ಕೂಡ್ಲಿಗಿ:ಮಹಾರ್ಷಿ ಶ್ರೀವಾಲ್ಮೀಕಿ ಜಯಂತಿ ಪೂರ್ವ ಭಾವಿ ಸಭೆ ಶಾಸಕ ಡಾ”ಎನ್.ಟಿ.ಶ್ರೀನಿವಾಸ್ ಭಾಗಿ…!!!

ಕೂಡ್ಲಿಗಿ:ಮಹಾರ್ಷಿ ಶ್ರೀವಾಲ್ಮೀಕಿ ಜಯಂತಿ ಪೂರ್ವ ಭಾವಿ ಸಭೆ ಶಾಸಕ ಡಾ”ಎನ್.ಟಿ.ಶ್ರೀನಿವಾಸ್ ಭಾಗಿ- ವಿಜಯನಗರ ಜಿಲ್ಲೆ ಕೂಡ್ಲಿಗಿ: ಅಕ್ಟೋಬರ್‌ 17 ಸೀಗೆ ಹುಣ್ಣಿಮೆ ಮಯಂದು, ಮಹಾರ್ಷಿ ವಾಲ್ಮೀಕಿ ಜಯಂತಿ ಆಚರಿಸುವ ಪ್ರಯುಕ್ತ. ಪಟ್ಟಣದ ಪ್ರವಾಸಿ ಮಂದಿರದಲ್ಲಿ, ಅಕ್ಟೋಬರ್‌ 7ರಂದು ಶಾಸಕರಾದ ಡಾ”ಎನ್.ಟಿ.ಶ್ರೀನಿವಾಸ್ ರವರ ಅಧ್ಯಕ್ಷತೆಯಲ್ಲಿ ಪೂರ್ವ ಭಾವಿ ಸಭೆ ಜರುಗಿತು.
ಸಭೆಯ ವೇದಿಕೆಯಲ್ಲಿ ತಹಶಿಲ್ದಾರರಾದ ಎಮ್.ರೇಣುಕಮ್ಮ, ತಾಪಂ ಕಾರ್ಯನಿರ್ವಹಣಾಧಿಕಾರಿ, ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ, ಸಿಪಿಐ ಸುರೇಶ ತಳವಾರ, ಪಟ್ಟಣ ಪಂಚಾಯ್ತಿ ಅಧ್ಯಕ್ಷ ಕಾವಲ್ಲಿ ಶಿವಪ್ಪನಾಯಕ, ಸ್ಥಾಯಿ ಸಮಿತಿ ಅಧ್ಯಕ್ಷ ಸಯ್ಯದ್ ಶುಕೂರ್ ಅಹಮದ್ ಸೇರಿದಂತೆ ಸರ್ವ ಸದಸ್ಯರು. ವಿವಿದ ಜನ ಪ್ರತಿನಿಧಿಗಳು ವಾಲ್ಮೀಕಿ ಯುವ ಮುಖಂಡ ಸುರೇಶ, ಮಹಿಳಾ ಮುಖಂಡರಾದ ಜಿಂಕಲ್ ನಾಗಮಣಿ, ಸಮುದಾಯದ ಮುಖಂಡರು. ವಾಲ್ಮೀಕಿ ಸಮುದಾಯದ ವಿವಿದ ಸಂಘಟನೆಗಳ ಮುಖಂಡರು ಅಸೀನರಾಗಿದ್ದರು.
ತಾಲೂಕಾಡಳಿತ ಹಾಗೂ ವಾಲ್ಮೀಕಿ ಸಮುದಾಯ ಸಹಯೋಗದೊಂದಿಗೆ, ಶ್ರೀಮಹರ್ಷಿ ವಾಲ್ಮೀಕಿ ಜಯಂತಿಯನ್ನು. ಬಹು ಅರ್ಥಪೂರ್ಣವಾಗಿ, ಬಹು ಅದ್ಧೂರಿಯಾಗಿ ಆಚರಿಸಲು ಸಭೆಯಲ್ಲಿ ನಿರ್ಧರಿಸಲಾಯಿತು. ಸೀಗೆ ಹುಣ್ಣಿಮೆಯಂದು ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯನ್ನು, ತಾಲೂಕಾಡಳಿತದ ನೇತೃತ್ವದಲ್ಲಿ. ವಾಲ್ಮೀಕಿ ಸಮುದಾಯ ಮತ್ತು ವಾಲ್ಮೀಕಿ ಸಂಘಟನೆಗಳು, ಹಾಗೂ ವಿವಿದ ಸಮುದಾಯ ಸಹಯೋಗದೊಂದಿಗೆ. ಬೃಹತ್ ಕಾರ್ಯಕ್ರಮ ಆಯೋಜಿಸುವ ನಿಟ್ಟಿನಲ್ಲಿ, ಪೂರ್ವಭಾವಿಯಾಗಿ ಸಕಲ ಸಿದ್ಧತೆಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಪಟ್ಟಣ ಸೇರಿದಂತೆ ತಾಲೂಕಿನೆಲ್ಲೆಡೆಗಳಿಂದ ಆಗಮಿಸಿದ್ದ, ವಾಲ್ಮೀಕಿ ಸಮುದಾಯದ ಮುಖಂಡರು. ವಾಲ್ಮೀಕಿ ಸಮುದಾಯದ ಸಂಘಟನೆಗಳು, ಹಾಗೂ ವಿವಿದ ಸಂಘಟನೆಗಳ ಪದಾಧಿಕಾರಿಗಳು. ಜನಪರ ಹೋರಾಟಗಾರರು ಕಾರ್ಮಿಕ ರೈತರ, ಮಹಿಳೆಯರ ಸಂಘಟನೆಗಳ ಪ್ರಮುಖರು. ಪತ್ರಕರ್ತರು, ತಾಲೂಕು ಮಟ್ಟದ ವಿವಿದ ಇಲಾಖೆಗಳ ಅಧಿಕಾರಿಗಳು, ಹಾಗೂ ಸಿಬ್ಬಂದಿಯವರು. ಹಿರಿಯನಾಗರೀಕರು, ನೌಕರರ ಸಂಘ ಹಾಗೂ ನಿವೃತ್ತ ನೌಕರರ ಸಂಘದವರು. ವಾಲ್ಮೀಕಿ ಸಮುದಾಯ ಸೇರಿದಂತೆ ವಿವಿದ ಸಮುದಾಯಗಳ ಗಣ್ಯರು, ವಿವಿದ ಪಕ್ಷಗಳ ಪ್ರಮುಖರು, ಹಿರಿಯರು ಸಭೆಯಲ್ಲಿ ಭಾಗಿಯಾಗಿದ್ದರು…

ವರದಿ. ಎಂ. ಬಸವರಾಜ್, ಕಕ್ಕುಪ್ಪೆ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *