ಕೂಡ್ಲಿಗಿ:ದಸರಾ ಹಬ್ಬದ ಪ್ರಯುಕ್ತ ಬನ್ನಿ ಮುಡಿದ ಮಹಿಳೆಯರು -ವಿಜಯನಗರ ಜಿಲ್ಲೆ ಕೂಡ್ಲಿಗಿ: ವಿಜಯ ದಶಮಿ ಪ್ರಯುಕ್ತ ಪಟ್ಟಣದ ಮಹಿಳೆಯರು, ವಿಜಯ ದಶಮಿಯಂದು ಬನ್ನಿಮರಕ್ಕೆ ಪೂಜೆಗೈದು ಬನ್ನಿ ಮುಡಿದರು. ವಿಧಿವತ್ತಾಗಿ ಬನ್ನಿ ಮರಕ್ಕೆ ಪೂಜೆಗೈದು ಸ್ನೇಹಿತರಿಗೆ ಪರಿಚಿತರಿಗೆ, ನೆಂಟರು ಬಂಧು ಬಳಗ ಸಹೋದರ ಸಹೋದರಿಯರಿಗೆ ನೆರೆ ಹೊರೆಯವರಿಗೆ. ಬನ್ನಿ ಹಂಚಿ ಶುಭ ಹಾರೈಸಿದರು ಪರಸ್ಪರ ಬನ್ನಿ ಪತ್ರೆಯನ್ನು ವಿನಿಮಯ ಮಾಡಿಕೊಂಡು, ಹಿರಿಯರಿಗೆ ಸ್ನೇಹಿತರಿಗೆ ಶುಭ ಕೋರಿದರು ಮತ್ತು ಮಕ್ಕಳಿಗೆ ಕಿರಿಯರಿಗೆ ಶುಭ ಹಾರೈಸಿದರು. ಅಂದೇ ಹಲವು ಮನೆತನದವರು ತಮ್ಮ ಮನೆತದ ದಿವಂಗತ ಪೂರ್ವಜರನ್ನು ಸ್ಮರಿಸುವ, ಹಿರಿಯರ ಅತ್ಮಕ್ಕೆ ಗೌರವ ಸಮರ್ಪಣೆಗೈಯುವ, ಅವರನ್ನು ಸ್ಥುತಿಸುವ ಧಾರ್ಮಿಕ ಕೈಂಕರ್ಯ ಜರುಗಿಸಿದರು. ಪಟ್ಟಣದ ಬಹುತೇಕ ಕಡೆಗಳಲ್ಲಿನ ಮಹಿಳೆಯರು, ತಾವು ಗುಂಪು ಗುಂಪಾಗಿ ಗುರುತಿಸಿಕೊಳ್ಳುವ ಮನೋಭಾವದ ಸ್ನೇಹಿತೆಯರು. ಪರಸ್ಪರ ಒಂದೇ ಭಗೆಯ ಉಡುಗೆ ತೊಡುಗೆಗಳನ್ನು ಧರಿಸಿಕೊಂಡು, ಫೋಟೋಗಳಿಗೆ ಫೋಸ್ ಕೊಡಿ ರೂಡಿ ಸಂಪ್ರದಾಯ ಇತ್ತೀಚೆಗೆ ತೀರಾ ಸಹಜವಾಗಿದೆ. ಅಂತೆಯೇ ಪಟ್ಟಣದ ಹಲವೆಡೆಗಳಲ್ಲಿನ ಮಹಿಳೆಯರು ದಸರಾ ಹಬ್ಬದ ಬನ್ನಿ ಪೂಜೆಯ ಸಂದರ್ಭದಲ್ಲಿ, ಸಮಾನ ಮನಸ್ಕ ಸಮಾನ ವಯಸ್ಕ ಮಹಿಳೆಯರು, ಒಂದೇ ಬಣ್ಣದ ಉಡುಗೆ ತೋಡುಗೆ ವಿಶೇಷವಾಗಿ ಒಂದೇ ಬಗೆಯ ಸೀರೆ ಕುಪ್ಪಸ ತೊಟ್ಟು. ತಾವು ಪೂಜಿಸುವ ಬನ್ನಿ ಮರಗಳ ಹತ್ತಿರ ದೇವಸ್ಥಾನಗಳ ಹತ್ತಿರ , ಹಾಗೂ ಸ್ನೇಹಿತರನ್ನು ಪರಸ್ಪರ ಭೇಟಿಯಾಗುವೆಡೆಗಳಲ್ಲಿ ಕಾಣಿಸಿಕೊಂಡು ವೈಶಿಷ್ಟ್ಯ ಮೆರೆದಿದ್ದಾರೆ ಅದ್ಧೂರಿಯಾಗಿ ಹಬ್ಬ ಆಚರಿಸಿದ್ದಾರೆ.
ವರದಿ,ವಿ.ಜಿ.ವೃಷಭೇಂದ್ರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030