ಬಿಡುವು ಇಲ್ಲದೇ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡ – ಶ್ರೀಯುತ ತಮ್ಮಣ್ಣ ಎನ್. ಟಿ
ಕೂಡ್ಲಿಗಿ ತಾಲೂಕಿನ ಕಾಂಗ್ರೆಸ್ ಮುಖಂಡರು ಹಾಗೂ ಸಮಾಜ ಸೇವಕರಾದ ಶ್ರೀಯುತ ತಮ್ಮಣ್ಣ ಎನ್. ಟಿ. ಅವರು* ದಿ; 08-11-2024 ರಂದು *ಶ್ರೀ ಊರಮ್ಮ ದೇವಸ್ಥಾನದ ಲೋಕಾರ್ಪಣೆಯ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಪೂಜೆಸಲ್ಲಿಸಿದರು. ಕಾಂಗ್ರೆಸ್ ಮುಖಂಡರಾದ ಕಾಟೇರ ಲಂಕೇಶ್ ಅವರು ಹಾಗೂ ಗೆದ್ದಲಗಟ್ಟೆ ಶ್ರೀಮತಿ ತಿಪ್ಪಕ್ಕ ನಾಗರಾಜ ಇವರ ಗೃಹಪ್ರವೇಶದಲ್ಲಿ ಸ್ಥಳೀಯ ಮುಖಂಡರ ಜೊತೆಗೆ ಭಾಗಿಯಾಗಿದ್ದರು. ಇನ್ನೂ ಖಾನಹೊಸಹಳ್ಳಿ ಭಾಗದ ಮಾಜಿ ಪಿ.ಎಲ್. ಡಿ. ಬ್ಯಾಂಕ್ ಅಧ್ಯಕ್ಷರಾದ ಸತೀಶ್ ಅವರ ಗೊಬ್ಬರದ ಅಂಗಡಿಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭ ಹಾರೈಸಿದರು. ಒಟ್ಟಿನಲ್ಲಿ ದಿನ ವಿಡೀ ವಿವಿಧ ಕಾರ್ಯಕ್ರಮಗಳಲ್ಲಿ ಬಿಡುವಿಲ್ಲದೇ ನಿರಂತರವಾಗಿ ತೊಡಗಿಸಿಕೊಂಡ ಶ್ರೀಯುತ ತಮ್ಮಣ್ಣ ಎನ್. ಟಿ. ಅವರು ಜನರ ಮಧ್ಯೆ ಅನ್ಯೋನ್ಯವಾಗಿ ಬೆರೆತರು. ಈ ಸಂದರ್ಭದಲ್ಲಿ ಮುಖಂಡರು, ಆಪ್ತ ಬಂಧುಗಳು, ಹಿತೈಷಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು…
ವರದಿ, ಅನಿಲ್ ಕುಮಾರ್, ಹುಲಿಕುಂಟೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030