ಕೂಡ್ಲಿಗಿ : ಕೇಬಲ್ ಆಪರೇಟರ್ ಹಾವನ್ನು ಹುಡುಕಿ ಹಿಡಿಯುವ ನಿಪುಣ
ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ವಿರುಪಾಪುರ ಗ್ರಾಮದ ಬಸವನಗೌಡ ತಂದೆ ಕೆ. ಕರಿನಂದಪ್ಪ ಇವರು ಹಾವುಗಳನ್ನು ಹಿಡಿಯುವುದರಲ್ಲಿ ನಿಪುಣರಾಗಿದ್ದಾರೆ ಮಧ್ಯರಾತ್ರಿ ಕರೆದರು ಬೈಕಿನಲ್ಲಿ ಹೊರಡುತ್ತಾರೆ ಹಾವು ಎಷ್ಟೇ ವಿಷಕಾರಿಯಾಗಿದ್ದರು ಅದನ್ನು ಹಿಡಿಯುತ್ತಾರೆ. ಹಿಡಿದಿರುವ ಹಾವಿನ ವಿಶೇಷತೆ ಇಲ್ಲಿಗೇಕೆ ಬಂದಿರಬಹುದು ಎಂಬುದರ ಕುರಿತು ಅಲ್ಲಿದ್ದವರಿಗೆ ವಿವರಣೆ ನೀಡುತ್ತಾರೆ ಹೊಲದಲ್ಲಿ ರಾಶಿ ಮಾಡಿರುವ ಸ್ಥಳದಲ್ಲಿ ಅಡಗಿ ಕುಳಿತಿರುವ, ಬಚ್ಚಲು ಮನೆಯ ಸಂಧಿಯಲ್ಲಿ ಹಡಗಿರುವ, ರಸ್ತೆ ಪಕ್ಕ ಕುಳಿತು ವಾಹನ ಸವಾರರಿಗೆ ಭಯ ಹುಟ್ಟಿಸಿರುವ, ಹಂಚಿನ ಅಡಿಯಲ್ಲಿ ಕುಳಿತಿರುವ, ಈ ರೀತಿ ಹಾವು ಎಲ್ಲಿಯೇ ಇದ್ದರು ಅದನ್ನು ಹಿಡಿಯುತ್ತಾರೆ ಇವರು ಹಿಡಿದಿರುವ ಹಾವುಗಳನ್ನು ಸುರಕ್ಷಿತವಾಗಿ ಅರಣ್ಯ ಪ್ರದೇಶಕ್ಕೆ ಬಿಡುತ್ತಾರೆ.
ನಾಗರಹಾವು ಮಾತ್ರ ದೇವರ ಹಾವು ಎಂಬ ನಂಬಿಕೆ ಜನರಲ್ಲಿದೆ ಆದ್ದರಿಂದ ಅದಕ್ಕೆ ಒಡೆಯುವುದಿಲ್ಲ ಆದರೆ ಬೇರೆ ಜಾತಿಯ ಹಾವುಗಳಿದ್ದರೆ ಒಡೆಯಲು ಪ್ರಯತ್ನಿಸುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು ಸುಮಾರು 35 ವರ್ಷದಿಂದ ವೃತ್ತಿಯಲ್ಲಿ ತೊಡಗಿದ್ದಾರೆ ಜೀವನ ಪಣವಿಟ್ಟು ಹಾವು ಹಿಡಿಯುತ್ತಿದ್ದಾರೆ. ಕರಿ ನಾಗ, ಗೋದಿ ನಾಗ, ಕೆರೆ ಹಾವು, ಬಿಲ್ಲು ಸುರುಗ, ಕ್ಯಾಟ್ ಸ್ನೇಕ್, ಹುರುಮಂಡಲ, ಹಸಿರು ಹಾವು, ಕೆಟ್ಟ ಹುಳ, ಕಟ್ ಹಾವು ಇದೇ ತರಹದ ಸುಮಾರು 1276 ಹಾವುಗಳನ್ನು ಹಿಡಿದು ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ ಇವರಿಗೆ ಪ್ರಥಮ ಸನ್ಮಾನ ಆಗಸ್ಟ್ 15 ಗೇರನಹಳ್ಳಿ ಶಾಲೆ, ಎರಡನೇ ಸನ್ಮಾನ ಕೂಡ್ಲಿಗಿ ಪ್ರವಾಸಿ ಮಂದಿರ ದಲ್ಲಿ ಸನ್ಮಾನ ಮಾಡಲಾಗಿದೆ ಹಾವು ಎಲ್ಲೇಕಂಡರು ಗಾಬರಿಯಾಗಬೇಡಿ ಅಥವಾ ಕೊಲ್ಲಬೇಡಿ ಅಗತ್ಯವಿದ್ದಾಗ ಸಂಪರ್ಕಿಸಿ 9880088958 ಈ ನಂಬರಿಗೆ ಕರೆ ಮಾಡಿ ಎಂದು ಕೂಡ್ಲಿಗಿ ತಿರುಮಲ ಡಾಬಾ ವೆಂಕಟೇಶ್ ತಿಳಿಸಿದ್ದಾರೆ…
ವರದಿ: ಅನಿಲ್ ಕುಮಾರ್ ಹುಲಿಕುಂಟೆ.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030