ಪಡಿತರ ಚೀಟಿಗಳ ತಾಂತ್ರಿಕ ದೋಷ ಸರಿಪಡಿಸಲು ಸರ್ಕಾರಕ್ಕೆ ಮನವಿ ಮಾಡಿದ ಶಾಸಕ – ಡಾ. ಶ್ರೀನಿವಾಸ್. ಎನ್. ಟಿ. ವಿಜಯನಗರ ಜಿಲ್ಲೆ
ಕೂಡ್ಲಿಗಿ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಇತ್ತೀಚಿನ ಕೆಲವು ದಿನಗಳಲ್ಲಿ 1519 ಪಡಿತರ ಚೀಟಿಗಳು, ಅಮಾನುತುಗೊಂಡಿದ್ದು, ಇದರಲ್ಲಿ 265 ಅಂತ್ಯೋದಯ ಪಡಿತರ ಚೀಟಿಗಳು, ಮತ್ತು 1254 ಬಿಪಿಎಲ್ ಪಡಿತರ ಚೀಟಿಗಳು ಅಮಾನತುಗೊಂಡಿರುವುದರಿಂದ ಜನರು ಆತಂಕಗೊಂಡಿದ್ದರು. ಆ ಹಿನ್ನೆಲೆಯಲ್ಲಿ ಕೂಡ್ಲಿಗಿ ವಿಧಾನ ಸಭಾ ಕ್ಷೇತ್ರದ ಮಾನ್ಯಶಾಸಕರಾದ ಡಾ. ಶ್ರೀನಿವಾಸ್. ಎನ್. ಟಿ. ಅವರು ತಮ್ಮ ಕ್ಷೇತ್ರದಲ್ಲಿ ಪಡಿತರ ಚೀಟಿಯಲ್ಲಿ ಆಗಿರುವ ತಾಂತ್ರಿಕ ದೋಷಗಳನ್ನು ಸರಿಪಡಿಸಲು ಕರ್ನಾಟಕ ಘನ ಸರ್ಕಾರದ ಉನ್ನತ ಮಟ್ಟದಲ್ಲಿ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ನವರನ್ನು ಹಾಗೂ ಮಾನ್ಯ ಆಹಾರ ನಾಗರಿಕ ಸರಬರಾಜು ಸಚಿವರಾದ ಶ್ರೀಯುತ ಮುನಿಯಪ್ಪ ಕೆ. ಹೆಚ್. ಅವರಿಗೆ ಮನವಿ ಮಾಡಿ ಇದನ್ನು ಸರ್ಕಾರದ ಮಟ್ಟದಲ್ಲಿ ಗಂಭೀರವಾಗಿ ಪರಿಗಣಿಸಿ ಕೂಡಲೇ ಬಗೆಹರಿಸಬೇಕು ಎಂದೂ ಕಳಕಳಿಯಿಂದ ಮನವಿ ಮಾಡಿಕೊಂಡರು…
ವರದಿ…ವೈಮಹದೇವ್ ಕೂಡ್ಲಿಗಿ ಗ್ರಾಮಾಂತರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030