ಹುಲಿಕೆರೆ ಗ್ರಾಮದ ಕೆರೆಗೆ ಬಾಗಿನ ಅರ್ಪಿಸಿ ಗಂಗಾ ಪೂಜೆ ನೆರವೇರಿಸಿದ ಶಾಸಕ- ಡಾ. ಶ್ರೀನಿವಾಸ್. ಎನ್. ಟಿ
ಈ ಬಾರಿ ನಮ್ಮಲ್ಲಿ ಒಳ್ಳೆಯ ಮಳೆ ಯಾಗಿರುವುದರಿಂದ ರೈತರಲ್ಲಿ ಹರ್ಷತಂದು ಸಮೃದ್ಧಿ ಹೆಚ್ಚಿಸಿರುವ ಹಿನ್ನೆಲೆಯಲ್ಲಿ ಹುಲಿಕೆರೆ ಗ್ರಾಮದ ಕೆರೆಗೆ 56 ವರ್ಷಗಳ ನಂತರ ಕೋಡಿ ಬಿದ್ದ ಸಂತಸದಲ್ಲಿ ಕೂಡ್ಲಿಗಿ ವಿಧಾನ ಸಭಾ ಕ್ಷೇತ್ರದ ಮಾನ್ಯಶಾಸಕರಾದ ಡಾ. ಶ್ರೀನಿವಾಸ್. ಎನ್. ಟಿ. ಅವರು ದಿ; 22-10-2024 ರಂದು ಸ್ಥಳೀಯ ಮುಖಂಡರು, ಕಾರ್ಯಕರ್ತರು, ಜನಪ್ರತಿನಿಧಿಗಳು, ರೈತರು, ಮಹಿಳೆಯರೊಂದಿಗೆ ಭೇಟಿ ನೀಡಿ ಕೆರೆಗೆ ಬಾಗಿನ ಅರ್ಪಿಸಿ ಗಂಗಾ ಪೂಜೆ ನೆರವೇರಿಸಿ ಕ್ಷೇತ್ರದ ಒಳಿತಿಗಾಗಿ ಪ್ರಾರ್ಥಿಸಿದರು.
ಈ ಹಿಂದೆಯೇ ದಿನಾಂಕ; 18-10-2024 ರಂದು ಶಾಸಕರು ಹುಲಿಕೆರೆ ಗ್ರಾಮದ ಕೆರೆಯ ಅಂಚಿನಲ್ಲಿ ಜಲಾವೃತಗೊಂಡಿರುವ ಮನೆಗಳನ್ನು ಪರಿಶೀಲಿಸಿದರು. ಕೆರೆಯ ಅಂಚಿನಲ್ಲಿರುವ ಜನರಿಗೆ ತೊಂದರೆಯಾಗದಂತೆ ಕ್ರಮವಹಿಸಲು ಸ್ಥಳೀಯ ಜನರು ಶಾಸಕರಲ್ಲಿ ಮನವಿ ಮಾಡಿಕೊಂಡರು. ಎಲ್ಲರ ಮಾತುಗಳನ್ನು ಆಲಿಸಿದ ಶಾಸಕರು, ಸಣ್ಣ ನೀರಾವರಿ ಇಲಾಖೆಯ ತಜ್ಞರ ಸಲಹೆಯಂತೆ ಕೆರೆಯಿಂದಾಗಿ ಇಲ್ಲಿನ ಜನರಿಗೆ ತೊಂದರೆಯಾಗದಂತೆ ಕ್ರಮತೆಗೆದುಕೊಳ್ಳುತ್ತೇವೆ ಎಂಬ ಭರವಸೆ ನೀಡಿದರು. ಕೆರೆಯಿಂದ ತೊಂದರೆಯಾಗದಂತೆ ತಡೆಗೋಡೆ ನಿರ್ಮಿಸುತ್ತೇವೆ ಎಂದೂ ಹೇಳಿದರು.
ಅದೇ, ರೀತಿ ಕೊಟ್ಟ ಮಾತಿನಂತೆ ಗಂಗಾ ಪೂಜೆ ನೆರವೇರಿಸಿದ ನಂತರ ತಜ್ಞರನ್ನು ಕೆರೆಯಿಸಿಕೊಂಡ ಶಾಸಕರು ಮಾತುಕತೆಯೊಂದಿಗೆ ಸ್ಥಳೀಯ ಜನರ ಸಮಸ್ಯೆಗಳು ಏನೂ ಇವೆ. ಅವುಗಳನ್ನು ಗಮನದಲ್ಲಿಟ್ಟುಕೊಂಡು ಬಗೆಹರಿಸುವ ಮೂಲಕ ಜನರಿಗೆ ಒಳಿತನ್ನೂ ಬಯಸಲು ಕೆಲಸ ಕಾರ್ಯಗಳನ್ನು ಹಮ್ಮಿಕೊಳ್ಳಬೇಕು ಎಂದೂ ಸೂಚಿಸಿದರು.
ಈ ಸಂದರ್ಭದಲ್ಲಿ ಮಾಜಿ ಜಿ.ಪಂ.ಸದಸ್ಯರಾದ ಶಶಿಧರಸ್ವಾಮಿ, ಮಾಜಿ ತಾ. ಪಂ. ಸದಸ್ಯರಾದ ಶರಣಗೌಡ, ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್ ಸೂಗಪ್ಪ, ಸಹಾಯಕ ಇಂಜಿನಿಯರಾದ ಮೇಡಮ್ ರಾಜ್, ಶ್ರೀಕಾಂತ, ಹಿರೇಕುಂಬಳಕುಂಟೆ ಗ್ರಾ. ಪಂ. ಅಧ್ಯಕ್ಷರಾದ ಗಂಗಮ್ಮ ಕರಿಬಸಪ್ಪ, ಗ್ರಾ. ಪಂ. ಸದಸ್ಯರಾದ ದುರಗಪ್ಪ, ಮುಖಂಡರಾದ ಕೆಇಬಿ ಮಾರಪ್ಪ, ಡಾ. ಒಂಕಾರಪ್ಪ, ಹರೀಶ್, ಮಾರಪ್ಪ, ಚೆನ್ನಬಸಪ್ಪ, ಬಸವರಾಜ, ನವೀನ್, ಗಾಳೇಪ್ಪ, ಧನಂಜಯ್, ಶಿವಣ್ಣ, ಕುಬೇರಪ್ಪ ಮೇಷ್ಟ್ರು, ಗಾದ್ರೆಪ್ಪ, ಊರಿನ ಹಿರಿಯರು, ಗ್ರಾಮಸ್ಥರು, ರೈತರು, ಮಹಿಳೆಯರು ಇನ್ನೂ ಮುಂತಾದವರು ಉಪಸ್ಥಿತರಿದ್ದರು…
ವರದಿ. ಎಂ, ಬಸವರಾಜ್, ಕಕ್ಕುಪ್ಪೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030