ಕೂಡ್ಲಿಗಿ:”ಅಗ್ನಿ ಸ್ಪರ್ಶ” ಸಮುದಾಯಗಳ ರುದ್ರ ಭೂಮಿಗೆ ಕಾಯಕಲ್ಪ-ವಿಜಯನಗರ ಜಿಲ್ಲೆ ಕೂಡ್ಲಿಗಿ: ಪಟ್ಟಣದಲ್ಲಿ “ಅಗ್ನಿಸ್ಪರ್ಶ” ಮಾಡುವ ಸಮುದಾಯಗಳಾದ, ಬ್ರಾಹ್ಮಣ, ವ್ಯೈಶ್ಯ, ವಿಶ್ವಕರ್ಮ, ಭಾವಸಾರ ಜನಾಂಗ, ಸೇರಿದಂತೆ. “ಅಗ್ನಿಸ್ಪರ್ಶ” ಮಾಡಿ ಅಂತ್ಯಕ್ರಿಯೆ ಮಾಡುವ, ಹತ್ತು ಹಲವು ಸಮುದಾಯಗಳ ಮುಖಂಡರ ಒತ್ತಾಸೆಯ ಮೇರೆಗೆ. ಶಾಸಕರಾದ ಡಾ”ಎನ್.ಟಿ.ಶ್ರೀನಿವಾಸ್ ರವರ ಸೂಚನೆಯಂತೆ, ಪಟ್ಟಣ ಪಂಚಾಯ್ತಿ ಅಧ್ಯಕ್ಷ ಕಾವಲ್ಲಿ ಶಿವಪ್ಪನಾಯಕರವರ ನೇತೃತ್ವದಲ್ಲಿ.
ಪಟ್ಟಣ ಪಂಚಾಯ್ತಿ ಯಿಂದ, ಈಗಾಗಲೇ ಅಂತ್ಯಕ್ರಿಯೆಗೆ ನಿಗಧಿಗೊಳಿಸಲಾಗಿರುವ ಭೂಮಿಯನ್ನು, ಪಟ್ಟಣ ಪಂಚಾಯ್ತಿ ವತಿಯಿಂದ ಸುಸಜ್ಜಿತಗೊಳಿಸಿ, ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸುವ ಕಾಯಕಲ್ಪಕ್ಕೆ ಚಾಲನೆ ನೀಡಲಾಯಿತು. ಇತ್ತೀಚೆಗೆ ಸಮುದಾಯಗಳ ಮುಖಂಡರು, ಶಾಸಕರಾದ ಡಾ”ಎನ್.ಟಿ.ಶ್ರೀನಿವಾಸ್ ರವರನ್ನು. ಭೇಟಿಯಾಗಿ ತಮ್ಮ ಸಮುದಾಯಗಳಿಗೆ ಸುಸಜ್ಜಿತ ರುದ್ರಭೂಮಿ ಕಲ್ಪಿಸಬೇಕು, ಮತ್ತು ಅಲ್ಲಿ ಮೂಲಭೂತ ಸೌಕರ್ಯ ಗಳನ್ನು ಕಲ್ಪಿಸಿಕೊಡಬೇಕು ಎಂದು ತಮ್ಮ ಹಕ್ಕೊತ್ತಾಯ ಮಾಡಿದ್ದರು. ಅವರ ಹಕ್ಕೊತ್ತಾಯಕ್ಕೆ ಮನ್ನಣೆ ನೀಡಿದ ಶಾಸಕರು, ತಕ್ಷಣವೇ ಪಟ್ಟಣ ಪಂಚಾಯತಿ
ಅಧ್ಯಕ್ಷರು ಹಾಗೂ ಮುಖಾಧಿಕಾರಿಗಳಿಗೆ ದೂರವಾಣಿ ಮೂಲಕ ಸಂಪರ್ಕಿಸಿ. ರುದ್ರಭೂಮಿ ಯನ್ನು ಸುಸಜ್ಜಿತಗೊಳಿಸಿ, ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು. ಅಭಿವೃದ್ಧಿಗೆ ಕ್ರಿಯಾಯೋಜನೆ ಸಿದ್ಧಪಡಿಸಲು ಸೂಚಿಸಿದ್ದರಿಂದಾಗಿ.
ಪಪಂ ಅಧ್ಯಕ್ಷ ಕಾವಲ್ಲಿ ಶಿವಪ್ಪನಾಯಕ ಹಾಗೂ ಪಪಂ ಸದಸ್ಯ ಸಿರಿಬಿ ಮಂಜುನಾಥ, ಹಾಗೂ ಪಪಂ ಮುಖ್ಯಾಧಿಕಾರಿ ಎಮ್.ಕೆ.ಮುಗಳೆ, ಇಂಜಿನಿಯರ್ ರಾಮಚಂದ್ರಪ್ಪ ರವರನ್ನೊಳಗೊಂಡ ತಂಡವು. ಪ್ರಮುಖ ಅಗ್ನಿ ಸ್ಪರ್ಶ ಸಮುದಾಯಗಳ ಮುಖಂಡರ ಉಪಸ್ಥಿತಿಯಲ್ಲಿ, ಪಟ್ಟಣದ ಹೊರವಲಯದ ಬಂಡೆ ಬಸಾಪುರ ರಸ್ತೆಯಲ್ಲಿರುವ, ರುದ್ರಭೂಮಿಗೆ ನಿಗಧಿಗೊಳಿಸಿರುವ ಸ್ಥಳಕ್ಕೆ ಭೇಟಿ ಕೊಟ್ಟು, ಗಿಡಗಂಟಿ ಗಳನ್ನು ವಿಲೇವಾರಿ ಮಾಡಿ ಸುಸಜ್ಜಿತಗೊಳಿಸಲು ಚಾಲನೆ ನೀಡಲಾಯಿತು. ಹಲವು ಅಗತ್ಯ ಬೇಡಿಕೆಗಳ ಪಟ್ಟಿ ಮಾಡಿ, ಶಾಸಕರಿಗೆ ಕ್ರಿಯಾ ಯೋಜನೆ ಪಟ್ಟಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ವೈಶ್ಯ ಸಮುದಾಯದ ಹಿರಿಯರಾದ ಆನಂದ ಬಾಬುಶೆಟ್ಟಿ, ಬ್ರಾಹ್ಮಣ ಸಮುದಾಯದ
ವಿರೂಪಾಕ್ಷ ಮೂರ್ತಿ, ಭಾವ ಸಾರ ಕ್ಷತ್ರಿಯ ಸಮುದಾಯದ ಜೆಬಿ ಹೋಟೆಲ್ ರಾಮು ಕಾಟುವ, ಮಿಸ್ಕಿನ್ ಫೋಟೋಸ್ಟುಡಿಯೋದ ಸಂತೋಷ ಮಿಸ್ಕಿನ್, ಸೇರಿದಂತೆ ಜಿ.ಕೆ.ವೇಣುಗೋಪಾಲ, ಸಂದೀಪ ರಾಯಸಂ, ಪ್ರಹ್ಲಾದ್ ಶೆಟ್ಟಿ, ಗಂಟಿ ಮುರುಳೀಧರ ಶೆಟ್ಟಿ ಹಾಗೂ ಅವರ ಸಹೋದರರು. ಮುರಳಿ ಪವಾರ್, ಎನ್.ಜಿ.ವಿಜಯ, ಪ್ರಕಾಶ, ಆಡಿಟರ್ ಶ್ರೀನಿವಾಸ್ ಶೆಟ್ಟಿ, ಪೂಜಾರಿ ಬಡಿಗೇರ ನಾಗರಾಜ್ ಇನ್ನು ಮುಂತಾದವರು ಉಪಸ್ಥಿತರಿದ್ದರು. ಪಪಂ ಪೌರಕಾರ್ಮಿಕರ ಮುಖ್ಯಸ್ಥ ಪರಶುರಾಮ ಹಾಜರಿದ್ದರು.
ವರದಿ, ಎಂ, ಬಸವರಾಜ್, ಕಕ್ಕುಪ್ಪೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030