ಬಡವರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಿದಾಗ ಸಹಕಾರ ಕ್ಷೇತ್ರದಲ್ಲಿ ಬದಲಾವಣೆ ತರಲು ಸಾಧ್ಯ – ಸಹಕಾರ ಸಚಿವ ಕೆ. ಎನ್. ರಾಜಣ್ಣ
ಬಳ್ಳಾರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ವತಿಯಿಂದ ವಿಜಯ ನಗರ ಜಿಲ್ಲೆಯ ಹೊಸಪೇಟೆ ನಗರ ಕೇಂದ್ರ ಕಛೇರಿಯಲ್ಲಿ ದಿ ; 05-10-2024 ರಂದು ತುಂಗಭದ್ರಾ ರೈತರ ಕ್ಷೇಮಾಭಿವೃದ್ಧಿ ಸಂಘ, ಬ್ಯಾಂಕಿನ – ಇಲಾಖಾಧಿಕಾರಿಗಳ ಸಭೆ, ಅಮರಾವತಿಯ ವಿವಿದೊದ್ದೇಶ ಪ್ರಾಥಮಿಕ ಗ್ರಾಮೀಣ ಸಹಕಾರ ಸಂಘಗಳ ಸಭೆ, ಜಿಲ್ಲಾಧಿಕಾರಿಗಳ ಸಭೆಯನ್ನು ಒಳಗೊಂಡಂತೆ ಸನ್ಮಾನ್ಯ ಸಹಕಾರ ಸಚಿವರಾದ ಶ್ರೀಯುತ ಕೆ. ಎನ್. ರಾಜಣ್ಣ ನವರು ಶಾಸಕರು, ಅಧಿಕಾರಿಗಳು, ಅಧ್ಯಕ್ಷರು, ನಿರ್ದೇಶಕರೊಂದಿಗೆ ಪ್ರಗತಿ ಪರಿಶೀಲನಾ ಸಭೆಯನ್ನು ಉದ್ಘಾಟಿಸಿದರು..
ಮಾನ್ಯ ಸಚಿವರು ಮಾತನಾಡುತ್ತಾ, ಮನುಷ್ಯ ಹುಟ್ಟಿದಾಗಿನಿಂದಲೂ ಸಹಕಾರ ಇದೆ. ಬಡವರು, ಕಡುಬಡವರಿಗೆ ನೆರವಾದಾಗ ಸಹಕಾರ ಬ್ಯಾಂಕುಗಳ ಮೇಲೆ ವಿಶ್ವಾಸ – ನಂಬಿಕೆ ಬರುತ್ತದೆ. ಪ್ರಾಮಾಣಿಕತೆ ಇದ್ದರೇ ಸಹಕಾರ ಸಂಸ್ಥೆಗಳು ಬೆಳೆಯುತ್ತವೆ, ಅಪ್ರಮಾಣಿಕತೆ ಇದ್ದರೇ ಸಂಸ್ಥೆಗಳು ಬೆಳೆಯುವುದಿಲ್ಲ.ಕಷ್ಟದಲ್ಲಿ ಇರುವವರು ವಿದ್ಯಾಭ್ಯಾಸ ಮಾಡುವಂತವರಿಗೆ ಅಂತಹವರಿಗೆ ಆರ್ಥಿಕವಾಗಿ ತೊಂದರೆಯಾಗದಂತೆ ಸಹಕಾರ ಬ್ಯಾಂಕ್ ಗಳು ಸಹಾಯ ಮಾಡಿ ಪ್ರೋತ್ಸಾಹ ಕೊಡಬೇಕು. ಆ ಹಿನ್ನೆಲೆಯಲ್ಲಿ ಸಹಕಾರ ಸಂಸ್ಥೆಗಳನ್ನು ಉಳಿಸಿಕೊಳ್ಳುವಲ್ಲಿ ನಾವುಗಳು ಕೆಲಸ ಮಾಡಬೇಕು. ಪ್ರತಿಯೊಬ್ಬರೂ ಶ್ರಮ ಪಟ್ಟು ದುಡಿದಾಗ ಮಾತ್ರ ಸಹಕಾರ ಕ್ಷೇತ್ರದಲ್ಲಿ ಸಾಧನೆ ಮಾಡಲು ಸಾಧ್ಯವಾಗುತ್ತದೆ. ನಿಮ್ಮ ಸಂಸ್ಥೆಗಳು ಚೆನ್ನಾಗಿ ಬೆಳೆಯುತ್ತದೆ. ಒಟ್ಟಿನಲ್ಲಿ ನಿಮ್ಮ ಆರ್ಥಿಕ ಪ್ರಗತಿಯನ್ನು ಪರಿಶೀಲಿಸಿದಾಗ ಒಳ್ಳೆಯ ವಿಶ್ವಾಸ ಉಳಿಸಿಕೊಂಡಿದೆ. ಆ ನಿಟ್ಟಿನಲ್ಲಿ ತಮ್ಮನ್ನು ಅಭಿನಂದಿಸುತ್ತೇನೆ ಎಂದೂ ಹೇಳಿದರು.
ಈ ಸಂದರ್ಭದಲ್ಲಿ ಮಾನ್ಯ ಶಾಸಕರಾದ ಡಾ. ಶ್ರೀನಿವಾಸ್. ಎನ್. ಟಿ. ಶ್ರೀ ಎಚ್.ಆರ್. ಗವಿಯಪ್ಪ, ಶ್ರೀಮತಿ ಲತಾ ಮಲ್ಲಿಕಾರ್ಜುನ, ಶ್ರೀ ನಾರಾ ಭರತ್ ರೆಡ್ಡಿ , ರಾಜ್ಯ ಹಾಲು ಒಕ್ಕೂಟ ಅಧ್ಯಕ್ಷರು ಹಾಗೂ ಮಾಜಿ ಶಾಸಕರಾದ ಎಲ್. ಬಿ. ಭೀಮಾನಾಯ್ಕ್ , ಬಿ.ಡಿ. ಸಿ. ಸಿ. ಸಿ. ಅಧ್ಯಕ್ಷರಾದ ಶ್ರೀ ಕೆ. ಎಂ. ತಿಪ್ಪೇಸ್ವಾಮಿ, ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ಶ್ರೀ ಟಿ.ಎಸ್. ರವಿಕುಮಾರ್, ಡಾ. ಜಿ. ಉಮೇಶ ಸೂರಮ್ಮನಹಳ್ಳಿ, ಕೂಡ್ಲಿಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಗುರುಸಿದ್ದನಗೌಡ, ಕೂಡ್ಲಿಗಿ ಪಟ್ಟಣ ಪಂಚಾಯತಿ ಅಧ್ಯಕ್ಷರಾದ ಶ್ರೀ ಕಾವಲ್ಲಿ ಶಿವಪ್ಪ ನಾಯಕ, ಉಪಾಧ್ಯಕ್ಷರಾದ ಲೀಲಾವತಿ ಪ್ರಭಕರ್, ಸದಸ್ಯರಾದ ಪೂರಿಯಾ ನಾಯಕ್, ಮುಖಂಡರಾದ ಜಿಂಕಲ್ ನಾಗಮಣಿ, ತಮ್ಮಣ್ಣ ಎನ್. ವಿ, ಗುಂಡಮುಣುಗು ಮಂಜಣ್ಣ, ಮಲ್ಲಿಕಾರ್ಜುನ ಗೌಡ, ಪಸಲು ಪಾಲಯ್ಯ ಇನ್ನೂ ಮುಂತಾದವರು ಉಪಸ್ಥಿತರಿದ್ದರು…
ವರದಿ. ಎಂ. ಬಸವರಾಜ್ ಕಕ್ಕುಪ್ಪೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030