಾಜ ಸೇವಕರಾದ ಶ್ರೀಯುತ ತಮ್ಮಣ್ಣ ಎನ್.ಟಿ ಅವರು* ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರಾದ ಕೃಷ್ಣನಾಯ್ಕ್, ಗ್ರಾ. ಪಂ. ಅಧ್ಯಕ್ಷರಾದ ರಾಜೇಶ್ ನಾಯ್ಕ್, ಮಾಜಿ ತಾ. ಪಂ. ಸದಸ್ಯರಾದ ಕುರಿಹಟ್ಟಿ ಬೋಸಣ್ಣ, ರಾಜನಾಯ್ಕ್, ಹಾಗೂ ಮುಖಂಡರಾದ ಪ್ರಕಾಶ್ ಬಾಬು, ಅಬಿಉಲ್ಲ, ಗುಂಡುಮುಣುಗು ಮಂಜಣ್ಣ, ಎ. ಮಹಮ್ಮದ್ , ಬುಡ್ಡಾರೆಡ್ಡಿ, ಇನ್ನೂ ಮುಂತಾದವರು ಉಪಸ್ಥಿತರಿದ್ದರು…
ವರದಿ. ಎಂ, ಬಸವರಾಜ್ ಕಕ್ಕುಪ್ಪೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030