ಕನ್ನಡ ಭಾಷೆ, ನೆಲ, ಜಲ ಕುರಿತು ಅರಿವು ಮೂಡಿಸಲು ಬೆಂಗಳೂರಿನಿಂದ ಬೀದರ್ ವರೆಗೂ ಸ್ಕೂಟರಿನಲ್ಲಿ ಹೊರಟಿರುವ ಜ್ಯೂನಿಯರ್ ವಿಷ್ಣುವರ್ದನ್ ಎಂದೇ ಹೆಸರು ಮಾಡಿರುವ, ವಿಷ್ಣುವರ್ಧನ್ ಅಪ್ಪಟ ಅಭಿಮಾನಿ ನಾಗಬಸಯ್ಯ ಮಲ್ಲಯ್ಯ ಮಳಲಿಮಠ ಅವರು ಕಾನಹೊಸಹಳ್ಳಿ, ನಿಂಬಳಗೆರೆ,ಗಾಣಗಟ್ಟೆ , ಉಜ್ಜಯಿನಿ ಹಾಗೂ ಕೊಟ್ಟೂರು ಪಟ್ಟಣಕ್ಕೆ ಭೇಟಿ ನೀಡಿದರು. ಈ ವೇಳೆ ಗ್ರಾಮದ ಮುಖಂಡರು ಹಾಗೂ ವಿಷ್ಣು ಅಭಿಮಾನ ಬಳಗದ ಸದಸ್ಯರು ಅವರನ್ನು ಸ್ವಾಗತಿಸಿ, ಸನ್ಮಾನಿಸಿ ಬಿಳ್ಕೊಟ್ಟರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕನ್ನಡ ನಾಡು ನುಡಿ ಸಂಸ್ಕೃತಿ ಕುರಿತು ಅರಿವು ಮೂಡಿಸುವ ಕೆಲಸ ಮಾಡುತ್ತಿರುವೆ. ನನ್ನ ಕಾರ್ಯಕ್ಕೆ ಎಲ್ಲರೂ ಸಹಕಾರ ನೀಡುತ್ತಿದ್ದಾರೆ. ವಿಷ್ಣು ಅಭಿಮಾನಿಯಾಗಿ ನನ್ನ ಕರ್ತವ್ಯವನ್ನು ನಾನು ಮಾಡುತ್ತಿರುವೆ ಎಂದರು. ಇವರು ಬಂದ ಸಂದರ್ಭದಲ್ಲಿ ವಿಷ್ಣು ಅಭಿಮಾನಿಗಳು ಸೇರಿ ಅನೇಕರು ಶುಭ ಹಾರೈಸಿ ಬೀಳ್ಕೊಟ್ಟರು.
ರಾಣೇಬೆನ್ನೂರು ತಾಲ್ಲೂಕಿನ ಐರಣಿ ಗ್ರಾಮದವರಾದ ನಾಗಬಸಯ್ಯ ಹತ್ತು ವರ್ಷಗಳಿಂದ ಪ್ರತಿ ಅಕ್ಟೋಬರಲ್ಲಿ ತಮ್ಮ ದ್ವಿಚಕ್ರ ವಾಹನದ ಮೂಲಕ ನಾಡಿದ್ಯಂತ ಸಂಚರಿಸುವ ಅವರು, ಕನ್ನಡ ಭಾಷೆ, ನೆಲ, ಜಲ ಸಂರಕ್ಷಣೆ ಮಾಡುವ ಕುರಿತು ಜನರಲ್ಲಿ ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದಾರೆ.
ಸದ್ಯ ಬೆಂಗಳೂರಿನಲ್ಲಿ ಖಾಸಗಿ ನೌಕರಿಯಲ್ಲಿರುವ ನಾಗಬಸಯ್ಯ ಅವರು ತಮ್ಮದೇ ಆಕ್ಟೀವಾ 3ಜಿ ಸ್ಕೂಟರ್‍ನ್ನು ಕನ್ನಡ ಬಾವುಟ, ತೋರಣಗಳಿಂದ ಸಿಂಗರಿಸಿ, ಭುವನೇಶ್ವರಿ ಮತ್ತು ವಿಷ್ಣು ಚಿತ್ರಗಳನ್ನು ಅಳವಡಿಸಿಕೊಂಡು ಕನ್ನಡ ರಥವನ್ನಾಗಿಸಿಕೊಂಡಿದ್ದಾರೆ. ವಿಷ್ಣು ಅವರ ವೇಷ ಭೂಷಣ ತೊಟ್ಟು ಆಕರ್ಷಿಸುತ್ತಾರೆ. ವಿಷ್ಣು ಅಭಿಮಾನಿಗಿರುವ ಇವರು ಅನೇಕ ಕಡೆ ಜ್ಯೂ.ವಿಷ್ಣುವಾಗಿ ಕಾರ್ಯಕ್ರಮಗಳನ್ನು ನೀಡಿ ಅದರಿಂದ ಬಂದ ಹಣವನ್ನು ಇಂತಹ ಜಾಗೃತಿಗಾಗಿ ಬಳಕೆ ಮಾಡುತ್ತಿದ್ದಾರೆ. ಈ ರೀತಿ ಸಂಚಾರ ಕೈಗೊಂಡಾಗ ಅನೇಕ ನಗರ ಪಟ್ಟಣಗಳಲ್ಲಿ ಪೊಲೀಸರು ಅವರ ವಾಹನಕ್ಕೆ ಪೆಟ್ರೂಲ್ ಖರ್ಚು ನೀಡುತ್ತಿದ್ದಾರೆ. ಈ ಸಂದರ್ಭದಲ್ಲಿ ಅನೇಕ ವಿಷ್ಣುವರ್ಧನ್ ಅಭಿಮಾನಿಗಳು ಎಲ್ಲಾ ಗ್ರಾಮಗಳಿಂದ ಸ್ವಾಗತವನ್ನು ಮಾಡಿದರು. ಹೊಸಹಳ್ಳಿ ASI ಜಿಲಾನ್
ಗಡ್ಡೇರ ರವಿಕುಮಾರ, ನಾಗರಾಜ, ಮಂಜುನಾಥ, ಉಜ್ಜಯಿನಿ ರವಿಕುಮಾರ ಗ್ರಾಮ ಪಂಚಾಯತಿ ಸದಸ್ಯರು, ಪ್ರಕಾಶ, ನೀರಗಂಟಿ ಮಾರಪ್ಪ, ಕೊಟ್ಟೂರು ರುದ್ರೇಶ್, ಮಲ್ಲಿಕಾರ್ಜುನ, ವಿಷ್ಣುವರ್ಧನ್ ಅರಕ್ಷಕರು, ರಮೇಶ್ ಕಾನಹೊಸಹಳ್ಳಿ ಅನೇಕ ಅಭಿಮಾನಿಗಳು ಜೊತೆಗೂಡಿ ಮುಂದಿನ ಪ್ರಯಾಣ ಸುಖಕರವಾಗಿರಲಿ ಎಂದು ಹಾರೈಸಿದರು…
ವರದಿ, ಎಂ, ಬಸವರಾಜ್, ಕಕ್ಕುಪ್ಪೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030