ಶ್ರೀ ಊರಮ್ಮದೇವಿಯ ದೇವಸ್ಥಾನವನ್ನು ಲೋಪಾರ್ಣಣೆಗೊಳಿಸಿ ಸಾಮಾಜಿಕ ಬದಲಾವಣೆಗೆ ಶ್ರಮಿಸೋಣ ಎಂದ- ಶಾಸಕ ಡಾ. ಶ್ರೀನಿವಾಸ್. ಎನ್. ಟಿ
ಕೂಡ್ಲಿಗಿ ವಿಧಾನ ಸಭಾ ಕ್ಷೇತ್ರದ ಪಟ್ಟಣದ ಶ್ರೀ ಊರಮ್ಮದೇವಿಯ ನೂತನ ದೇವಸ್ಥಾನವನ್ನು ದಿ; 08-11-2024 ರಂದು ಮಾನ್ಯಶಾಸಕರಾದ ಡಾ. ಶ್ರೀನಿವಾಸ್. ಎನ್.ಟಿ. ಅವರು ಸರ್ವ ಭಕ್ತರ ಸಮ್ಮುಖದಲ್ಲಿ ಭಕ್ತಿ ಮತ್ತು ಭಾವನೆಯಿಂದ ಪೂಜೆಯನ್ನು ನೆರವೇರಿಸಿ ಲೋಕಾರ್ಪಣೆಗೊಳಿಸಿದರು.
ಶಾಸಕರು ಮಾತನಾಡುತ್ತಾ, ನಮ್ಮಲ್ಲಿ ಎಲ್ಲರೂ ಹಗಲು ಇರಳು ಎನ್ನದೇ ಶ್ರಮವಹಿಸಿ ಕೆಲವೇ ತಿಂಗಳಲ್ಲಿ ದೇವಸ್ಥಾನವನ್ನು ನಿರ್ಮಸಿರುವಂತದ್ದು ಸಂತಸ ತಂದಿದೆ ಎಂದರು. ದೇವತೆಯ ಆಶೀರ್ವಾದದಿಂದ ಈ ಬಾರಿ ಒಳ್ಳೆಯ ಮಳೆಯಿಂದಾಗಿ ಕ್ಷೇತ್ರದ ಜನ ಸಮೃದ್ಧಿಯಿಂದ ಜೀವಿಸುವ ವಾತಾವರಣವಿದೆ. ನಾವು ಎಲ್ಲರೂ ದೇವತೆಯ ಕೃಪೆಗೆ ಪಾತ್ರರಾಗುವ ನಿಟ್ಟಿನಲ್ಲಿ ಸಾಮಾಜಿಕ ಬದಲಾವಣೆಗೆ ಶ್ರಮಿಸೋಣ ಎಂದರು.
ದೇವಸ್ಥಾನ ನಿರ್ಮಾಣದಿಂದ ಇಡಿದು ಲೋಕಾರ್ಪಣೆವರೆಗೂ ಶ್ರಮಿಸಿದ ಆಡಳಿತ ಮಂಡಳಿಯ ಅಧ್ಯಕ್ಷರು ಮತ್ತು ಸರ್ವಸದಸ್ಯರನ್ನು ಶಾಸಕರು ಸನ್ಮಾನಿಸಿದರು. ಈ ವೇಳೆ ಪಟ್ಟಣ ಪಂಚಾಯತಿಯ ಅಧ್ಯಕ್ಷರಾದ ಶ್ರೀ ಕಾವಲ್ಲಿ ಶಿವಪ್ಪನಾಯಕ, ಸರ್ವ ಸದಸ್ಯರು, ಮುಖಂಡರಾದ ಉದಯಜನ್ನು, ಜಿಂಕಲ್ ನಾಗಮಣಿ, ರಾಘವೇಂದ್ರ, ಕಡ್ಡಿ ಮಂಜಣ್ಣ, ಸುನೀಲ್ ಗೌಡ, ದುರ್ಗೇಶ, ಜಯಮ್ಮನವರ ರಾಘವೇಂದ್ರ, ಸ್ಪಂದನಾ ಸಂಸ್ಥೆಯ ಗಿರೀಶ್, ದೇವಸ್ಥಾನ ಆಡಳಿತ ಮಂಡಳಿಯ ಅಧ್ಯಕ್ಷರು – ಸದಸ್ಯರು ಉಪಸ್ಥಿತದ್ದರು…
ವರದಿ. ಎಂ. ಬಸವರಾಜ್, ಕಕ್ಕುಪ್ಪೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030