ಇಂದು ಮಾನ್ವಿ ಗೆ ಸಮಾವೇಶಕ್ಕೆ ಬಂದ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರನ್ನು ಕರ್ನಾಟಕ ರಾಜ್ಯ ರೈತ ಸಂಘ ದ ರಾಜ್ಯ ಗೌರವ ಅಧ್ಯಕ್ಷರಾದ ಶ್ರೀ ಚಾಮರಸ ಮಾಲಿ ಪಾಟೀಲ್ ಅವರ ನಿಯೋಗವು ಮಾನ್ವಿಯ ಪ್ರವಾಸಿ ಮಂದಿರದಲ್ಲಿ ಬೇಟಿಯಾಗಿ ತುಂಗಭದ್ರಾ ಎಡದಂಡೆ ಕಾಲುವೆಯ ಮೇಲೆ ನಡೆಯುವ ಅಕ್ರಮ ನೀರಾವರಿಯನ್ನು ತಡೆಯಬೇಕು ಅದೇ ರೀತಿ ನೀರಾವರಿ ಇಲಾಖೆಯ ಸಿಬ್ಬಂದಿ ಕೊರತೆಯನ್ನು ನೀಗಿಸಬೇಕು ಮೈಲ್ 69 ರ ಗೇಜ್ ನಿವಾ೯ಹಣೆ ಸರಿದೂಗಿಸಬೇಕು ಅದೇ ರೀತಿ ನಾರಾಯಣಪುರ ಬಲದಂಡೆ ನಾಲೆಯ ವ್ಯಾಪ್ತಿಯಲ್ಲಿ ಬರುವ 18 ಉಪ ಕಾಲುವೆಗಳ ಆಧುನಿಕರಣ ಕಳಪೆ ಕಾಮಗಾರಿ ಮತ್ತು ನಾರಾಯಣಪುರ ಎಡದಂಡೆ ನಾಲೆಯ ಬಗ್ಗೆ ಸುದೀರ್ಘವಾಗಿ ಚಚಿ೯ಸಿ ಮನವಿ ಪತ್ರ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಚಾಮರಸ ಮಾಲಿ ಪಾಟೀಲ್ ಬಸನಗೌಡ ಬಲ್ಲಟಗಿ ಸೂಗುರಯ್ಯ ಅರ್ ಎಸ್ ಮಠ ಪ್ರಭಾಕರ ಪಾಟೀಲ್ ಯುಂಕಪ್ಪ ಕಾರಬಾರಿ ಲಿಂಗಾರಡ್ಡಿ ಪಾಟೀಲ್ ಬೂದಯ್ಯ ಸ್ವಾಮಿ ಮಲ್ಲಣ್ಣ ಹಾಜಿ ಮಸ್ತಾನ್ ಹಾಗೂ ಅನೇಕ ಕಾಯ೯ಕತ೯ರಿದ್ದರು…
ವರದಿ. ಎಂ. ಬಸವರಾಜ್ ಕಕ್ಕುಪ್ಪೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030