ಈ ದಿನ ಕೂಡ್ಲಿಗಿ ತಹಸಿಲ್ದಾರರವರ ಮುಖಾಂತರ ಮುಖ್ಯಮಂತ್ರಿಗಳಿಗೆ ಅಖಿಲ ಭಾರತೀಯ ರೈತ ಪಾರ್ಟಿಯಿಂದ ಮನವಿಯನ್ನು ಸಲ್ಲಿಸಲಾಯಿತು ಇತ್ತೀಚಿಗೆ ರಾಜ್ಯಾದ್ಯಂತ ವಾಕ್ಫಮಂಡಳಿಯವರು ಭೂಮಿಯನ್ನು ನಮ್ಮದು ಎಂದು ಹೇಳುತ್ತಿರುವುದು ವಿಷಾದನೀಯ ಎಂದು ಅಖಿಲ ಭಾರತೀಯರೈತ ಪಾರ್ಟಿ ರಾಜ್ಯಾಧ್ಯಕ್ಷರಾದ ಎಸ್ ಯಶೋಧ ಇವರು ಮುಖ್ಯಮಂತ್ರಿಗಳಿಗೆ ತಹಸೀಲ್ದಾರ್ ರವರ ಮುಖಾಂತರ ಮನವಿಯನ್ನು ಸಲ್ಲಿಸಲಾಯಿತು ಇದೇ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಶಿವಾನಂದ ಸ್ವಾಮಿ ಮಾತನಾಡಿ ಯಾವುದೇ ಕಾರಣಕ್ಕೂ ನಾವು ನಮ್ಮ ಭೂಮಿಯನ್ನು ವಾಕ್ಮಂಡಳಿಗೆ ಬಿಟ್ಟು ಕೊಡುವುದಿಲ್ಲ ಎಂದು ಹೇಳಿದರು ಮತ್ತು ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ಎಂ ಬಸವರಾಜ್ ಕಕ್ಕುಪ್ಪಿ ಇವರು ಮಾತನಾಡಿ ಯಾವ ಕಾರಣಕ್ಕೂ ನಾವು ತಲೆತಲಾಂತರದಿಂದ ಮಾಡಿಕೊಂಡು ಬಂದಿರುವ ಭೂಮಿಯನ್ನು ಯಾರೋ ಕೇಳುತ್ತಾರೆಂದು ಕೊಡುವುದು ನಮ್ಮಿಂದ ಸಾಧ್ಯವಿಲ್ಲ ಏನೇ ಆದರೂ ಕೂಡ ನಮ್ಮ ಭೂಮಿಗಳನ್ನು ನಾವು ಯಾವ ಕಾರಣಕ್ಕೂ ಬಿಟ್ಟುಕೊಡುವುದಿಲ್ಲ ಎಂದು ಆಕ್ರೋಶವಾಗಿ ನುಡಿದರು ಮತ್ತು ಇತ್ತೀಚಿಗೆ ಸುರಿದ ಭಾರಿ ಮಳೆಯಿಂದ ಅನೇಕ ಬೆಳೆಗಳು ನಷ್ಟವಾಗಿದ್ದು ರೈತ ಸಂಪೂರ್ಣ ಸಂಕಷ್ಟಕ್ಕೆ ಈಡಾಗಿದ್ದು ಮುಖ್ಯಮಂತ್ರಿಗಳು ಈ ಕೂಡಲೇ ರೈತರ ಸಂಕಷ್ಟಕ್ಕೆ ನೆರವಾಗಬೇಕು ಎಂದು ಹೇಳಿದರು ಈ ಸಂದರ್ಭದಲ್ಲಿ ತಾಲೂಕಾಧ್ಯಕ್ಷರಾದ ಚನ್ನಬಸಪ್ಪ ಮಹಿಳಾ ತಾಲೂಕ ಅಧ್ಯಕ್ಷರಾದ ಟಿ ಭಾಗ್ಯ ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾದ ಕೆ ಕೃಷ್ಣ ಕೂಡ್ಲಿಗಿ ವೀರಭದ್ರಪ್ಪ ಉಪಾಧ್ಯಕ್ಷರು ಜೆ ಕೃಪಾoಕ ರಾಜ್ಯ ಖಜಾನ್ಸಿ ಮಂಗಳ ಎಚ್ಎಮ್ ಪುಷ್ಪಾವತಿ ರಂಗಣ್ಣನವರ ಅಂಬಿಕಾ ಇನ್ನೂ ಅನೇಕ ರೈತ ಮುಖಂಡರು ಮತ್ತು ರೈತ ಮಹಿಳೆಯರು ಹಾಜರಿದ್ದರು…
ವರದಿ. ಎಂ. ಬಸವರಾಜ್ ಕಕ್ಕುಪ್ಪೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030