ದಿನಾಂಕ 20.10.2024 ರಂದು ನಡೆದ ಗಾಣಿಗರ ಸಮುದಾಯ ಭವನ ಕಾನಹೊಸಹಳ್ಳಿಯಲ್ಲಿ ಅರ್ಥಪೂರ್ಣವಾಗಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಜರುಗಿತು ಸಮ್ಮೇಳನದ ಅಧ್ಯಕ್ಷತೆಯನ್ನು ಕವಿ ಸಾಹಿತಿಗಳು ಆದ ಏನ್ ಎಂ ರವಿಕುಮಾರ್ ಎಂಬಿ ಐನಳ್ಳಿ ಇವರು ಅಧ್ಯಕ್ಷತೆಯನ್ನು ವಹಿಸಿದ್ದರು ಚಂದ್ರಶೇಖರ ಮಾಡಲಗೆರೆ ಇವರ ನಿರ್ದೇಶನದಂತೆ ಕಾರ್ಯಕ್ರಮ ಜರುಗಿತು ಅನೇಕ ಕವಿಗಳು ಕವಿತ್ರಿಯರು ತಮ್ಮ ತಮ್ಮ ಕವನ ವಾಚನಗಳನ್ನು ವಾಚಿಸಿದರು ದತ್ತಿ ಉಪನ್ಯಾಸ ಕಾರ್ಯಕ್ರಮವು ಕೂಡ ನಡೆದಿದ್ದು ಶ್ರೀಮತಿ ಕೆ ವೀರಮ್ಮ ಶ್ರೀ ಕಾಮ ಶೆಟ್ಟಿ ದೇವೇಂದ್ರಪ್ಪ ಇವರ ಪರವಾಗಿ ದೆತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಸುಭಾಷ್ ಚಂದ್ರ ಹೊಸಳ್ಳಿ ಇವರು ನೆರವೇರಿಸಿ ಕೊಟ್ಟರು ಈ ಕಾರ್ಯಕ್ರಮದಲ್ಲಿ ಸಾಧನೆ ಮಾಡಿದ ಅನೇಕ ಸಾಧಕರಿಗೆ ಸನ್ಮಾನವನ್ನು ಕೂಡ ಏರ್ಪಡಿಸಲಾಗಿತ್ತು.
ವಿವಿಧ ರಂಗಗಳಲ್ಲಿ ಅವರದೇ ಆದ ಸಮಾಜ ಸೇವೆಯನ್ನು ಮಾಡಿರುವ ಮತ್ತು ಎಲೆಮರೆಕಾಯಿಯಂತೆ ತಮ್ಮ ಸೇಮೆಯನ್ನು ಅದೆಷ್ಟೋ ಜನರಿಗೆ ತಲುಪಿಸಿ ಸಹಾಯವನ್ನು ಮಾಡಿರುವಂತಹ ಸಾಧಕರನ್ನು ಗುರುತಿಸಿ ಸನ್ಮಾನ ಮಾಡಿರುವುದು ಒಂದು ಅರ್ಥಪೂರ್ಣ ಕಾರ್ಯಕ್ರಮವಾಗಿತ್ತು ಅದರಲ್ಲೂ ವಿಶೇಷವಾಗಿ ಹೆಚ್ ಮರಳಸಿದ್ದಪ್ಪ ಇವರಿಗೆ ಶ್ರೀ ಕೃಷ್ಣದೇವರಾಯ ರಾಜ್ಯಮಟ್ಟದ ಪ್ರಶಸ್ತಿ ನೀಡಿದ್ದು ಒಂದು ಉತ್ತಮ ಸಾಧಕರನ್ನು ಗುರುತಿಸಿರುವದು ಅಭಿನಂದನೀಯ ಇವರು ತಮ್ಮ ಸೇವೆಯನ್ನು ಅನೇಕ ಜಿಲ್ಲೆಗಳಲ್ಲಿ ಮಾಡಿದ್ದು ಅದರಲ್ಲಿ ವಿಶೇಷವಾಗಿ ರಾಯಚೂರು ಬಳ್ಳಾರಿ ಕೊಪ್ಪಳ ಮತ್ತು ವಿಜಯನಗರ ಜಿಲ್ಲಾ ಹಾಲು ಒಕ್ಕೂಟದಲ್ಲಿ ವಿಶೇಷ ಸೇವೆಯನ್ನು ಮಾಡಿದ್ದು ಕೂಡ್ಲಿಗಿ ತಾಲೂಕಿನಲ್ಲಿ 108 ಸಹಕಾರ ಸಂಘಗಳನ್ನು ಸ್ಥಾಪಿಸುವುದರ ಮೂಲಕ ದಿನಕ್ಕೆ 42,000 ಹಾಲನ್ನು ಸಂಗ್ರಹ ಮಾಡಿರುವುದು ಒಂದು ದೊಡ್ಡ ಸಾಧನೆಯೇ ಸರಿ ಇಂತಹ ಒಂದು ಬರದ ನಾಡಲ್ಲಿ ರೈತರನ್ನು ಮನವೊಲಿಸಿ ಅನೇಕ ಗ್ರಾಮಗಳಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘಗಳನ್ನು ಸ್ಥಾಪಿಸುವ ಮೂಲಕ ರೈತರಿಗೆ ವರದಾನವಾಗಿ ಹೈನುಗಾರಿಕೆಗೆ ಪ್ರೋತ್ಸಾಹವನ್ನು ಕೊಟ್ಟು ಅವರ ಇಡೀ ಕುಟುಂಬವನ್ನು ಒಂದು ನೆಮ್ಮದಿಯ ಬದುಕನ್ನಾಗಿ ಮಾಡಿರುವುದು ಮರಳು ಸಿದ್ದಪ್ಪ ಇವರ ಸಾಧನೆಗೆ ಇಡಿದ ಕೈಗನ್ನಡಿಯಾಗಿದೆ ಕೊರೊನ ಸಮಯದಲ್ಲಿ ಎಲ್ಲಾ ಉದ್ಯಮಗಳು ಬಂದಾದರೂ ಕೂಡ ಹಾಲು ಉತ್ಪಾದಕರ ಸಹಕಾರ ಸಂಘಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿದ್ದು ರೈತರು ಹಾಲನ್ನು ಸಂಗ್ರಹ ಮಾಡಿ ಒಕ್ಕೂಟಕ್ಕೆ ಸರಬರಾಜು ಮಾಡಿದ್ದು ರೈತರನ್ನು ಆರ್ಥಿಕವಾಗಿಯೂ ಕೂಡ ಸಬಲರಾಗಿರುವುದನ್ನು ಇಲ್ಲಿ ಸ್ಮರಿಸಬಹುದು ಒಕ್ಕೂಟದಲ್ಲಿ ನಿರ್ದೇಶಕರಾಗಿಯೂ ಕೂಡ ಅವರು ಉತ್ತಮ ಸೇವೆಯನ್ನು ಸಲ್ಲಿಸುತ್ತಿದ್ದು ರೈತರ ಬದುಕಿಗೆ ಒಂದು ಉತ್ತಮ ಸೇವೆ ಮಾಡುತ್ತಿರುವುದನ್ನು ನೋಡಿದರೆ ಇವರಿಗೆ ರೈತರ ಪರ ಕಾಳಜಿ ಎಷ್ಟಿದೆ ಎಂಬುದು ಗೊತ್ತಾಗುತ್ತಿದೆ ರೈತರಿಗೆ ಹೈನುಗಾರಿಕೆ ಯಲ್ಲಿ ಅನೇಕ ಪ್ರಯೋಜನಗಳನ್ನು ದೊರಕಿಸಿ ಕೊಡುವುದರ ಮೂಲಕ ತಮ್ಮ ಸೇವೆಯನ್ನು ಸಲ್ಲಿಸುತ್ತಿದ್ದಾರೆ ಅದೇ ರೀತಿಯಾಗಿ ಕೂಡ್ಲಿಗಿ ಮತ್ತು ಕೊಟ್ಟೂರಿನಲ್ಲಿ ನಂದಿನಿ ಹೈನು ಅಭಿವೃದ್ಧಿ ಗಾರರ ಸಹಕಾರ ಸಂಘವನ್ನು ಸ್ಥಾಪಿಸುವುದರ ಮೂಲಕ ಅನೇಕ ರೈತರಿಗೆ ಸಾಲವನ್ನು ಕೊಡುವುದರ ಮೂಲಕ ಹೈನುಗಾರಿಕೆಗೆ ಉತ್ತೇಜವನ್ನು ಕೊಟ್ಟಿರುವುದು ಮರಳಸಿದ್ದಪ್ಪ ಇವರ ಒಂದು ದೊಡ್ಡ ಸಾಧನೆಯೇ ಸರಿ ಅದೇ ರೀತಿಯಾಗಿ ಇನ್ನೂ ಇಬ್ಬರೂ ಹೈನುಗಾರಿಕೆಯಲ್ಲಿ ಗಣನೀಯ ಸೇವೆಯನ್ನು ಸಲ್ಲಿಸುತ್ತಿರುವುದು ಅಭಿನಂದನಾರ್ಹ ಅವರೇ ಈ ಪ್ರಕಾಶ್ ಮತ್ತು ಪರಮೇಶ್ವರಪ್ಪ ಇವರು ಕೂಡ ತಮ್ಮ ಸೇವೆಯನ್ನು ಉತ್ತಮಗೊಳಿಸಿ ಹಗರಿಬೊಮ್ಮನಹಳ್ಳಿ, ಹರಪನಹಳ್ಳಿ ಮತ್ತು ಕೂಡ್ಲಿಗಿಯಲ್ಲಿ ತಮ್ಮ ಸೇವೆಯನ್ನು ಮಾಡುತ್ತಾ ಹೈನುಗಾರಿಕೆಯಲ್ಲಿ ಒಂದು ಕ್ರಾಂತಿಯನ್ನು ಶುರು ಮಾಡಿದ್ದಾರೆ ಯಾವ ಬೆಳೆಯು ಕೈ ಕೊಟ್ಟರೂ ಕೂಡ ರೈತರಿಗೆ ವರದಾನವಾಗಿ ನಿಂತಿರುವುದು ಹೈನುಗಾರಿಕೆಯೇ ಎಂಬುದನ್ನು ರೈತರಿಗೆ ಮನವರಿಕೆ ಮಾಡುವುದರ ಮೂಲಕ ಹೈನುಗಾರಿಕೆಯನ್ನು ಉತ್ತೇಜಿಸುತ್ತಿದ್ದಾರೆ ಇವರಿಗೆ ರಾಜ್ಯ ಮಟ್ಟದ ಪ್ರಶಸ್ತಿಯನ್ನು ಲಭಿಸಿರುವುದು ಒಂದು ಉತ್ತಮ ಸಾಧಕರನ್ನು ಗುರುತಿಸಿದ್ದಾರೆ ಎಂದು ನಮ್ಮ ಎಲ್ಲಾ ಕಾರ್ಯದರ್ಶಿ ಮಿತ್ರರು ಚೇತನ್ ಫೌಂಡೇಶನ್ ಚಂದ್ರಶೇಖರ್ ಮಾಡಲಗಿರಿ ಇವರಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ ಅದೇ ರೀತಿಯಾಗಿ ಇನ್ನು ಅನೇಕ ಸಾಧನೆ ಮಾಡಿದ ಸಾಧಕರಾದ ಚಪ್ಪರದಹಳ್ಳಿ ಕೊಟ್ರೇಶ್ ಕನನಾಯಕನ ಕಟ್ಟೆ ರಾಜಕುಮಾರ್ ಶಿವಪುತ್ರಪ್ಪ ಗೆದ್ದಲಗಟ್ಟೆ ರಮೇಶ್ ಕಾಲ್ ಚೆಟ್ಟಿ ಕೃಷ್ಣ ರಾಘವೇಂದ್ರ ಕೂಡ್ಲಿಗಿ ಬಣಕಾರ ಮುಗಪ್ಪ ಹರವದಿ ರಾಮಚಂದ್ರಪ್ಪ ತಿಂದಪ್ಪ ಕೂಡ್ಲಿಗಿ ಶಂಕ್ರಪ್ಪ ಮಹದೇವಪುರ ಬಸವರಾಜ್ ಬಣಕಾರ್ ಕೊಟ್ರೇಶ್ ಇನ್ನು ಅನೇಕ ಸಾಧಕರನ್ನು ಗುರುತಿಸಿ ಸನ್ಮಾನಿಸಲಾಯಿತು ಚಾನು ಕೋಟಿ ಗುರುಗಳು ಮಾತನಾಡಿ ಕನ್ನಡ ಭಾಷೆ ತನ್ನದೇ ಆದ ಇತಿಹಾಸವನ್ನು ಹೊಂದಿದೆ ಅನಾದಿ ಕಾಲದಿಂದಲೂ ಕೂಡ ಕನ್ನಡದ ಬಗ್ಗೆ ಅನೇಕ ಶಾಸನಗಳು ಬರಹಗಳು ಕನ್ನಡ ಭಾಷೆ ಎಷ್ಟು ಪ್ರಚಲಿತವಾಗಿತ್ತು ಎಂಬುದನ್ನು ತೋರಿಸಿ ಕೊಡುತ್ತಿದೆ ಎಂದು ಹೇಳಿದರು ಐಮುಡಿ ಶರಣಾರ್ಯರು ಆಶೀರ್ವಚನವನ್ನು ನೀಡುವುದರ ಮೂಲಕ ಕನ್ನಡ ನುಡಿ ನೆಲ ಮತ್ತು ಜಲವನ್ನು ಉಳಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಹೇಳಿದರು ಅದೇ ರೀತಿಯಾಗಿ ಕೂಡ್ಲಿಗಿ ಹಿರೇಮಠ ಸಂಸ್ಥಾನ ಮಠದ ಶ್ರೀ ಪ್ರಶಾಂತ ಸಾಗರ ಸ್ವಾಮೀಜಿ ಅವರು ಮಾತನಾಡಿ ನಮ್ಮ ನಾಡು ನುಡಿ ಜಲ ಇದರ ವಿಷಯಕ್ಕೆ ಬಂದಾಗ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕು ಎಂದು ಹೇಳಿದರು ನಮ್ಮ ನಾಡು ನುಡಿ ಕನ್ನಡ ಭಾಷೆ ನೂರಾರು ವರ್ಷಗಳಿಂದ ತನ್ನ ನೆಲೆಯನ್ನು ಕಂಡುಕೊಂಡಿದೆ ಎಂದು ಹೇಳಿದರು ಕನ್ನಡಕ್ಕೆ ಕೈ ಎತ್ತು ನಿನ್ನ ಕೈ ಕಲ್ಪವೃಕ್ಷ ಆಗುವುದು ಎಂದು ಹೇಳಿದರು ಕವಿಗಳು ಮತ್ತು ಸಾಹಿತಿಗಳು ಪತ್ರಕರ್ತರು ಆದ ಗಜಾ ಪುರ ಭೀಮಣ್ಣ ಕನ್ನಡ ಸಾಹಿತ್ಯ ಪರಿಷತ್ ಕೂಡ್ಲಿಗಿ ಅಧ್ಯಕ್ಷರಾದ ಅಂಗಡಿ ವೀರೇಶ್ ನಂದಿ ಬಸವರಾಜ್ ಜಂಗಮಸೋವೇನಹಳ್ಳಿ ಮತ್ತು ಕೆಎಸ್ ವೀರೇಶ್ ಹೊಸಳ್ಳಿ ಎಂ ಬಸವರಾಜ್ ಕಕ್ಕುಪ್ಪಿ ಇನ್ನು ಅನೇಕ ಕನ್ನಡ ಅಭಿಮಾನಿಗಳು ಮತ್ತು ಕವಿಗಳು ಕವನ ವಾಚನ ಮಾಡುವ ಮೂಲಕ ಕನ್ನಡ ಅಭಿಮಾನವನ್ನು ಮೆರೆದರು ಈ ಕಾರ್ಯಕ್ರಮ ನೂರಾರು ಜನ ಭಾಗಿಯಾಗಿ ಕಾರ್ಯಕ್ರಮ ಕ್ಕೆ ಮೆರಗು ನೀಡಿದರು…
ವರದಿ. ಎಂ, ಬಸವರಾಜ್, ಕಕ್ಕುಪ್ಪೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030