ತಾಲೂಕು ಸಂಘಕ್ಕೆ ಒಟ್ಟು 32 ಸ್ಥಾನಗಳಿದ್ದು, ಆ ಪೈಕಿ 22 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿತ್ತು. ಇದೀಗ, ಪ್ರಾಥಮಿಕ ಶಾಲೆ-5 ಪ್ರೌಢಶಾಲೆ -2 ಹಾಗೂ ಆರೋಗ್ಯ ಇಲಾಖೆ, ಬಿಸಿಎಂ ಹಾಸ್ಟೆಲ್ ಹಾಗೂ ಡಿಪ್ಲೊಮಾ ಕಾಲೇಜ್ ತಲಾ 1 ಸ್ಥಾನ ಸೇರಿ 10 ಸ್ಥಾನಗಳಿಗೆ ಮತದಾನ ನಡೆಯಿತು. ಪ್ರಾಥಮಿಕ ಶಾಲೆ ಶಿಕ್ಷಕರಿಗೆ 2 ಕೊಠಡಿಗಳಲ್ಲಿ ಮತದಾನ ಪ್ರಕ್ರಿಯೆ ನಡೆದರೆ, ಪ್ರೌಢ, ಆರೋಗ್ಯ, ಬಿಸಿಎಂ ಹಾಸ್ಟೆಲ್ ಹಾಗೂ ಪಾಲಿಟೆಕ್ನಿಕ್ ಕಾಲೇಜಿನ ಸ್ಥಾನಗಳಿಗೆ ತಲಾ 1 ಕೊಠಡಿಯಲ್ಲಿ ಮತದಾನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಪ್ರಾಥಮಿಕ ಶಾಲೆಗೆ ಸಂಬoಧಿಸಿದ ಒಟ್ಟು 779 ಮತದಾರರು ಇರುವುದರಿಂದ ಮತಕೇಂದ್ರಗಳ ಬಳಿ ಸರದಿ ಸಾಲಿನಲ್ಲಿ ನಿಂತು ಮತದಾರರು ಹಕ್ಕು ಚಲಾಯಿಸಿದರು. ಪ್ರಾಥಮಿಕ ಶಾಲೆಯ 5 ಸ್ಥಾನಗಳಿಗೆ 10 ಅಭ್ಯರ್ಥಿಗಳು, ಪ್ರೌಢಶಾಲೆಯ 2 ಸ್ಥಾನಕ್ಕೆ 4 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಅದರಂತೆ, ಆರೋಗ್ಯ, ಬಿಸಿಎಂ ಹಾಸ್ಟೆಲ್ ಹಾಗೂ ಪಾಲಿಟೆಕ್ನಿಕ್ ಕಾಲೇಜು ತಲಾ 1 ಸ್ಥಾನಕ್ಕೆ ತಲಾ ಇಬ್ಬರು ಅಭ್ಯರ್ಥಿಗಳು ಕಣದಲ್ಲಿದ್ದರು. ಐದು ಕೊಠಡಿಗಳಲ್ಲೂ ಪ್ರತ್ಯೇಕವಾಗಿ ಪಿಆರ್‌ಒ, ಎಪಿಆರ್‌ಒ ಸೇರಿ ಸಿಬ್ಬಂದಿ ಚುನಾವಣಾ ಕರ್ತವ್ಯ ನಿರ್ವಹಿಸಿದರು.
1133 ಮತ ಚಲಾವಣೆ: ಸರಕಾರಿ ನೌಕರರ ಸಂಘದ ತಾಲೂಕು ಘಟಕಕ್ಕೆ ಪ್ರಾಥಮಿಕ ಶಾಲೆಯ 798 ಮತಗಳ ಪೈಕಿ 771 ಚಲಾವಣೆಯಾಗಿವೆ. ಅದರಂತೆ, ಪ್ರೌಢಶಾಲೆಯ 176ರಲ್ಲಿ 166, ಆರೋಗ್ಯ ಇಲಾಖೆಯ 142ರ ಪೈಕಿ 124, ಬಿಸಿಎಂ ಹಾಸ್ಟೆಲ್ 50ರ ಪೈಕಿ 45 ಹಾಗೂ ಪಾಲಿಟೆಕ್ನಿಕ್ ಕಾಲೇಜಿನ 30 ಮತದಾರರ ಪೈಕಿ 27 ನೌಕರರು ಸೇರಿ ಒಟ್ಟು 1133 ಹಕ್ಕು ಚಲಾವಣೆಯಾಗಿವೆ ಎಂದು ಚುನಾವಣಾಧಿಕಾರಿ ಹಾಗೂ ಬಿಸಿಯೂಟ ಸಹಾಯಕ ನಿರ್ದೇಶಕ ಕೆ.ಜಿ.ಆಂಜನೇಯ, ಸಹಾಯಕ ಚುನಾವಣಾಧಿಕಾರಿ ಕೆ.ಗೂಳೆಪ್ಪ ತಿಳಿಸಿದ್ದಾರೆ.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ 2024-2029ರವರೆಗಿನ ಕೂಡ್ಲಿಗಿ ತಾಲೂಕು 32ನಿರ್ದೇಶಕರ ಸ್ಥಾನಕ್ಕೆ 22 ಮಂದಿ ಅವಿರೋಧ ಆಯ್ಕೆಯಾದಂತೆ ಹೆಸರುಗಳು ಇಂತಿವೆ.
ಹಾಜೀ ಮಲ್ಲಂಗ (ಕೃಷಿ ಇಲಾಖೆ),ಯು ನೈನಪ್ಪ (ಪಶುಪಾಲನೆ ಇಲಾಖೆ ), ಸವಿತಾ .(ಕಂದಾಯ ಇಲಾಖೆ), ತಳವಾರ್ ಪ್ರಭು. (ಕಂದಾಯ ಇಲಾಖೆ), ಹೈದರ್ (ಲೋಕೋಪಯೋಗಿ ಇಲಾಖೆ), ನಾಗರಾಜ್ (ಗ್ರಾಮೀಣ ಕುಡಿಯು ನೀರು ಇಲಾಖೆ), ಮಹೇಂದ್ರಕುಮಾರ್ (ಬೋಧಕೇತರ ಸಿಬ್ಬಂದಿ ),
ನಾಗರಾಜ್ (ಪಿಯು ಕಾಲೇಜು ವಿಭಾಗ),
ಶ್ರೀಕಾಂತ್ ( ಸಮಾಜ ಕಲ್ಯಾಣ ಇಲಾಖೆ),
ಕುಬೇರ ಕೆ ಬಿ. (ಅರಣ್ಯ ಇಲಾಖೆ), ನಾಗೇಶಯ್ಯ (ಆರೋಗ್ಯ ಇಲಾಖೆ), ಎಂ ಆರ್ ಬಸವರಾಜ್. (ಆರೋಗ್ಯ ಇಲಾಖೆ), ಭಾರತಿ (ಆರೋಗ್ಯ ಇಲಾಖೆ),
ನರೇಶ್ ಎಂ ( ರೇಷ್ಮೆ ಇಲಾಖೆ),
ಶ್ರೀನಿವಾಸ (ಉಪ ಖಜಾನೆ), ನಾಗರಾಜ್ ಹೆಚ್ (ಭೂ ಮಾಪನ ಇಲಾಖೆ), ಮಂಗಳ (ನ್ಯಾಯಾಂಗ ಇಲಾಖೆ), ವೆಂಕಟೇಶ (ತಾಲೂಕು ಪಂಚಾಯಿತಿ),
ರಾಮ ಕೃಷ್ಣ (ತಾಲೂಕು ಪಂಚಾಯಿತಿ),
ಅನುಪಮ ( ಶಿಶು ಅಭಿವೃದ್ಧಿ ಇಲಾಖೆ ),
ವಾಣಿ ಶ್ರೀ (ಆಹಾರ ನಾಗರಿಕ ಇಲಾಖೆ) ಹಾಗೂ ಟಿ ನಾಗರಾಜ್ (ಅಬಕಾರಿ ಇಲಾಖೆ)ಇವರುಗಳು ಅವಿರೋಧ ಆಯ್ಕೆಯಾಗಿದ್ದಾರೆ.
ಉಳಿದಂತೆ ಇನ್ನುಳಿದ 10ಸ್ಥಾನಗಳಿಗೆ ಸೋಮವಾರ ಬೆಳಿಗ್ಗೆಯಿಂದ ಸಂಜೆವರೆಗೆ ನಡೆದ ಚುನಾವಣೆ ಮತದಾನ ಪ್ರಕ್ರಿಯೆ ಪೊಲೀಸ್ ಬಿಗಿ ಬಂದೋಬಸ್ತ್ ನಲ್ಲಿ ಮುಗಿದ ನಂತರ ಸಂಜೆ 5 ಗಂಟೆ ನಂತರ ಬ್ಯಾಲೆಟ್ ಮತ ಎಣಿಕೆ ಕಾರ್ಯ ನಡೆಸಲಾಗಿ ನಿನ್ನೆ ರಾತ್ರಿ 11ಗಂಟೆ ಸಮಯಕ್ಕೆ 10ಸ್ಥಾನಗಳ 20ಅಭ್ಯರ್ಥಿಗಳ ಹಣೆಬರಹ ಹೊರಬೀಳುತ್ತೀದ್ದಂತೆ ಸ್ವಾಭಿಮಾನಿ ಶಿಕ್ಷಕರ ಬಳಗದ ತಂಡ ಹೆಚ್ಚಿನ ಗೆಲುವಿನ ನಗೆ ಬೀರಿದೆ. ಪ್ರೌಢ ಶಾಲೆಯ ವಿಭಾಗದ ಎರಡು ಸ್ಥಾನಕ್ಕೆ ಶಿವಾನಂದಸ್ವಾಮಿ ಕೆ ಪಿಎಂ ಮತ್ತು ಮುತ್ತುರಾಜ್ ಎಂ ಎಸ್ ಗೆಲುವು ಪಡೆದರೆ ತೀರಾ ಜಿದ್ದಾಜಿದ್ದಿಯಾಗಿದ್ದ ಪ್ರಾಥಮಿಕ ಶಾಲಾ ಶಿಕ್ಷಕರ ವಿಭಾಗದ ಐದು ಸ್ಥಾನಕ್ಕೆ ಆರ್ ಬಿ ಬಸವರಾಜ್. ಎಂ ಮಂಜುನಾಥ. ಪಾಂಡುರಂಗ. ದೊಡ್ಡಪ್ಪ ಹಾಗೂ .ಪ್ರವೀಣ್ ಸ್ವಾಭಿಮಾನಿ ಶಿಕ್ಷಕರ ಬಳಗ ಐದಕ್ಕೆ ಐದು ಸ್ಥಾನ ಪಡೆದು ಗೆಲುವಿನ ನಗೆ ಬೀರಿದರು. ಅದೇ ರೀತಿಯಾಗಿ ಆರೋಗ್ಯ ಇಲಾಖೆಯಿಂದ ಶರಣೇಶ, ಬಿಸಿಎಂಹಾಸ್ಟೆಲ್ ನಿಂದ ಕುಮಾರಸ್ವಾಮಿ. ಡಿಪ್ಲೊಮ ಕಾಲೇಜ್ ನಿಂದ ರಾಘವೇಂದ್ರ ಗೆಲುವು ಸಾಧಿಸಿ ಈ ಬಾರಿ ಚುನಾವಣೆಯಲ್ಲಿ ಸರ್ಕಾರಿ ನೌಕರರ ಸಂಘದ ಸದಸ್ಯರಾಗಿದ್ದಾರೆ. ಎಂದು ಶಿವರಾಜ್ ಅಧ್ಯಕ್ಷರು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಕಳೆದ ಸಾಲಿನ ಅಧ್ಯಕ್ಷ ಪಿ ಶಿವರಾಜ್ ಪತ್ರಿಕಾ ಪ್ರಕಟಣೆಗೆ ತಿಳಿಸಿದರು.
ಶಿಕ್ಷಣ ಕ್ಷೇತ್ರದಲ್ಲಿ ತೀವ್ರ ಪೈಪೋಟಿ: ಕೂಡ್ಲಿಗಿ ತಾಲೂಕು ಸರಕಾರಿ ನೌಕರರ ಸಂಘದ ಚುನಾವಣೆ ಹಿನ್ನೆಲೆ ಪ್ರಾಥಮಿಕ ಶಾಲೆಯ ಶಿಕ್ಷಕರ 5 ಸ್ಥಾನಗಳಿಗೆ ತೀವ್ರ ಸ್ಪರ್ಧೆ ಏರ್ಪಟ್ಟಿತ್ತು. ಹೆಚ್ಚಿನ ಸಂಖ್ಯೆಯಲ್ಲಿ ಎರಡು ಗುಂಪಿನಲ್ಲಿ ಶಿಕ್ಷಕರ ತಮ್ಮ ಪರವಾದ ಟೀಮ್ ಬೆಂಬಲಿಸುತ್ತಿದ್ದರು. ಅದರಂತೆ, ಕೇವಲ 30 ಮತದಾರರಿರುವ ಪಾಲಿಟೆಕ್ನಿಕ್ ಕಾಲೇಜಿನ 1 ಸ್ಥಾನಕ್ಕೆ ಇಬ್ಬರು ಸ್ಪರ್ಧಿಸಿರುವುದು ಎಲ್ಲರ ಕುತೂಹಲ ಮೂಡಿಸಿತು. ತಾಲೂಕಿನ ಕಾನಹೊಸಹಳ್ಳಿ, ಗುಡೇಕೋಟೆ ಸೇರಿ ನಾನಾ ಭಾಗದಿಂದ ಸರಕಾರಿ ನೌಕರರು, ಶಿಕ್ಷಕರು ಗುಂಪು ಗುಂಪಾಗಿ,ಟ್ರಾಕ್ಸ್, ಬೈಕ್ ಹಾಗೂ ಕಾರು ಸೇರಿ ನಾನಾ ವಾಹನಗಳಲ್ಲಿ ಆಗಮಿಸಿ ತಮ್ಮ ಮತದಾನದ ಹಕ್ಕು ಚಲಾಯಿಸಿದರು…
ವರದಿ. ಎಂ. ಬಸವರಾಜ್ ಕಕ್ಕುಪ್ಪೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030