ಪ್ರಗತಿ ಕಾಲೋನಿ ಯೋಜನೆ ಅಡಿಯಲ್ಲಿ 2 ಕೋಟಿ ಭೂಮಿ ಪೂಜೆ ನೆರವೇರಿಸಿದ ಶಾಸಕ -ಡಾ. ಶ್ರೀನಿವಾಸ್. ಎನ್. ಟಿ
ಕೂಡ್ಲಿಗಿ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಇಮ್ಮಡಾಪುರ, ಖಾನಹೊಸಹಳ್ಳಿ, ಚಿಕ್ಕಕುಂಬಳಕುಂಟೆ, ಹಿರೇಕುಂಬಳಕುಂಟೆ ಗ್ರಾಮಗಳಲ್ಲಿ ಮಾನ್ಯಶಾಸಕರಾದ ಡಾ. ಶ್ರೀನಿವಾಸ್. ಎನ್. ಟಿ. ಅವರು ದಿನಾಂಕ 18-10-2024 ರಂದು ಪ್ರಗತಿ ಕಾಲೋನಿ ಯೋಜನೆ ಅಡಿಯಲ್ಲಿ ಭೂಮಿಪೂಜೆ ನೆರವೇರಿಸಿ ಮಾತನಾಡುತ್ತಾ, ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ನಾನು ಬಂದಿರುವೆ. ಪ್ರಾಮಾಣಿಕವಾಗಿ ಶ್ರಮವಹಿಸಿ ಕೆಲಸ ಮಾಡುತ್ತೇನೆ ಎಂದೂ ತಿಳಿಸಿದರು. ಆದ್ದರಿಂದ ಗುತ್ತಿಗೆದಾರರು ಮತ್ತು ಗ್ರಾಮಗಳ ಅಭಿವೃದ್ಧಿ ವಿಷಯದಲ್ಲಿ ಮುಖಂಡರು ಒಗ್ಗಟ್ಟಾಗಿ ಕೆಲಸ ಮಾಡಬೇಕು ಎಂದೂ ಹೇಳಿದರು. ಈ ಸಂದರ್ಭದಲ್ಲಿ ವಿರೇಶಸ್ವಾಮಿ, ವೆಂಕಟೇಶ ಕೆ, ಸಂಗಣ್ಣ ಎಸ್, ರಾಘವೇಂದ್ರ ಎಂ, ನಾಗೇಂದ್ರಪ್ಪ ಎಂ, ಪ್ರಭಾಕರ್ ಕೆ, ಗೋಪಾಲಪ್ಪ ಬಿ, ಚೇತನ್, ಬೋರಣ್ಣ, ಪೊಟೋ ಸಿದ್ದಲಿಂಗಪ್ಪ, ಮಂಜುನಾಥ, ದುಗ್ಗಪ್ಪ, ನಾಗರಾಜ ಏ.ಕೆ, ಖಲಂದರ, ಆಂಜನೇಯ ,ಉಮೇಶಪ್ಪ, ಮನೋಜ್, ವೀರಭದ್ರಪ್ಪ, ಮಲ್ಲಿಕಾರ್ಜುನ, ಅರೀಶ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು…
ವರದಿ. ಎಂ, ಬಸವರಾಜ್ ಕಕ್ಕುಪ್ಪೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030