ಕೂಡ್ಲಿಗಿ:ಅದ್ಧೂರಿ ಶ್ರೀವಾಲ್ಮೀಕಿ ಜಯಂತೋತ್ಸವ..ವಿಜಯನಗರ ಜಿಲ್ಲೆ ಕೂಡ್ಲಿಗಿ: ಪಟ್ಟಣದಲ್ಲಿ ಮಹರ್ಷಿ ಶ್ರೀವಾಲ್ಮೀಕಿ ಜಯಂತೋತ್ಸವವನ್ನು, ಬಹು ಅದ್ಧೂರಿಯಾಗಿ ಜರುಗಿಸಲಾಯಿತು. ಶ್ರೀವಾಲ್ಮೀಕಿ ದೇವಸ್ಥಾನದಲ್ಲಿ ಶಾಸಕ ಡಾ”ಎನ್.ಟಿ.ಶ್ರೀನಿವಾಸ್ ರವರ ನೇತೃತ್ವದಲ್ಲಿ, ಶ್ರೀಮಹರ್ಷಿಗಳವರ ಭಾವಚಿತ್ರಕ್ಕೆ ಪೂಜೆ ನೆರವೇರಿಸಲಾಯಿತು. ಶ್ರೀವಾಲ್ಮೀಕಿ ಮಹರ್ಷಿಗಳ ಭಾವ ಚಿತ್ರ ಇರೋ ಮೆರವಣಿಗೆ, ಶ್ರೀರಾಮಲಿಂಗೇಶ್ವರ ದೇವಸ್ಥಾನದಿಂದ ಆರಂಭಗೊಂಡಿತು. ಶಾಸಕರ ನೇತೃತ್ವದಲ್ಲಿ ಪಟ್ಟಣದ ಪ್ರಮುಖ ರಸ್ಥೆಗಳ ಮೂಲಕ ಸಂಚರಿಸಿದ, ಮಹರ್ಷಿಗಳವರ ಭಾವ ಚಿತ್ರ ಇರೋ ಮೆರವಣಿಗೆ. ಪಟ್ಟಣದ ಚಂದ್ರಶೇಖರ ಆಜಾದ್ ರಂಗ ಮಂದಿರದಲ್ಲಿನ ವೇದಿಕೆ ಸೇರಿತು, ಮೆರವಣಿಗೆಯಲ್ಲಿ ಹತ್ತಾರು ಕಲಾ ತಂಡಗಳು ವಾಧ್ಯ ವೃಂಧಗಳು ಭಾಗಿಯಾಗಿದ್ದವು. ತಹಶಿಲ್ದಾರರಾದ ಎಮ್.ರೇಣುಕಮ್ಮ ತಾ ಪಂ ಇ ಓ ಸೇರಿದಂತೆ, ತಾಲೂಕು ಮಟ್ಟದ ವಿವಿದ ಇಲಾಖೆಗಳ ಅಧಿಕಾರಿಗಳು ಸಿಬ್ಬಂದಿ. ವಾಲ್ಮೀಕಿ ಸಮಾಜದ ಹಿರಿಯರು, ಯುವಕರು, ಮಕ್ಕಳು, ಮಹಿಳೆಯರು, ಪದಾಧಿಕಾರಿಗಳು, ಪಟ್ಟಣ ಪಂಚಾಯ್ತಿ ಅಧ್ಯಕ್ಷ ಕಾವಲ್ಲಿ ಶಿವಪ್ಪನಾಯಕ ಸೇರಿದಂತೆ. ವಿವಿದ ಜನಪ್ರತಿನಿಧಿಗಳು. ವಿವಿದ ಸಂಘಟನೆಗಳ ಪದಾಧಿಕಾರಿಗಳು ಸದಸ್ಯರು, ನಾಗರೀಕರು. ಪಟ್ಟಣ ಸೇರಿದಂತೆ ತಾಲೂಕಿನ ವಿವಿದೆಡೆಗಳಿಂದ ಆಗಮಿಸಿದ್ದ, ವಾಲ್ಮೀಕಿ ಸಮಾಜದ ಅಸಂಖ್ಯಾತ ಬಂಧುಗಳು. ಕಾರ್ಮಿಕರು ರೈತರು. ಕೂಲಿ ಕಾರ್ಮಿಕರು ಶ್ರೀವಾಲ್ಮೀಕಿ ಜಯಂತೋತ್ಸದಲ್ಲಿ, ಸಕ್ರೀಯವಾಗಿ ಭಾಗಿಯಾಗಿದ್ದರು….
ವರದಿ, ಎಂ, ಬಸವರಾಜ್ ಕಕ್ಕುಪ್ಪೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030