ನವರಾತ್ರಿ ನಾಡಹಬ್ಬದಲ್ಲಿ ಪೂಜೆ ನೆರವೇರಿಸಿ ಸಮೃದ್ಧಿ ಮತ್ತು ಶಾಂತಿಯಿಂದ ನೆಲೆಸುವಂತೆ ಪ್ರಾರ್ಥಿಸಿದ – ಶಾಸಕ ಡಾ. ಶ್ರೀನಿವಾಸ್. ಎನ್. ಟಿ
ಕೂಡ್ಲಿಗಿ ಪಟ್ಟಣದ ಊರಮ್ಮ ದೇವಿ ಹೊಂಡದ ಹಿಂಬಾಗದಲ್ಲಿ ಶ್ರೀ ಬನ್ನಿ ಮಹಕಾಳಿ ಟ್ರಸ್ಟ್ ಆಶ್ರಯದಲ್ಲಿ ನವರಾತ್ರಿಯ ನಾಡಹಬ್ಬದ ಪ್ರಯುಕ್ತ ಶ್ರೀ ದೇವಿ ಪುರಾಣ ಪ್ರವಚನ ಕಾರ್ಯಕ್ರಮದಲ್ಲಿ ದಿ; 07-10-2024 ರಂದು ಮಾನ್ಯಶಾಸಕರಾದ ಡಾ. ಶ್ರೀನಿವಾಸ್. ಎನ್. ಟಿ.ಅವರು ಇಲ್ಲಿನ ಮಹಿಳೆಯರು, ಹಿರಿಯರು, ಮಕ್ಕಳೊಂದಿಗೆ ಪಾಲ್ಗೊಂಡು ಭಕ್ತಿಯಿಂದ ಬನ್ನಿ ಮರಕ್ಕೆ ಪೂಜೆ ಸಲ್ಲಿಸಿದರು. ಶಾಸಕರು ಮಾತನಾಡುತ್ತಾ, ಈ ಶುಭ ಸಂಜೆಯಲ್ಲಿ ನವರಾತ್ರಿ ಪ್ರಯುಕ್ತ ಪೂಜಾ ವಿಧಿ ನೆರವೇರಿಸಿದ ಬಳಿಕ ಕಥೆ, ಮಂತ್ರ, ಎಲ್ಲದರ ಬಗ್ಗೆ ತಿಳಿಯುವಂತದ್ದು ಖುಷಿ ತಂದಿದೆ. ಈ ಹಿನ್ನೆಲೆಯಲ್ಲಿ ಭಕ್ತರು ಸಮೃದ್ಧಿ ಮತ್ತು ಶಾಂತಿಯನ್ನು ಪಡೆಯಬೇಕು ಎಂದೂ ಹೇಳಿದರು. ಸ್ಥಳೀಯ ಮಟ್ಟದಲ್ಲಿ ಕುಂದುಕೊರತೆಗಳನ್ನು ಆಲಿಸಿದ ಶಾಸಕರು ಬಗೆಹರಿಸುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಪ. ಪಂ. ಸದಸ್ಯರಾದ ಈಶಣ್ಣ, ಶ್ರೀ ಬನ್ನಿ ಮಹಕಾಳಿ ಟ್ಟಸ್ಟ್ ನ ಮಹಿಳಾ ಸದಸ್ಯರಾದ ಜ್ಯೋತಿ, ಮಂಜಮ್ಮ, ಸುಮಾ, ಪಾಲಮ್ಮ ಮತ್ತು ಇನ್ನಿತರ ಸದಸ್ಯರು, ಪುರಾಣ ಪಠಣಕಾರರಾದ ಶ್ರೀಯುತ ಪಂಪಣ್ಣ ಮತ್ತು ಅವರ ತಂಡದ ಸದಸ್ಯರು, ಮುಖ್ಯ ಶಿಕ್ಷಕರಾದ ಈಶ್ವರಪ್ಪ, ಮುಖಂಡರಾದ ಕಡ್ಡಿ ಮಂಜಣ್ಣ ಇನ್ನೂ ಮುಂತಾದವರು ಉಪಸ್ಥಿತರಿದ್ದರು…
ವರದಿ. ಎಂ, ಬಸವರಾಜ್, ಕಕ್ಕುಪ್ಪೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030