ಮಧ್ಯವರ್ತಿಗಳ ವಿಪರೀತ ಹಾವಳಿಯನ್ನು ತಪ್ಪಿಸಿ. -ಶಾಸಕ ಡಾ. ಶ್ರೀನಿವಾಸ್. ಎನ್. ಟಿ
ಕೂಡ್ಲಿಗಿ ವಿಧಾನ ಸಭಾ ಕ್ಷೇತ್ರದ ಮಾನ್ಯಶಾಸಕರಾದ ಡಾ. ಶ್ರೀನಿವಾಸ್. ಎನ್. ಟಿ. ರವರ ಅಧ್ಯಕ್ಷತೆಯಲ್ಲಿ ದಿ; 21-10-2024 ರಂದು ತಾಲೂಕಿನ ಕಛೇರಿಯಲ್ಲಿ ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಮಹತ್ವದ ವಿಷಯ ಕುರಿತು ಚರ್ಚಿಸಲು ಸಭೆ ಕರೆಯಲಾಗಿತ್ತು. ಶಾಸಕರು ಮಾತನಾಡುತ್ತಾ, ಹಿಂದುಳಿದ ನಮ್ಮ ತಾಲೂಕಿನಲ್ಲಿ ರೈತರು ಆಡಳಿತ ಕಛೇರಿಯಲ್ಲಿ ತಮ್ಮ ಆಸ್ತಿಗೆ ಸಂಬಂಧಿಸಿದಂತೆ ಯಾವುದೇ ರೀತಿಯ ಕೆಲಸಗಳು ಆಗುತ್ತಿಲ್ಲ. ಅವರು ದಪ್ಪ ಕಡತಗಳನ್ನು ಇಟ್ಟುಕೊಂಡು ನಿತ್ಯ ಸಮಸ್ಯೆಗಳನ್ನು ಹೇಳಿಕೊಳ್ಳುತ್ತಾ ನನ್ನ ಹತ್ತಿರ ಬರುತ್ತಾರೆ. ವಿಪರೀತ ಮಧ್ಯವರ್ತಿಗಳ ಹಾವಳಿಯಿಂದಾಗಿ ರೈತರು ತಮ್ಮ ಕೆಲಸ ಕಾರ್ಯಗಳನ್ನು ಮಾಡಿಸಿಕೊಳ್ಳಲು ಎಲ್ಲಿಂದ ಹಣ ತರಬೇಕು. ಶಾಸಕಾಂಗದಿಂದ ನಾನು ತಮಗೆ ನಿರ್ದೇಶನ ನೀಡಬಹುದು. ಆದರೆ ಕಾರ್ಯಾಂಗ ವಿಚಾರದಲ್ಲಿ ಅಧಿಕಾರಿಗಳು ಅಡ್ಡ ದಾರಿ ಹಿಡಿದು ನಿಷ್ಕ್ರಿಯಗೊಂಡರೇ ಇದಕ್ಕೆ ಅರ್ಥ ಏನಿದೆ ? ಎಂಬುದಾಗಿ ತಾಲೂಕಿನ ಆಡಳಿತ ಕಾರ್ಯ ವೈಖರಿಯನ್ನು ಶಾಸಕರು ಪ್ರಶ್ನಿಸಿದರು. ಹೀಗಾಗಿ ತಾವು ಎಲ್ಲರೂ ತಮಗೆ ಕೊಟ್ಟಿರುವ ಜವಾಬ್ದಾರಿಗಳನ್ನು ಹೊತ್ತು ಕೆಲಸ ಕಾರ್ಯ ಮಾಡಿಕೊಂಡು ವ್ಯವಸ್ಥೆಯನ್ನು ಸರಿಪಡಿಸಿಕೊಂಡು ಹೋದರೆ ಸರಿ. ಇಲ್ಲ ಅಂದರೇ ತಾವು ಎಚ್ಚೆತ್ತುಕೊಳ್ಳದೇ ಹೋದರೆ, ನನ್ನದೇ ಆದ ರೀತಿಯಲ್ಲಿ ಕೆಲಸ ಮಾಡಿಕೊಂಡು ಹೋಗುವೆ ಎಂದೂ ಅಧಿಕಾರಿಗಳಿಗೆ ಶಾಸಕರು ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ವಿಜಯನಗರ ಜಿಲ್ಲೆಯ ಮಾನ್ಯ ಸಹಾಯಕ ಆಯುಕ್ತರಾದ ವಿವೇಕಾನಂದ ಅವರು, ತಹಶೀಲ್ದಾರರಾದ ಎಂ ರೇಣುಕಾ, ಉಪತಶೀಲ್ದಾರರಾದ ನೇತ್ರಾವತಿ, ಕಂದಾಯ ನಿರೀಕ್ಷಕರು, ಗ್ರಾಮ ಆಡಳಿತ ಅಧಿಕಾರಿಗಳು, ಪಟ್ಟಣ ಪಂಚಾಯತಿ ಅಧ್ಯಕ್ಷರಾದ ಶ್ರೀ ಕಾವಲ್ಲಿ ಶಿವಪ್ಪನಾಯಕ, ಪ. ಪಂ, ಅಧಿಕಾರಿಗಳು, ಸದಸ್ಯರು, ಸಾರ್ವಜನಿಕರು ಉಪಸ್ಥಿತರಿದ್ದರು…
ವರದಿ. ಎಂ. ಬಸವರಾಜ್ ಕಕ್ಕುಪ್ಪೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030