ಕೂಡ್ಲಿಗಿ:ಮನೆಗೆ ನುಗ್ಗಿದ ಮಳೆ ನೀರು, ಪಪಂ ಅಧ್ಯಕ್ಷ ಕಾವಲ್ಲಿ ಶಿವಪ್ಪನಾಯಕ ಭೇಟಿ- ವಿಜಯನಗರ ಜಿಲ್ಲೆ ಕೂಡ್ಲಿಗಿ: ಕೆಲ ದಿನಗಳಿಂದ ಸುರಿದ ಮಳೆಯಿಂದಾಗಿ, ಪಟ್ಟಣ ಕೆಲವೆಡೆಗಳಲ್ಲಿ ಮಳೆ ನೀರು ಮನೆಗಳಿಗೆ ನುಗ್ಗಿರುವ ಸನ್ನಿವೇಶ ಸೃಷ್ಠಿಯಾಗಿದೆ. ಕೊಟ್ಟೂರು ರಸ್ಥೆಯ ಹಳ್ಳದ ದಂಡೆಗೆ ಹೊಂದಿಕೊಂಡಿರುವ ಮನೆಗಳಿಗೆ, ಮಳೆ ನೀರು ನುಗ್ಗಿ ಅವಾಂತರ ಸೃಸ್ಠಿಯಾಗಿತ್ತು. ರಾಜೀವ ಗಾಂಧೀನಗರದಲ್ಲಿನ ಜಿಂಕಲ್ ನಾಗೇಶರವರ ಮನೆಗೆ, ಮಳೆ ನೀರು ನುಗ್ಗಿ ಸಾಮಾಗ್ರಿಗಳು ನೀರುಪಾಲಾಗಿದ್ದವು. ಕೊಟ್ಟೂರು ರಸ್ಥೆಯಲ್ಲಿನ ಹಳ್ಳದ ಏರಿ ಮೇಲೆ ನಿರ್ಮಿತವಾದ ಮನೆಯೊಂದಕ್ಕೆ ನೀರು ನುಗ್ಗಿ, ಮನೆಯಲ್ಲಿನ ಸಾಮಾನು ಸಾಮಾಗ್ರಿಗಳು ನೀರಲ್ಲಿ ನೆಂದು ನೆಲೆಯೂರಿದ್ದವರ ನಿದ್ರೆಕೆಡಿಸಿತ್ತು. ಪಪಂ ಅಧ್ಯಕ್ಷ ಕಾವಲ್ಲಿ ಶಿವಪ್ಪನಾಯಕ ಭೆಟಿ ನೀಡಿ ಪರಿಶೀಲಿಸಿ, ಹಳ್ಳದಲ್ಲಿ ನಿಂತ ನೀರು ಸರಾಗವಾಗಿ ಹರಿಯುವಂತೆ ಅಗತ್ಯ ಕ್ರಮ ಜರುಗಿಸಿದ್ದಾರೆ. ಮತ್ತು ಅಲ್ಲಿ ವಾಸವಿದ್ಫವರನ್ನು ಸುರಕ್ಷಿತ ಸ್ಟಳಕ್ಕೆ ಸ್ಥಳಾಂತಗೊಳ್ಳುವಂತೆ ಸೂಚಿಸಿ, ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುವಂತೆ ತಿಳಿ ಹೇಳಿದ್ದಾರೆ. ಪಟ್ಟಣ ಪಂಚಾಯ್ತಿ ಸದಸ್ಯರಾದ ತಳಾಸ ವೆಂಕಟೇಶಪ್ಪ, ಹಾಗೂ ವಾರ್ಡಿನ ಹರಿಯರು ನಾಗರೀಕರು ಉಪಸ್ಥಿತರಿದ್ದರು. ಪಟ್ಟಣ ಪಂಚಾಯ್ತಿ ಪೌರಸೇವಾ ನೌಕರರ, ಮೇಸ್ತ್ರೀ ಹೆಚ್.ಪರಶುರಾಮ ಸೇರಿದಂತೆ ಸಿಬ್ಬಂದಿ ಹಾಜರಿದ್ದರು…
ವರದಿ. ಎಂ, ಬಸವರಾಜ್, ಕಕ್ಕುಪ್ಪೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030