ದಿನಾಂಕ 17.11.2024 ರಂದು ಗೋವಾದಲ್ಲಿ ನಡೆಯುವ ಅಂತರ್ ರಾಜ್ಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಶ್ರೀನಿಧಿ ಫೌಂಡೇಶನ್ ಕರ್ನಾಟಕ ಸಮಾಜಮುಖಿ ಸೇವಾ ಸಂಘ ಕರ್ನಾಟಕ ಇವರ ವತಿಯಿಂದ ಕೂಡ್ಲಿಗಿಯ ಎಂಟು ಜನ ಕಲಾವಿದರು ಮತ್ತು ಹೋರಾಟಗಾರರಿಗೆ ಪ್ರಶಸ್ತಿ ನೀಡಿ ಗೌರವಿಸುತ್ತಿರುವುದು ಕೂಡ್ಲಿಗಿ ತಾಲೂಕಿಗೆ ಹೆಮ್ಮೆಯ ವಿಷಯ ಕೂಡ್ಲಿಗಿ ತಾಲೂಕಿನಲ್ಲಿ ತನ್ನದೇ ಚಾಪು ಮೂಡಿಸಿರುವಂತಹ ರಂಗ ಕಲಾವಿದರಾದ ಬಣಕಾರ್ ಮುಗಪ್ಪ ಕೊಟ್ರೇಶಿ ಜಯಮ್ಮನವರ ರಾಘವೇಂದ್ರ ರಾಮಚಂದ್ರಪ್ಪ ದೇವೇಂದ್ರಪ್ಪ ಮಂಜುನಾಥ್ ಜಿ ಬೇವೂರು ಇವರುಗಳು ಅನೇಕ ಪೌರಾಣಿಕ ನಾಟಕಗಳಲ್ಲಿ ಅತ್ಯುತ್ತಮವಾಗಿ ನಾಟಕವನ್ನು ಪ್ರದರ್ಶಿಸುತ್ತಾ ತನ್ನದೇ ಆದ ಛಾಪು ಮೂಡಿಸಿದ್ದಾರೆ ಇಂತಹ ಕಲಾವಿದರನ್ನು ಗುರುತಿಸಿ ಅಂತರ್ ರಾಜ್ಯ ಮಟ್ಟದಲ್ಲಿ ಸನ್ಮಾನ ಮಾಡುತ್ತಿರುವುದು ಕೂಡ್ಲಿಗಿ ತಾಲೂಕಿಗೆ ಒಂದು ಹೆಮ್ಮೆಯ ವಿಷಯವಾಗಿದೆ ಅದೇ ರೀತಿಯಾಗಿ ಕೂಡ್ಲಿಗಿ ತಾಲೂಕು ನೀರಾವರಿ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಿ ಕೂಡ್ಲಿಗಿ ತಾಲೂಕಿಗೆ ನೀರಾವರಿ ಸೌಲಭ್ಯ ಜಾರಿಯ ಆಗುವರೆಗೂ ಸುಮಾರು ವರ್ಷಗಳಿಂದ ಹೋರಾಟಗಳನ್ನು ಮಾಡುತ್ತಾ ಮುಂಚೂಣಿಯಲ್ಲಿದ್ದ ಎಂ ಬಸವರಾಜ್ ಅವರಿಗೆ ಹೋರಾಟಗಾರರನ್ನು ಗುರುತಿಸಿ ಸನ್ಮಾನಿಸುತ್ತಿರುವುದು ಇಡೀಹೋರಾಟಗಾರರಿಗೆ ತಂದ ಹೆಮ್ಮೆ ಮತ್ತು ಸಪ್ತಗಿರಿ ರಂಗನಾಥ ಶೆಟ್ರು ಕಡ್ಡಿ ಮಂಜುನಾಥ್ ಇವರು ಅನೇಕ ಸಮಾಜ ಸೇವೆಯನ್ನು ಗುರುತಿಸಿ ಪ್ರಶಸ್ತಿ ಆಯ್ಕೆ ಮಾಡಿರುವುದುಹೆಮ್ಮೆಯ ವಿಷಯ ಇದು ಹೋರಾಟಗಾರರಿಗೆ ತಂದ ಕೀರ್ತಿ ಇದಾಗಿದೆ ಇನ್ನೂ ಅನೇಕ ರಾಜ್ಯಾದ್ಯಂತ ಹಲವಾರು ರಂಗಗಳಲ್ಲಿ ತನ್ನದೇ ಆದ ಸಮಾಜಮುಖಿ ಸೇವೆಯನ್ನು ಮಾಡಿರುವಂತಹ ಹಲವಾರು ಜನರನ್ನು ಗುರುತಿಸಿ ಗೋವಾದಲ್ಲಿ ರಾಷ್ಟ್ರಮಟ್ಟದ ಪ್ರಶಸ್ತಿ ವಿತರಿಸುತ್ತಿರುವುದು ಪ್ರಶಂಶನೀಯ ಎಂದು ಪ್ರಶಸ್ತಿ ಪುರಸ್ಕೃತರು ಹೇಳಿದರು..
ವರದಿ. ಎಂ, ಬಸವರಾಜ್ ಕಕ್ಕುಪ್ಪೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030