ಕೂಡ್ಲಿಗಿ: ತಾಲೂಕಿನ ಕಾನ ಹೊಸಹಳ್ಳಿ ಪಟ್ಟಣದ ಗಾಣಿಗರ ಸಮುದಾಯ ಭವನದಲ್ಲಿ ಭಾನುವಾರ ನಡೆದ ಜಂಗಮ ಸಮಾಜ ಸಂಸ್ಥೆ ಉದ್ಘಾಟನೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದ ಸಾನ್ನಿಧ್ಯವನ್ನು ಶೀ ಮ.ನಿ.ಪ್ರ ಶಂಕರಸ್ವಾಮಿಗಳು, ಕ್ರಿಯ ಮೂರ್ತಿಗಳು, ಮಹಲ್ ಮಠ, ಕೊಟ್ಟೂರು ವಹಿಸಿ ಮಾತನಾಡಿದ ಅವರು ಜಂಗಮ ಸಮುದಾಯದವರು ಯಾವಾಗಲೂ ಸಮಾಜ ಕಟ್ಟುವ ಕೆಲಸ ಮಾಡುತ್ತ ಬಂದಿದ್ದಾರೆ. ಬೇಡಜಂಗಮರು ವಿಚಾರವಂತರು, ಜ್ಞಾನದಾಸೋಹಿಗಳು ಇವರ ಪ್ರೋತ್ಸಾಹದಿಂದ ಅನೇಕ ವಿದ್ಯಾರ್ಥಿಗಳು ಮಠಮಾನ್ಯಗಳ ಪ್ರಸಾದ ನಿಲಯಗಳಲ್ಲಿ ವ್ಯಾಸಂಗ ಮಾಡಿ ಸಮಾಜದಲ್ಲಿ ಉನ್ನತ ಸ್ಥಾನಮಾನಗಳನ್ನು ಹೊಂದಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದ ಮುಖ್ಯ ಭಾಷಣಕಾರರಾಗಿ ಎನ್.ಎಂ ರವಿಕುಮಾರ್, ಸಾಹಿತಿಗಳು ಮಾತನಾಡಿ ಸಂವಿಧಾನಾತ್ಮಕವಾಗಿ ಮೀಸಲಾತಿಯನ್ನು ಕೇಳುತ್ತಿದ್ದೇವೆಯೇ ವಿನಃ ಬೇರೆ ಯಾವುದೇ ಉದ್ದೇಶವಿಲ್ಲ. ಸಮುದಾಯದ ಅಭಿವೃದ್ಧಿಗೆ ಮೀಸಲಾತಿ ಅವಶ್ಯಕ ಹಾಗಾಗಿ ಸಂಘಟನೆಯ ಬಲ ಇಟ್ಟುಕೊಂಡು ಒಂದಾದರೆ ಮಾತ್ರ ಸಮಾಜದ ಉಳಿವು ಸಾಧ್ಯ. ಬೇಡಿಕೆಗಳನ್ನು ಈಡೇರಿಸಬೇಕು ಎಂದು ಹಲವು ಸಮುದಾಯಗಳು ಹೋರಾಟ ಮಾಡುತ್ತಿವೆ. ರಾಜ್ಯ ಸರ್ಕಾರ ಎಲ್ಲರ ಬೇಡಿಕೆಗಳಿಗೆ ಮನ್ನಣೆ ನೀಡಬೇಕು’ ಎಂದು ಆಗ್ರಹಿಸಿದರು.
ಈ ವೇಳೆ ಐ.ದಾರುಕೇಶ್ ಉಪಾಧ್ಯಕ್ಷರು ಬಿಡಿಸಿಸಿ ಬ್ಯಾಂಕ್ ಹೊಸಪೇಟೆ ಇವರು ಮಾತನಾಡಿ ಮೀಸಲಾತಿ ಕಲ್ಪಿಸುವಂತೆ ಹಲವು ದಶಕಗಳಿಂದ ಸರ್ಕಾರಗಳಿಗೆ ಮನವಿ ಸಲ್ಲಿಸುತ್ತಲೇ ಇದ್ದೇವೆ. ಆದರೆ ಯಾವ ಸರ್ಕಾರವೂ ಈ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಇಲ್ಲಿಯವರೆಗೂ ಸುಮ್ಮನಿದ್ದೆವು. ಮುಂದೆಯೂ ಹೀಗೆಯೇ ಇರುತ್ತೇವೆ ಎಂಬುದು ಭ್ರಮೆ. ಯಾವುದೇ ಕಾರಣಕ್ಕೂ ಮೀಸಲಾತಿ ವಿಚಾರದಲ್ಲಿ ಸುಮ್ಮನೆ ಕೂರುವುದಿಲ್ಲ. ತಕ್ಷಣ ಸಮುದಾಯದ ಮುಖಂಡರು, ಯುವಕರು ಸಂಘಟಿತರಾಗಬೇಕು. ನಮ್ಮ ಹಕ್ಕನ್ನು ಪಡೆದೇ ತೀರುವ ಗುರಿ ಇಟ್ಟುಕೊಂಡು ಮುನ್ನಡೆಯಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮವನ್ನು ಗಣ್ಯಮಾನ್ಯರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ಜಂಗಮ ಸಮಾಜದ ವಿದ್ಯಾರ್ಥಿಗಳಿಗೆ ಹಾಗೂ ವೃತ್ತಿಯಲ್ಲಿ ಸಾಧನೆಗೈತ ಸಾಧಕರಿಗೆ ಸನ್ಮಾನ ಗೌರವಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಚ್.ಎಂ ಗಂಗಾಧರ ಸ್ವಾಮಿ ಅಧ್ಯಕ್ಷರು ತಾಲೂಕು ಜಂಗಮ ಸಮಾಜ ಸಂಸ್ಥೆ ಕೂಡ್ಲಿಗಿ ಇವರು ವಹಿಸಿದರು.
ಈ ಸಂದರ್ಭದಲ್ಲಿ ಕೆ.ಎಂ ಮಂಜಕ್ಕ ಗ್ರಾ.ಪಂ ಸದಸ್ಯರು ಹೊಸಹಳ್ಳಿ, ಚಿದಾನಂದಸ್ವಾಮಿ ನಿವೃತ್ತ ಬಿಡಿಸಿಸಿ ಬ್ಯಾಂಕ್ ಸೂಪರಿಟೆಂಡೆಂಟ್, ವೀರೇಶ್ ಅಧ್ಯಕ್ಷರು ಆರ್.ಎಸ್.ಎಸ್.ಎನ್ ಇಮಾಡಪುರ, ಕಾಶೀನಾಥಯ್ಯ ಜಿಲ್ಲಾ ಅಧ್ಯಕ್ಷ, ಎಂ.ಒ ಮಂಜುನಾಥಯ್ಯ ಜಿಲ್ಲಾ ಉಪಾಧ್ಯಕ್ಷ, ಜಗದೀಶ್ ಹರಪನಹಳ್ಳಿ ಅಧ್ಯಕ್ಷ, ಚನ್ನಬಸಯ್ಯ, ಮಲ್ಲಿಕಾರ್ಜುನ್ ಕಣಿಕಲ್ ಮಠ, ನಿವೃತ್ತಿ ಪಿಎಸ್ಐ ನಾಗರಾಜ್, ಪ.ಪಂ ಸದಸ್ಯ ಸಚಿನ್ ಕೂಡ್ಲಿಗಿ, ಸಂತೋಷ್ ಕುಮಾರ್, ಡಾ ಅಭಿಷೇಕ್ ಸೇರಿದಂತೆ ಜಂಗಮ ಸಮಾಜ ಸಂಸ್ಥೆಯ ತಾಲೂಕು ಪದಾಧಿಕಾರಿಗಳು ಮತ್ತು ವಿವಿಧ ಜಿಲ್ಲೆ ತಾಲೂಕುಗಳಿಂದ ಬಂದ ಜಂಗಮ ಸಮಾಜದ ಗಣ್ಯರು, ಮುಖಂಡರು, ಯುವಕರು, ಮಹಿಳೆಯರು ಉಜ್ಜಿನಿ ನೇತ್ರಾವತಿ ಗಾಯತ್ರಿ ಹುಳಿಹಾಳು ಭಾಗವಹಿಸಿದ್ದರು.
ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಯನ್ನು ಚಂದ್ರಶೇಖರ್ ಶಿಕ್ಷಕರು ವಹಿಸಿದರು, ಎಂಎಂ ಚನ್ನಬಸಯ್ಯ ನಿರೂಪಣೆ ಮಾಡಿದರು…

ವರದಿ.ವೈ.ಮಹದೇವ್ ಕೂಡ್ಲಿಗಿ ಗ್ರಾಮಾಂತರ
