ಹೊಸಹಳ್ಳಿ ಗ್ರಾಮದಲ್ಲಿ ಕಿತ್ತೂರು ಚನ್ನಮ್ಮರ ಜಯಂತೋತ್ಸವ ಆಚರಣೆ
ಕೂಡ್ಲಿಗಿ: ತಾಲೂಕಿನ ಕಾನಹೊಸಹಳ್ಳಿ ಪಟ್ಟಣದಲ್ಲಿ ಕಿತ್ತೂರು ರಾಣಿ ಚನ್ನಮ್ಮ ವೃತ್ತದಲ್ಲಿ ಬುಧವಾರ ನಡೆದ ಕಿತ್ತೂರು ರಾಣಿ ಚನ್ನಮ್ಮಾಜಿಯ 200 ನೇ ವಿಜಯೋತ್ಸವ, 246 ನೇ ಜಯಂತಿ ಪ್ರಯುಕ್ತ ಕಿತ್ತೂರು ರಾಣಿ ಚೆನ್ನಮ್ಮ ಅವರ ಭಾವಚಿತ್ರಕ್ಕೆ ಕೂಡ್ಲಿಗಿ ಶಾಸಕ ಡಾ ಎನ್.ಟಿ ಶ್ರೀನಿವಾಸ್ ಹಾಗೂ ದಾಸೋಹ ಮಠದ ಪೂಜ್ಯ ದಾ.ಮ. ಐಮಡಿ ಶರಣಾರ್ಯರು ಕಾನಮಡಗು ಮತ್ತು ಸಮಾಜದ ಮುಖಂಡರು ಪೂಜೆ ಗೌರವನಮನ ಸಲ್ಲಿಸಿದರು.
ಕೂಡ್ಲಿಗಿ ಶಾಸಕರದ ಡಾ. ಎನ್. ಟಿ. ಶ್ರೀನಿವಾಸ್ ಮಾತನಾಡಿ
ದೇಶದ ಮೊದಲ ಮಹಿಳಾ ಸ್ವತಂತ್ರ ಹೋರಾಟ ಗಾರ್ತಿ ಬ್ರಿಟಿಷರ ಎದೆಯಲ್ಲಿ ನಡುಕ ಹುಟ್ಟಿಸಿದ ಕನ್ನಡ ನಾಡಿನ ವೀರ ಮಹಿಳೆ ಕಿತ್ತೂರು ರಾಣಿ ಚೆನ್ನಮ್ಮ ಧೈರ್ಯ ಸಾಹಸ ಹೋರಾಟ ತ್ಯಾಗ ಬಲಿದಾನ ಈ ನಾಡಿಗೆ ಮಾದರಿಯಾಗಿದೆ .
ಇದೇ ಸಂದರ್ಭದಲ್ಲಿ ಈ ವೇಳೆ ಮಾಜಿ ಜಿ.ಪಂ ಸದಸ್ಯ ಕೆ ಎಂ ಶಶಿಧರ್ ಸ್ವಾಮಿ,ಹೊಸಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆಜಿ ಕುಮಾರ ಗೌಡ, ಸತೀಶ, ಕರಿವೀರಪ್ಪ, ಸಿದ್ದಣ್ಣ, ವೈ ಎಂ ವಿರೇಶ್ವರಯ್ಯ, ಸಣ್ಣ ಕೆಂಚಪ್ಪ, ಅಮ್ಮನ ಕೆರೆ ಕೊಟ್ರೇಶ, ಲೋಕೇಶ, ಎಸ್ ಪಿ ಸಿದ್ದನಗೌಡ, ಎಂಎಸ್ ಮಂಜುನಾಥ, ಎಚ್ ರಮೇಶ, ನಾಗರಾಜ ರಂಗನಾಥನಹಳ್ಳಿ, ಎರಿಸ್ವಾಮಿ ರೆಡ್ಡಿ,ಗ್ರಾ.ಪಂ ಸದಸ್ಯ ಸಿದ್ದನಗೌಡ, ಫೋಟೋ ಸಿದ್ದಲಿಂಗಪ್ಪ, ಬಿ ಜಗದೀಶ್, ಅಜ್ಜನಗೌಡ, ಕುಲುಮೆಹಟ್ಟಿ ವೆಂಕಟೇಶ, ಅಮಲಾಪುರದ ಮಂಜುನಾಥ, ವಿಭೂತಿ ಸಿದ್ದಪ್ಪ, ಹೆಚ್ ಜಿ ಬಸವನಗೌಡ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿನಯ್ ಕುಮಾರ್ , ಕೆಜಿ ನಾಗರಾಜ್ ಗೌಡ, ರಾಕೇಶ್, ಸಿದ್ದೇಶ್,ಜನಪ್ರತಿನಿಧಿಗಳು ಪಂಚಮಸಾಲಿ ಸೇರಿದಂತೆ ವಿವಿಧ ಸಮುದಾಯದ ಮುಖಂಡರುಗಳು ಗ್ರಾಮ ಪಂಚಾಯಿತಿಯ ಸದಸ್ಯರು ಹಾಗೂ ಎಲ್ಲಾ ವಿವಿಧ ಸಂಘಟನೆಗಳ ಮುಖಂಡರುಗಳು ಸೇರಿದಂತೆ ಗ್ರಾಮಸ್ಥರು ಭಾಗಿಯಾಗಿದ್ದರು…
ವರದಿ. ಎಂ. ಬಸವರಾಜ್ ಕಕ್ಕುಪ್ಪೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030